ಸಿಂದಗಿ: ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಆದರ್ಶಗಳನ್ನು ಶಾಲಾ ಸಂಸತ್ತು ಸಹಾಯಕವಾಗಿದೆ. ಶಾಲಾ ಸಂಸತ್ತಿನ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸುವುದರ ಮೂಲಕ ನಾಳಿನ ನಾಯಕರಾಗಬೇಕೆಂದು ಶಿಕ್ಷಕ, ಸಾಹಿತಿ ಎಸ್.ಎಸ್.ಸಾತಿಹಾಳ ಹೇಳಿದರು.
ಪಟ್ಟಣದ ವಿವೇಕ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಹಮ್ಮಿಕೊಂಡ ಶಾಲಾ ಸಂಸತ್ತನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಂಕಗಳಿಗಿಂತಲೂ ಭಾರತೀಯ ಸಂಸ್ಕೃತಿ ಮತ್ತು ಸಂಸ್ಕಾರ ಅನುಸರಿಸುವುದರ ಮೂಲಕ ಮಕ್ಕಳು ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಈ ವೇಳೆ ಪ್ರಾಚಾರ್ಯ ಶಾನಿಮೋಲ್ ರಾಬಿನ್ ನೂತನ ಸಂಸತ್ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಎಚ್.ಜಿ. ಪಪೂ ಕಾಲೇಜಿನ ಪ್ರಾಚಾರ್ಯ ಎ.ಆರ್ ಹೆಗ್ಗಣದೊಡ್ಡಿ ವಹಿಸಿ ಮಾತನಾಡಿದರು.
ಆಡಳಿತ ಅಧಿಕಾರಿ ಟೆನಿ ರಾಬಿನ್ ಹಾಗೂ ಸಂಸ್ಥೆಯ ಅಧ್ಯಕ್ಷೆ ನೀಲಮ್ಮ ಹೆಗ್ಗಣದೊಡ್ಡಿ, ಪ್ರಿಯದರ್ಶಿನಿ ಶ್ರೀನಿಧಿ ಕುಲಕರ್ಣಿ ಸೇರಿದಂತೆ ಶಾಲೆಯ ಬೋಧಕ, ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

