ವಿಜಯಪುರ: ಸಣ್ಣ ಮಕ್ಕಳಲ್ಲಿ ಹೆಚ್ಚುತ್ತಿರುವ ಕಣ್ಣಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಶಂಕರ ಕಣ್ಣಿನ ಆಸ್ಪತ್ರೆ ಮತ್ತು ಟೈಟಾನ ಕಂಪನಿಯು ದೃಷ್ಟಿ ದೋಷವುಳ್ಳ ಶಾಲಾ ಮಕ್ಕಳಿಗೆ “ನನ್ನಕಣ್ಣು” ಯೋಜನೆಯಡಿಯಲ್ಲಿ ಉಚಿತವಾಗಿ ಕನ್ನಡಕ ನೀಡಲು ಮುಂದಾಗಿದೆ . ಈ ಸೌಲಭ್ಯವನ್ನು ದೃಷ್ಟಿದೋಷ ಸವಾಲುಗಳುಳ್ಳ ಮಕ್ಕಳು ಇದರ ಸದೋಪಯೋಗ ಪಡೆದುಕೊಳ್ಳಬೇಕು ಎಂದು ಶಂಕರ ಆಸ್ಪತ್ರೆಯ ಆರ್.ಎಚ್.ಕಟಕದೊಂಡ ಹೇಳಿದರು.
ಶುಕ್ರವಾರದಂದು ಕಳೆದ ವಾರದ ಹಿಂದೆ ವಿದ್ಯಾರ್ಥಿಗಳಿಗೆ ಉಚಿತ ನೇತ್ರತಪಾಸಣೆ ನಡೆಸಲಾಗಿತ್ತು. ಈ ಪೈಕಿ ದೃಷ್ಟಿದೋಷ ಕಾಣಿಸಿಕೊಂಡ ಶಾಲೆಯ ೧೫ ವಿದ್ಯಾರ್ಥಿಗಳಿಗೆ ನಮ್ಮ ಸಂಸ್ಥೆಯಿಂದ ಕನ್ನಡಕ ವಿತರಣೆ ಮಾಡಲಾಯಿತು ಎಂದರು. ಮಾನವನ ಅಂಗಗಳಲ್ಲಿ ಕಣ್ಣು ಬಹಳ ಪ್ರಮುಖವಾದದ್ದು. ಕಣ್ಣಿನ ಆರೋಗ್ಯ ಕಾಯ್ದುಕೊಳ್ಳುವುದು ಅವಶ್ಯಕ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರು ಇ.ಡಿ.ಲಮಾಣಿ ಮಾತನಾಡುತ್ತ, ಕಣ್ಣು ಮನುಷ್ಯನಿಗೆ ಅತ್ಯಮೂಲ್ಯ. ಕಣ್ಣು ಕಳೆದುಕೊಂಡರೆ ಜಗತ್ತೇ ಕತ್ತಲು ಮಯವಾಗುತ್ತದೆ. ಮಕ್ಕಳು ಮೊಬೈಲ್, ಟಿವಿಯನ್ನು ಅತೀ ಸಮೀಪದಿಂದ ವೀಕ್ಷಿಸುವುದರಿಂದ ಕಣ್ಣಿಗೆ ತೊಂದರೆ ಆಗುವ ಸಾಧ್ಯತೆ ಇರುತ್ತದೆ ಎಂದರು.
ಈ ವೇಳೆ ಶಾಲೆಯ ಶಂಕರ ಆಸ್ಪತ್ರೆ ಸಿಬ್ಬಂದಿ ಅವಿನಾಶ.ಕೆ, ಶಾಲೆಯ ಶಿಕ್ಷಕರುಗಳಾದ ಎಸ್.ವಿ.ದೇಶಪಾಂಡೆ, ಎ.ಎಂ.ನಾಗೊಂಡ, ಎಸ್.ಬಿ.ಒಡೆಯರ, ಆರ್.ಎನ್.ಬಕಾಟೆ, ಜೆ.ಕೆ.ರಾಠೋಡ, ಎಸ್.ಡಿ.ಚವ್ಹಾಣ್, ಆರ್.ವಿ.ಭುಜಂಗನವರ, ಎಸ್.ಕೆ.ಶಿಂಧೆ, ಎಸ್.ಎಂ.ಮಾಳಿ, ಬಿ.ಎಸ್.ದ್ಯಾಬೇರಿ, ಆರ್.ಎಸ್.ಹಿರೇಮಠ, ಪಿ.ಎಂ.ಕೌಲಗಿ, ರೇಖಾರಜಪೂತ, ಎಸ್.ಪಿ.ಧಡೇಕರ, ಎಸ್.ಎಲ್.ದೊಡಮನಿ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
ಬಂಜಾರಾ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಕನ್ನಡಕ ವಿತರಣೆ
Related Posts
Add A Comment

