ಸಿಂದಗಿ: ಶ್ರೀಕೃಷ್ಣ ಪರಮಾತ್ಮನು ವಿದ್ಯೆಯನ್ನು ಸೃಷ್ಟಿಸಿದವನು. ಅವರು ಗುರುಕುಲದಲ್ಲಿ ೬೪ ದಿವಸಗಳಲ್ಲಿ ೬೪ ವಿದ್ಯೆಗಳನ್ನು ಕಲಿತು ವಿದ್ಯೆಯ ಮಹತ್ವವನ್ನು ಜಗತ್ತಿಗೆ ಸಾರಿದನು ಎಂದು ಆಧ್ಯಾತ್ಮ ಚಿಂತಕ, ರಾಘವೇಂದ್ರ ಸ್ವಾಮಿ ಮಠದ ಪಂಡಿತ ವಿಠ್ಠಲಾಚಾರ್ಯ ಮಂಗಳವೇಡಿ ಹೇಳಿದರು.
ಪಟ್ಟಣದ ನಾಗೂರ ಬಡಾವಣೆಯಲ್ಲಿರುವ ಶ್ರೀ ಸಮರ್ಥ ವಿದ್ಯಾವಿಕಾಸ ವಿವಿದೊದ್ದೇಶಗಳ ಸಂಸ್ಥೆಯ ಪ್ರೇರಣಾ ಶಿಶುನಿಕೇತನ, ವಿದ್ಯಾನಿಕೇತನ ಹಾಗೂ ಪ್ರೇರಣಾ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಶ್ರೀಕೃಷ್ಣ ಜನ್ಮಾಷ್ಟಮಿ ಸಮಾರಂಭದ ಉದ್ಘಾಟಿಸಿ ಮಾತನಾಡಿದ ಅವರು, ತಂದೆ-ತಾಯಿ ಗುರುಗಳಲ್ಲಿ ದೇವರನ್ನು ಕಂಡು ನಿಮ್ಮ ಜೀವನವನ್ನು ಕೃಷ್ಣ ಪರಮಾತ್ಮನ ಕೃಪೆಯಿಂದ ಪಾವನಗೊಳಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಅಧ್ಯಕ್ಷ ಆರ್.ಡಿ.ಕುಲಕರ್ಣಿ ಮಾತನಾಡಿ, ಕೃಷ್ಣ ಪರಮಾತ್ಮನ ಆದರ್ಶವನ್ನು ಜೀವನದಲ್ಲಿ ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ವೇಳೆ ಅಂಬಿಕಾತನಯದತ್ತ ಕನ್ನಡ ಶಾಲಾ ಸಂಘದ ವಿದ್ಯಾರ್ಥಿಗಳಿಂದ ಸ್ನೇಹದ ವಿಶೇಷತೆಯನ್ನು ತಿಳಿಸುವ ಶ್ರೀಕೃಷ್ಣ ಸುದಾಮ ನಾಟಕ ಅನಾವರಣಗೊಂಡಿತು. ವೇದಿಕೆಯಲ್ಲಿ ಪ್ರೇರಣಾ ಶಿಶುನಿಕೇತನದ ಚಿಣ್ಣರು ಕೃಷ್ಣ ರಾಧೆಯ ಛದ್ಮವೇಷ ಪ್ರದರ್ಶಿಸಿದರು. ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮಕ್ಕಳಿಗೆ ಏರ್ಪಡಿಸಿದ ವಿವಿಧ ಕಾರ್ಯಕ್ರಮಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪಾರಿತೋಷಕ ವಿತರಣೆ ಮಾಡಲಾಯಿತು. ಶಾಲಾ ಮಕ್ಕಳು ಕೃಷ್ಣನ ಶ್ಲೋಕ ಗೀತೆಗಳ ಪಠಣ ಕಾರ್ಯಕ್ರಮ ಮೆರಗು ತಂದಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕ ಪಿ.ಡಿ.ಕುಲಕರ್ಣಿ, ಮುಖ್ಯಗುರಮಾತೆ ಎಮ್.ಪಿ.ಬುಕ್ಕಾ, ಶ್ರಾವ್ಯ ಗುಮಶೆಟ್ಟಿ, ಸಾನ್ವಿ ಬಾಗಲಕೋಟ ಪ್ರಾರ್ಥಿಸಿದರು. ಬಿ.ಎಸ್. ಪಾಟೀಲ ಸ್ವಾಗತಿಸಿದರು. ಮತ್ತು ಬಿ.ಎಸ್. ಸಜ್ಜನ, ಆರ್.ಎಮ್. ಪಕೀರಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುನಮ್ ಮತ್ತು ಶ್ರೀನಿಧಿ ಭರತನಾಟ್ಯ ಪ್ರದರ್ಶಿಸಿದರು. ಸತೀಶ ಕುಲಕರ್ಣಿ ನಿರೂಪಿಸಿದರು. ವಿ.ಎ.ನಾಯಕ ವಂದಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಬೋಧಕ, ಬೋಧಕೇತರ ಸಿಬ್ಬಂದಿಗಳು, ಪಾಲಕರು ವಿದ್ಯಾರ್ಥಿಗಳಿದ್ದರು.
Subscribe to Updates
Get the latest creative news from FooBar about art, design and business.
ವಿದ್ಯೆಯ ಮಹತ್ವ ಜಗತ್ತಿಗೆ ಸಾರಿದ ಶ್ರೀಕೃಷ್ಣ ಪರಮಾತ್ಮ :ಮಂಗಳವೇಡಿ
Related Posts
Add A Comment

