Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಚಿಮ್ಮಡ: ಗ್ರಾಮದ ಐತಿಹಾಸಿಕ ಕಿಚಡಿ ಜಾತ್ರೆಯನ್ನು ಯಾವುದೇ ಅಡಚನೆಯಾಗದಂತೆ ನಿರ್ವಹಿಸಲು ಇಲ್ಲಿನ ಯುವ ಸೇವಕರ ಹಲವು ಸಮೀತಿಗಳನ್ನು ರಚಿಸಲು ಸೋಮವಾರ ನಡೆದ ಸೇವಕರ ಸಭೆಯಲ್ಲಿ ತೀರ್ಮಾನಿಸಲಾಯಿತು.ಸ್ಥಳಿಯ ವಿರಕ್ತಮಠದ ಚನ್ನಬಸವ ಸಭಾ ಮಂಟಪದಲ್ಲಿ ಆಯೋಜಿಸಲಾಗಿದ್ದ ಶ್ರೀ ಪ್ರಭು ಮಹಾಸ್ವಾಮಿಗಳ ನೇತ್ರತ್ವದ ಸಭೆಯಲ್ಲಿ ಚಿಮ್ಮಡ, ಹೋಸೂರ ಯರಗಟ್ಟಿಗ್ರಾಮದಿಂದ ಸಾವಿರಾರು ಜನ ಯುವ ಸೇವಕರು ಪಾಲ್ಗೊಂಡು ಜಾತ್ರೆ ನಿರ್ವಹಣೆ ಕುರಿತು ಹಲವಾರು ಸಲಹೆ, ಸೂಚನೆ ನೀಡಿದರಲ್ಲದೇ ಹಲವು ಯುವಕರು ಭಕ್ತರನ್ನು ನಿಯಂತ್ರಿಸಲು ಹಾಗೂ ಸಮರ್ಪಕವಾಗಿ ಪ್ರಸಾದ ವಿತರಿಸಲು ಅನುಕೂಲವಾಗುವಂತೆ ನೀಲಿನಕ್ಷೆ ತಯಾರಿಸಿಕೊಂಡು ಬಂದಿದ್ದರು.ಎಲ್ಲರ ಸಲಹೆಗಳನ್ನು ಆಲಿಸಿದ ಶ್ರೀಗಳು ಹಾಗೂ ಜಾತ್ರಾ ಸಮೀತಿಯ ಪ್ರಮುಖರು ಪ್ರಸಾದ ವಿತರಣಾ ಸಮೀತಿ, ಪ್ರಸಾದ ತಯಾರಿ ಸಮೀತಿ, ಅಥಿತಿ ನಿರ್ವಹಣಾ ಸಮೀತಿ, ಕಾರ್ಯಕ್ರಮ ನಿರ್ವಹಣಾ ಸಮೀತಿ, ಅಥಿತಿ ಪೂಜ್ಯರ ಉಪಚಾರಣಾ ಸಮೀತಿ, ದರ್ಶನ ನಿರ್ವಹಣಾ ಸಮೀತಿ ಸೇರಿದಂತೆ ಹಲವು ಸಮೀತಿಗಳನ್ನು ರಚಿಸಿ ಜವಾಬ್ದಾರಿ ಹಂಚಿಕೆ ಮಾಡುವ ಕುರಿತು ಹಾಗೂ ಅಲ್ಲಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲು ತೀರ್ಮಾನಿಸಲಾಯಿತು.ಬರುವ ಸೆ.೧೬ ನಡೆಯಲಿರುವ ಈ ಜಾತ್ರಾ…
ಸಿಂದಗಿ: ಶಿಕ್ಷಣ ನಮ್ಮ ಬದುಕಿಗೆ ಎಷ್ಟು ಮುಖ್ಯವೋ ಸಂಸ್ಕಾರವೂ ಕೂಡ ಅಷ್ಟೇ ಮುಖ್ಯವಾದದ್ದು ಎಂದು ತಿಂಥಣಿ ಬ್ರಿಡ್ಜ್ ಕಾಗಿನೆಲೆ ಮಹಾಸಂಸ್ಥಾನ ಶಾಖಾಮಠದ ಸಿದ್ದರಾಮಾನಂದಪುರಿ ಮಹಾಸ್ವಾಮಿಗಳು ಹೇಳಿದರು.ಪಟ್ಟಣದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ತಾಲೂಕಾ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನೌಕರರ ಸಂಘದ ವತಿಯಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಜಯಂತ್ಯೋತ್ಸವ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಸನ್ಮಾನ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಕುಟುಂಬದಲ್ಲಿ ಪಾಲಕರು ಶಾಲೆಯಲ್ಲಿ ಶಿಕ್ಷಕರು ಮಕ್ಕಳಲ್ಲಿ ಸಂಸ್ಕೃತಿ ಸಂಸ್ಕಾರ ನೀಡಿ ಉತ್ತಮ ಪ್ರಜೆಗಳನ್ನಾಗಿ ರೂಪಿಸುವುದು ಅತ್ಯಂತ ಮಹತ್ವದ ಕಾರ್ಯ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರಂತಹ ಸ್ವಾಭಿಮಾನದ ವೀರರು ಪ್ರತಿಯೊಂದು ಮನೆಯಲ್ಲಿ ಜನಿಸುವಂತಾಗಬೇಕು ಎಂದರು.