ಚಿಮ್ಮಡ: ಗ್ರಾಮದ ಐತಿಹಾಸಿಕ ಕಿಚಡಿ ಜಾತ್ರೆಯನ್ನು ಯಾವುದೇ ಅಡಚನೆಯಾಗದಂತೆ ನಿರ್ವಹಿಸಲು ಇಲ್ಲಿನ ಯುವ ಸೇವಕರ ಹಲವು ಸಮೀತಿಗಳನ್ನು ರಚಿಸಲು ಸೋಮವಾರ ನಡೆದ ಸೇವಕರ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸ್ಥಳಿಯ ವಿರಕ್ತಮಠದ ಚನ್ನಬಸವ ಸಭಾ ಮಂಟಪದಲ್ಲಿ ಆಯೋಜಿಸಲಾಗಿದ್ದ ಶ್ರೀ ಪ್ರಭು ಮಹಾಸ್ವಾಮಿಗಳ ನೇತ್ರತ್ವದ ಸಭೆಯಲ್ಲಿ ಚಿಮ್ಮಡ, ಹೋಸೂರ ಯರಗಟ್ಟಿಗ್ರಾಮದಿಂದ ಸಾವಿರಾರು ಜನ ಯುವ ಸೇವಕರು ಪಾಲ್ಗೊಂಡು ಜಾತ್ರೆ ನಿರ್ವಹಣೆ ಕುರಿತು ಹಲವಾರು ಸಲಹೆ, ಸೂಚನೆ ನೀಡಿದರಲ್ಲದೇ ಹಲವು ಯುವಕರು ಭಕ್ತರನ್ನು ನಿಯಂತ್ರಿಸಲು ಹಾಗೂ ಸಮರ್ಪಕವಾಗಿ ಪ್ರಸಾದ ವಿತರಿಸಲು ಅನುಕೂಲವಾಗುವಂತೆ ನೀಲಿನಕ್ಷೆ ತಯಾರಿಸಿಕೊಂಡು ಬಂದಿದ್ದರು.
ಎಲ್ಲರ ಸಲಹೆಗಳನ್ನು ಆಲಿಸಿದ ಶ್ರೀಗಳು ಹಾಗೂ ಜಾತ್ರಾ ಸಮೀತಿಯ ಪ್ರಮುಖರು ಪ್ರಸಾದ ವಿತರಣಾ ಸಮೀತಿ, ಪ್ರಸಾದ ತಯಾರಿ ಸಮೀತಿ, ಅಥಿತಿ ನಿರ್ವಹಣಾ ಸಮೀತಿ, ಕಾರ್ಯಕ್ರಮ ನಿರ್ವಹಣಾ ಸಮೀತಿ, ಅಥಿತಿ ಪೂಜ್ಯರ ಉಪಚಾರಣಾ ಸಮೀತಿ, ದರ್ಶನ ನಿರ್ವಹಣಾ ಸಮೀತಿ ಸೇರಿದಂತೆ ಹಲವು ಸಮೀತಿಗಳನ್ನು ರಚಿಸಿ ಜವಾಬ್ದಾರಿ ಹಂಚಿಕೆ ಮಾಡುವ ಕುರಿತು ಹಾಗೂ ಅಲ್ಲಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲು ತೀರ್ಮಾನಿಸಲಾಯಿತು.
ಬರುವ ಸೆ.೧೬ ನಡೆಯಲಿರುವ ಈ ಜಾತ್ರಾ ಮಹೋತ್ಸವದಲ್ಲಿ ಲಕ್ಷಾಂತರ ಭಕ್ತರು ಸೇರಿ ಪ್ರಸಾದ ಸವಿಯುವ ಮೂಲಕ ಸಿಸ್ತು, ಉತ್ತಮ ನಿರ್ವಹಣೆಗೆ ಉತ್ತರ ಕರ್ನಾಟಕದಲ್ಲಿಯೇ ಹೆಸರುವಾಸಿಯಾಗಿದ್ದು ಅದಕ್ಕೆ ಚ್ಯುತಿ ಬಾರದಂತೆ ಗ್ರಾಮದ ಪ್ರತಿಯೊಬ್ಬರು ಕಾರ್ಯ ನಿರ್ವಹಿಸಬೇಕಾಗಿದೆ ಅಲ್ಲದೇ ಎಲ್ಲ ಭಕ್ತರಿಗೆ ತೊಂದರೆಯಾಗದತೆ ಪ್ರಸಾದ ಪೋರೈಸಬೇಕಾದಂತೆ ನಮ್ಮೆಲ್ಲರ ಮೇಲಿದ್ದು ಪ್ರತಿಯೊಬ್ಬರು ಪ್ರಭುವಿನ ಸೇವಾ ಮನೋಭಾವನೆಯೊಂದಿಗೆ ಕಾರ್ಯ ನಿರ್ವಹಿಸಲು ಕಂಕಣ ಬದ್ದರಾಗಿ ನಿಲ್ಲಬೇಕೆಂದು ಶ್ರೀ ಪ್ರಭು ಮಹಾಸ್ವಾಮಿಗಳ ಸಲಹೆ ನೀಡಿದರು.
ಓಂ ಪ್ರಭುಲಿಂಗ ಟ್ರಷ್ಟ ಕಮೀತಿಯ ಅಧ್ಯಕ್ಷ ರಾಮಣ್ಣ ಮುಗಳಖೋಡ, ಪುಂಡಲಿಕಪ್ಪಾ ಪೂಜಾರಿ, ಬಾಳಪ್ಪ ಹಳಿಂಗಳಿ, ಅಣ್ಣಪ್ಪಗೌಡ ಪಾಟೀಲ, ಆರ್.ಎಂ. ಬಗನಾಳ, ಬಿ.ಎಸ್. ಪಾಟೀಲ, ಗ್ರಾ.ಪಂ. ಮಾಜಿ ಅಧ್ಯಕ್ಷ ಗುರಲಿಂಗಪ್ಪಾ ಪೂಜಾರಿ, ಬೀರಪ್ಪಾ ಹಳೆಮನಿ, ಉಮೇಶ ಪೂಜಾರಿ, ಪ್ರಕಾಶ ಪಾಟೀಲ, ನಿಂಗಣ್ಣ ಪೂಜಾರಿ, ಆನಂದ ಕವಟಿ, ಪೋಲಿಸ ಸಿಬ್ಬಂದಿ ಸೇರಿದಂತೆ ಹಲವಾರು ಜನ ಪ್ರಮುಖರು ಸಭೆಯಲ್ಲಿ ಭಾಗವಹಿಸಿದ್ದರು.
ಉಪನ್ಯಾಸಕ ಪ್ರಕಾಶ ಬಡಿಗೇರ, ಶಿಕ್ಷಕ ಪ್ರಕಾಶ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

