ಕೆಂಭಾವಿ: ಪಟ್ಟಣದ ಸುತ್ತಮುತ್ತ ಬಹುತೇಕ ಗುಡಿಸಲು ನಿವಾಸಿಗಳೇ ಹೆಚ್ಚಿದ್ದು, ಇಲ್ಲಿನ ರೈತರು ಹೆಚ್ಚಾಗಿ ಕಬ್ಬು, ಭತ್ತ ಬೆಳೆಯುತ್ತಾರೆ. ಬೇಸಿಗೆಯಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದರೆ, ಬೆಳೆದ ಫಸಲು ಕೈಗೆ ಬಾರದೆ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ಬೆಂಕಿಗಾಹುತಿಯಾಗಿರುತ್ತದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇತ್ತ ಕಡೆ ಗಮನಹರಿಸದಿದ್ದಲ್ಲಿ ಹೋರಾಟ ಕೈಗೊಳ್ಳಲಾಗುವುದು ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.
ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಅತೀ ದೊಡ್ಡ ಹೋಬಳಿ ಕೇಂದ್ರವಾಗಿರುವ ಕೆಂಭಾವಿ ಪಟ್ಟಣದ ಸುತ್ತಮುತ್ತ ಗ್ರಾಮಗಳಾದ ಯಾಳಗಿ, ಹದನೂರು, ಮಲ್ಲಾ, ಏವೂರು, ನಗನೂರು, ಖಾನಾಪುರ, ಮಾಲಗತ್ತಿ, ಕಿರದಳ್ಳಿ, ಹೆಗ್ಗನದೊಡ್ಡಿ, ಕರಡಕಲ್, ಮಾಲಹಳ್ಳಿ, ನಡಕೂರ, ಆಲ್ಹಾಳ, ಐನಾಪುರ, ಮಲ್ಕಾಪುರ, ಗುತ್ತಿಬಸವೇಶ್ವರ, ಚಿಂಚೋಳಿ, ವಂದಗನೂರು, ಬೊಮ್ಮನಹಳ್ಳಿ, ಸೇರಿದಂತೆ ವಲಯದ ವ್ಯಾಪ್ತಿಯಲ್ಲಿ ಅಗ್ನಿ ಅನಾಹುತ ಸಂಭವಿಸದರೆ, 30 ಕಿಲೋಮೀಟರ್ ದೂರದ ಸುರಪುರದಿಂದ ಅಗ್ನಿ ಶಾಮಕ ದಳದ ವಾಹನ ಬರಬೇಕಾದ ಅನಿವಾರ್ಯತೆ ಎದುರಾಗಿದೆ. ವಾಹನ ಬರುವುದು ಸ್ವಲ್ಪ ತಡವಾದರೆ ಬೆಂಕಿ ಅವಘಡ ಸಂಭವಿಸಿದ್ದು ಅನೇಕ ನಿರ್ದೇಶನಗಳಿದ್ದು.
ಎಚ್ಚೆತ್ತುಕೊಂಡ ಅಧಿಕಾರಿಗಳು ಸರ್ವೆ ನಂಬರ್ 512 ರಲ್ಲಿ ಎರಡು ಎಕರೆ ಸರ್ಕಾರಿ ಜಮೀನಿದ್ದು. ಅಗ್ನಿ ಶಾಮಕ ದಳ ಠಾಣೆ ಮಂಜೂರು ಮಾಡಲು ಯೋಗ್ಯವಾಗಿರುತ್ತದೆ ಎಂದು ಕಂದಾಯ ನಿರೀಕ್ಷಕರು, ಸುರಪುರ ತಹಸೀಲ್ದಾರ್ ಸ್ಕೆಚ್ ನಕಾಶೆ, ಹಾಗೂ ಪಂಚನಾಮೆ ವರದಿ ಮಾನ್ಯ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿ ಹಸಿರು ನಿಶಾನೆ ತೋರಿರುವುದಾಗಿ ತಿಳಿದು ಬಂದಿದೆ ಎಂದು ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾ ವೇದಿಕೆ ಅಧ್ಯಕ್ಷ ಬಂದೇನವಾಜ್ ನಾಲತವಾಡ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