ಈ ವೇಳೆ ಕಾರ್ಯಕ್ರಮ ಉದ್ಘಾಟಿಸಿದ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಎಚ್.ನಾಗೂರ ಮಾತನಾಡಿ, ಪ್ರತಿಯೊಂದು ತಾಲೂಕಿನಲ್ಲಿ ಇಂತಹ ಕಾರ್ಯಕ್ರಮಗಳು ಜರುಗುವಂತಾಗಬೇಕು. ಇದರಿಂದ ಮಕ್ಕಳಿಗೆ ಇನ್ನಷ್ಟು ಪ್ರೇರಣೆ ನೀಡಿದಂತಾಗುತ್ತದೆ. ಮತ್ತು ಅವರ ಪ್ರತಿಭೆಗೆ ನಾವು ಗೌರವಿಸಿದಂತಾಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಎ.ಆರ್.ಹೆಗ್ಗಣದೊಡ್ಡಿ, ಬಿ.ಟಿ.ಗೌಡರ ಮಾತನಾಡಿದರು.ಜಕ್ಕಣ್ಣ ಮಾಸ್ತರ ಮೀಸಿ ಉಪನ್ಯಾಸ ನೀಡಿದರು.…
ಸಿಂದಗಿ: ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಆದರ್ಶಗಳನ್ನು ಶಾಲಾ ಸಂಸತ್ತು ಸಹಾಯಕವಾಗಿದೆ. ಶಾಲಾ ಸಂಸತ್ತಿನ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸುವುದರ ಮೂಲಕ ನಾಳಿನ ನಾಯಕರಾಗಬೇಕೆಂದು ಶಿಕ್ಷಕ, ಸಾಹಿತಿ ಎಸ್.ಎಸ್.ಸಾತಿಹಾಳ ಹೇಳಿದರು.ಪಟ್ಟಣದ ವಿವೇಕ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಹಮ್ಮಿಕೊಂಡ ಶಾಲಾ ಸಂಸತ್ತನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಂಕಗಳಿಗಿಂತಲೂ ಭಾರತೀಯ ಸಂಸ್ಕೃತಿ ಮತ್ತು ಸಂಸ್ಕಾರ ಅನುಸರಿಸುವುದರ ಮೂಲಕ ಮಕ್ಕಳು ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.ಈ ವೇಳೆ ಪ್ರಾಚಾರ್ಯ ಶಾನಿಮೋಲ್ ರಾಬಿನ್ ನೂತನ ಸಂಸತ್ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಎಚ್.ಜಿ. ಪಪೂ ಕಾಲೇಜಿನ ಪ್ರಾಚಾರ್ಯ ಎ.ಆರ್ ಹೆಗ್ಗಣದೊಡ್ಡಿ ವಹಿಸಿ ಮಾತನಾಡಿದರು.ಆಡಳಿತ ಅಧಿಕಾರಿ ಟೆನಿ ರಾಬಿನ್ ಹಾಗೂ ಸಂಸ್ಥೆಯ ಅಧ್ಯಕ್ಷೆ ನೀಲಮ್ಮ ಹೆಗ್ಗಣದೊಡ್ಡಿ, ಪ್ರಿಯದರ್ಶಿನಿ ಶ್ರೀನಿಧಿ ಕುಲಕರ್ಣಿ ಸೇರಿದಂತೆ ಶಾಲೆಯ ಬೋಧಕ, ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.
