ತಿಕೋಟಾ: ತಾಲೂಕು ವ್ಯಾಪ್ತಿಯ ಬಾಬಾನಗರ ಗ್ರಾಮದ ಸರಕಾರಿ ಗಂಡು ಮಕ್ಕಳ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶೇಠ ತಾಪಿದಾಸ ತುಳಸಿದಾಸ ವಜ್ರದಾಸ್ ಚಾರಿಟೇಬಲ್ ಟ್ರಸ್ಟ್ ಮುಂಬಯಿ ಇವರು ಕೊಡಮಾಡಿದ ಸ್ಮಾರ್ಟಬೋರ್ಡ್ ಉದ್ಘಾಟನಾ ಸಮಾರಂಭ ಜರುಗಿತು.
ವಿಶ್ವನಾಥ ಸಿಂದಗಿ ಅವರು ಸ್ಮಾರ್ಟಬೋರ್ಡ್ ಉದ್ಘಾಟನೆ ಮಾಡಿ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳು ನಗರ ಪ್ರದೇಶದ ಮಕ್ಕಳ ಹಾಗೇ ಅತ್ಯುತ್ತಮ ಶಿಕ್ಷಣ ಪಡೆಯಲು ಸ್ಮಾರ್ಟಬೋರ್ಡ್ ದೇಣಿಗೆಯಾಗಿ ನೀಡಿರುವುದು ಶ್ಲಾಘನೀಯ ಕಾರ್ಯ. ಇದರ ಸದುಪಯೋಗವನ್ನು ಸರಿಯಾಗಿ ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಶಾಲೆಯ ಮುಖ್ಯ ಗುರು ಎಸ್.ಐ.ಬಾಗಲಕೋಟೆ ಅವರು ಪ್ರಸ್ತಾವಿಕವಾಗಿ ಮಾತನಾಡಿದರು, ಎ.ಎಮ್.ಚಮಕೇರಿ ಶಿಕ್ಷಕರು ಗೌರವ ಸಮರ್ಪಣೆ ನಡೆಸಿಕೊಟ್ಟರು, ಜೆ.ಎನ್.ಬಾಗಲಕೋಟೆ ಅವರು ವಂದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷ ಸಾಹಿರಾಬಾನು ಏಳಾಪುರ ಅವರು ವಹಿಸಿಕೊಂಡಿದ್ದರು.
ವೇದಿಕೆಯ ಮೇಲೆ ಎಸ್.ಐ ರುದ್ರಗೌಡರ, ಎಸ್.ಬಿ.ಬಿರಾದಾರ, ಬಿ.ಎಸ್.ಕುಮಟಗಿ, ಸೇರಿದಂತೆ ಎಸ್.ಡಿ.ಎಂ.ಸಿ & ಗ್ರಾಮ ಪಂಚಾಯತಿ ಸದಸ್ಯರು, ಶಾಲಾ ಶಿಕ್ಷಕರು, ಮಕ್ಕಳು ಹಾಜರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