ಸಿಂದಗಿ: ಪಟ್ಟಣದ ಸಾರಂಗಮಠದಲ್ಲಿ ಪೂಜ್ಯ ಶ್ರೀ ಚೆನ್ನವೀರ ಸ್ವಾಮೀಜಿ ಪ್ರತಿಷ್ಠಾನ ಹಾಗೂ ಶ್ರೀಮಠದ ಭಕ್ತರ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಶ್ರಾವಣ ಮಾಸದ ನಿಮಿತ್ಯ ಆ.೨೮ ಬುಧವಾರದಂದು ಬೆಳಿಗ್ಗೆ ೧೧ಗಂಟೆಯಿಂದ ಮಹಾ ದಾಸೋಹ(ಪ್ರಸಾದ)ವಿದ್ದು, ಕಾರಣ ತಾಲೂಕಿನ ಶ್ರೀಮಠದ ಭಕ್ತರು, ಸಾರ್ವಜನಿಕರು ತಪ್ಪದೇ ಸಾರಂಗಮಠಕ್ಕೆ ಬಂದು ಶ್ರೀಪದ್ಮರಾಜ ಒಡೆಯರ ಹಾಗೂ ಸದ್ಗುರು ಲಿಂ.ಚೆನ್ನವೀರ ಮಹಾಸ್ವಾಮಿಗಳ ಕೃಪೆಗೆ ಪಾತ್ರರಾಗಬೇಕು ಎಂದು ಪ್ರತಿಷ್ಠಾನದ ಸಂಚಾಲಕ ಬಳಗ ತಿಳಸಿದ್ದಾರೆ.
ಸಿಂದಗಿ: ಪಟ್ಟಣದ ಸಾರಂಗಮಠದಲ್ಲಿ ಪೂಜ್ಯ ಶ್ರೀ ಚೆನ್ನವೀರ ಸ್ವಾಮೀಜಿ ಪ್ರತಿಷ್ಠಾನ ಹಾಗೂ ಶ್ರೀಮಠದ ಭಕ್ತರ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಶ್ರಾವಣ ಮಾಸದ ನಿಮಿತ್ಯ ಆ.೨೮ ಬುಧವಾರದಂದು ಬೆಳಿಗ್ಗೆ ೧೧ಗಂಟೆಯಿಂದ ಮಹಾ ದಾಸೋಹ(ಪ್ರಸಾದ)ವಿದ್ದು, ಕಾರಣ ತಾಲೂಕಿನ ಶ್ರೀಮಠದ ಭಕ್ತರು, ಸಾರ್ವಜನಿಕರು ತಪ್ಪದೇ ಸಾರಂಗಮಠಕ್ಕೆ ಬಂದು ಶ್ರೀಪದ್ಮರಾಜ ಒಡೆಯರ ಹಾಗೂ ಸದ್ಗುರು ಲಿಂ.ಚೆನ್ನವೀರ ಮಹಾಸ್ವಾಮಿಗಳ ಕೃಪೆಗೆ ಪಾತ್ರರಾಗಬೇಕು ಎಂದು ಪ್ರತಿಷ್ಠಾನದ ಸಂಚಾಲಕ ಬಳಗ ತಿಳಸಿದ್ದಾರೆ.
ಸಿಂದಗಿ: ಶ್ರೀಕೃಷ್ಣ ಪರಮಾತ್ಮನು ವಿದ್ಯೆಯನ್ನು ಸೃಷ್ಟಿಸಿದವನು. ಅವರು ಗುರುಕುಲದಲ್ಲಿ ೬೪ ದಿವಸಗಳಲ್ಲಿ ೬೪ ವಿದ್ಯೆಗಳನ್ನು ಕಲಿತು ವಿದ್ಯೆಯ ಮಹತ್ವವನ್ನು ಜಗತ್ತಿಗೆ ಸಾರಿದನು ಎಂದು ಆಧ್ಯಾತ್ಮ ಚಿಂತಕ, ರಾಘವೇಂದ್ರ ಸ್ವಾಮಿ ಮಠದ ಪಂಡಿತ ವಿಠ್ಠಲಾಚಾರ್ಯ ಮಂಗಳವೇಡಿ ಹೇಳಿದರು.ಪಟ್ಟಣದ ನಾಗೂರ ಬಡಾವಣೆಯಲ್ಲಿರುವ ಶ್ರೀ ಸಮರ್ಥ ವಿದ್ಯಾವಿಕಾಸ ವಿವಿದೊದ್ದೇಶಗಳ ಸಂಸ್ಥೆಯ ಪ್ರೇರಣಾ ಶಿಶುನಿಕೇತನ, ವಿದ್ಯಾನಿಕೇತನ ಹಾಗೂ ಪ್ರೇರಣಾ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಶ್ರೀಕೃಷ್ಣ ಜನ್ಮಾಷ್ಟಮಿ ಸಮಾರಂಭದ ಉದ್ಘಾಟಿಸಿ ಮಾತನಾಡಿದ ಅವರು, ತಂದೆ-ತಾಯಿ ಗುರುಗಳಲ್ಲಿ ದೇವರನ್ನು ಕಂಡು ನಿಮ್ಮ ಜೀವನವನ್ನು ಕೃಷ್ಣ ಪರಮಾತ್ಮನ ಕೃಪೆಯಿಂದ ಪಾವನಗೊಳಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಅಧ್ಯಕ್ಷ ಆರ್.ಡಿ.ಕುಲಕರ್ಣಿ ಮಾತನಾಡಿ, ಕೃಷ್ಣ ಪರಮಾತ್ಮನ ಆದರ್ಶವನ್ನು ಜೀವನದಲ್ಲಿ ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.ಈ ವೇಳೆ ಅಂಬಿಕಾತನಯದತ್ತ ಕನ್ನಡ ಶಾಲಾ ಸಂಘದ ವಿದ್ಯಾರ್ಥಿಗಳಿಂದ ಸ್ನೇಹದ ವಿಶೇಷತೆಯನ್ನು ತಿಳಿಸುವ ಶ್ರೀಕೃಷ್ಣ ಸುದಾಮ ನಾಟಕ ಅನಾವರಣಗೊಂಡಿತು. ವೇದಿಕೆಯಲ್ಲಿ ಪ್ರೇರಣಾ ಶಿಶುನಿಕೇತನದ ಚಿಣ್ಣರು ಕೃಷ್ಣ ರಾಧೆಯ ಛದ್ಮವೇಷ ಪ್ರದರ್ಶಿಸಿದರು. ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ…
ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಬಾಗಲಕೋಟೆ ಜಿಲ್ಲೆ ಬೀಳಗಿ ನಗರದ ಸ್ವಾಮಿ ವಿವೇಕಾನಂದ ಆಂಗ್ಲ ಮಾದ್ಯಮ ಪ್ರೌಢಶಾಲೆಯ ಶಿಕ್ಷಕಿ ಶ್ರೀಮತಿ ಅನಿತಾ ಮುತ್ತು ಲಮಾಣಿ ಅವರ ಸುಪುತ್ರ ವಿರಾಜ್ ಲಮಾಣಿ ಕೃಷ್ಣನ ವೇಷಭೂಷಣ ಧಾರೆಯಲ್ಲಿ ಮಿನುಗಿದ್ದು ಹೀಗೆ !
ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮದಲ್ಲಿ ಮುದ್ದೇಬಿಹಾಳ ತಾಲ್ಲೂಕಿನ ಹುಲ್ಲೂರ ಎಲ್.ಟಿ. ತಾಂಡೆಯ ಭಾರತಿ ಅನಿಲಕುಮಾರ ರಾಠೋಡ ಅವರ ಸುಪುತ್ರಿ ಕುಮಾರಿ ಅಭಿಜ್ಞಾ ರಾಠೋಡ ರಾಧೆಯ ವೇಷಭೂಷಣದಲ್ಲಿ ಕಂಗೊಳಿಸಿದ್ದು ಹೀಗೆ! ಮುದ್ದು ಬಾಲೆ ಅಭಿಜ್ಞಾ ಕ್ಯಾಮರಾ ಕಂಗಳಲ್ಲಿ ತನ್ನ ಮುಗ್ದ ಭಾವದೊಂದಿಗೆ ನಗೆಬೀರಿ ನಯವಾಗಿ ಸೆರೆಯಾದಳು. ಖುಷಿಪಟ್ಟು ಗಮನ ಸೆಳೆದ ಬಾಲೆಯ ಪರಿ ಇದು!
ದೇವರಹಿಪ್ಪರಗಿ: ಗಣೇಶನ ಪ್ರತಿಷ್ಠಾಪನೆಯಿಂದ ವಿಸರ್ಜನೆವರೆಗಿನ ಗಣೇಶ ಉತ್ಸವ ಹಾಗೂ ಈದ್ ಮಿಲಾದ್ ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸುವುದರ ಮೂಲಕ ಮಹಾಮಂಡಳಿ ಹಾಗೂ ಯುವಕ ಸಂಘಗಳು ಪೊಲೀಸ್ ಇಲಾಖೆಗೆ ಸಹಕಾರ ನೀಡಬೇಕು ಎಂದು ಸಿಪಿಆಯ್ ಆನಂದರಾವ್ ಎಸ್.ಎನ್ ಹೇಳಿದರು.ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ನಿಮಿತ್ಯವಾಗಿ ಸೋಮವಾರ ಜರುಗಿದ ಶಾಂತಿಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಟ್ಟಣ ಶಾಂತಿ, ಸೌಹಾರ್ದತೆಗೆ ಹೆಸರಾಗಿದೆ. ಇದನ್ನು ಮುಂದುವರೆಸಿಕೊಂಡು ಹೋಗುವುದರ ಜೊತೆಗೆ ಎಲ್ಲರೂ ಸರ್ಕಾರದ ನಿಯಮಾವಳಿ ಪಾಲನೆ ಮಾಡಬೇಕು. ಯಾವುದೇ ಅನಗತ್ಯ ವಿಷಯಗಳತ್ತ ಗಮನ ನೀಡದೇ, ಶಿಸ್ತು, ಸಹನೆಯಿಂದ ಹಬ್ಬಗಳ ಆಚರಣೆಗೆ ಮುಂದಾಗಬೇಕು ಎಂದರು.ಪಿಎಸೈ ಬಸವರಾಜ ತಿಪ್ಪಾರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಪೊಲೀಸ್ ಇಲಾಖೆ ಜನಸ್ನೇಹಿ ಇಲಾಖೆಯಾಗಿ ಸಾರ್ವಜನಿಕರಿಗೆ ಸ್ಪಂದಿಸುತ್ತಿದೆ. ಯಾವುದೇ ಕಾರಣಕ್ಕೂ ಸಮಾಜದ ಶಾಂತಿ ಕದಡುವ ಅಹಿತಕರ ಘಟನೆಗಳಿಗೆ ಆಸ್ಪದವಿಲ್ಲ. ಪಟ್ಟಣದ ಎಲ್ಲ ಗಣೇಶ ಮಹಾಮಂಡಳಿಗಳಿಗೆ ಹೆಸ್ಕಾಂ, ಪಟ್ಟಣ ಪಂಚಾಯಿತಿ ಸೇರಿದಂತೆ ಪೊಲೀಸ್ ಇಲಾಖೆಯ ಸಂಪೂರ್ಣ ಸಹಕಾರವಿದ್ದು, ಗಣೇಶ ಯುವಕ ಮಂಡಳಿಗಳು ಇಲಾಖೆಯ ನಿಯಮಾವಳಿಗಳನ್ನು ಪಾಲಿಸಬೇಕು…
ಕೆಂಭಾವಿ: ಪಟ್ಟಣದ ಸುತ್ತಮುತ್ತ ಬಹುತೇಕ ಗುಡಿಸಲು ನಿವಾಸಿಗಳೇ ಹೆಚ್ಚಿದ್ದು, ಇಲ್ಲಿನ ರೈತರು ಹೆಚ್ಚಾಗಿ ಕಬ್ಬು, ಭತ್ತ ಬೆಳೆಯುತ್ತಾರೆ. ಬೇಸಿಗೆಯಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದರೆ, ಬೆಳೆದ ಫಸಲು ಕೈಗೆ ಬಾರದೆ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ಬೆಂಕಿಗಾಹುತಿಯಾಗಿರುತ್ತದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇತ್ತ ಕಡೆ ಗಮನಹರಿಸದಿದ್ದಲ್ಲಿ ಹೋರಾಟ ಕೈಗೊಳ್ಳಲಾಗುವುದು ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಅತೀ ದೊಡ್ಡ ಹೋಬಳಿ ಕೇಂದ್ರವಾಗಿರುವ ಕೆಂಭಾವಿ ಪಟ್ಟಣದ ಸುತ್ತಮುತ್ತ ಗ್ರಾಮಗಳಾದ ಯಾಳಗಿ, ಹದನೂರು, ಮಲ್ಲಾ, ಏವೂರು, ನಗನೂರು, ಖಾನಾಪುರ, ಮಾಲಗತ್ತಿ, ಕಿರದಳ್ಳಿ, ಹೆಗ್ಗನದೊಡ್ಡಿ, ಕರಡಕಲ್, ಮಾಲಹಳ್ಳಿ, ನಡಕೂರ, ಆಲ್ಹಾಳ, ಐನಾಪುರ, ಮಲ್ಕಾಪುರ, ಗುತ್ತಿಬಸವೇಶ್ವರ, ಚಿಂಚೋಳಿ, ವಂದಗನೂರು, ಬೊಮ್ಮನಹಳ್ಳಿ, ಸೇರಿದಂತೆ ವಲಯದ ವ್ಯಾಪ್ತಿಯಲ್ಲಿ ಅಗ್ನಿ ಅನಾಹುತ ಸಂಭವಿಸದರೆ, 30 ಕಿಲೋಮೀಟರ್ ದೂರದ ಸುರಪುರದಿಂದ ಅಗ್ನಿ ಶಾಮಕ ದಳದ ವಾಹನ ಬರಬೇಕಾದ ಅನಿವಾರ್ಯತೆ ಎದುರಾಗಿದೆ. ವಾಹನ ಬರುವುದು ಸ್ವಲ್ಪ ತಡವಾದರೆ ಬೆಂಕಿ ಅವಘಡ ಸಂಭವಿಸಿದ್ದು ಅನೇಕ ನಿರ್ದೇಶನಗಳಿದ್ದು.ಎಚ್ಚೆತ್ತುಕೊಂಡ ಅಧಿಕಾರಿಗಳು ಸರ್ವೆ ನಂಬರ್ 512 ರಲ್ಲಿ ಎರಡು…
