Author: editor.udayarashmi@gmail.com

ಅಂತರ್ ಶಾಲಾ ಹಾಗೂ ಕಾಲೇಜುಗಳ ಕ್ರೀಡಾ ಕೂಟಕ್ಕೆ ಚಾಲನೆ ನೀಡಿದ ಡಿಸಿ ಟಿ.ಭೂಬಾಲನ್ ಸಲಹೆ ವಿಜಯಪುರ: ವಿದ್ಯಾರ್ಥಿಗಳು ಓದಿನೊಂದಿಗೆ ಪಠ್ಯೇತರ ಚಟುವಟಿಕೆಗಳಿಗೂ ಪ್ರಾಮುಖ್ಯತೆ ನೀಡಿ ಸುಂದರ ಭದ್ರ ಭವಿಷ್ಯಕ್ಕೆ ಬುನಾದಿ ಹಾಕಿಕೊಳ್ಳುವ ಮೂಲಕ ಜೀವನದ ಪ್ರಮುಖ ಘಟ್ಟವಾದ ವಿದ್ಯಾರ್ಥಿ ಜೀವನದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಕರೆ ನೀಡಿದರು.ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಆಗಸ್ಟ ೨೯ರ ಗುರುವಾರದಂದು ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ಅಲ್ಪಸಂಖ್ಯಾತರ ನಿರ್ದೇಶನಾಲಯ ಹಾಗೂ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲೆಯ ತಿಕೋಟ ತಾಲೂಕಿನ ಅರಕೇರಿಯಲ್ಲಿರುವ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ಅಂತರ್ ಶಾಲಾ ಹಾಗೂ ಕಾಲೇಜುಗಳ ಕ್ರೀಡಾ ಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ನೆರಳು ನಮ್ಮನ್ನು ಹಿಂಬಾಲಿಸಿದಂತೆ ನಮ್ಮ ಸಾಧನೆಗಳು ನಮ್ಮನ್ನು ಹಿಂಬಾಲಿಸುತ್ತವೆ. ಮೇಜರ್ ದ್ಯಾನ ಚಂದ ಅವರ ಜನ್ಮದಿನವಾದ ಇಂದು ರಾಷ್ಟ್ರೀಯ ಕ್ರೀಡಾ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ. ಅವರು ಹಾಕಿಯಲ್ಲಿ ತಮ್ಮದೆಯಾದ ಛಾಪು…

Read More

ವಿಜಯಪುರ: ಬಿಜಾಪುರ ಲಿಂಗಾಯತ ಡೆವಲೆಪಮೆಂಟ್ ಸೌಹಾರ್ದವು ಗ್ರಾಹಕರ ವಿಶ್ವಾಸ ಗಳಿಸಿ, 10ನೇ ನೂತನ ಶಾಖೆಯನ್ನು ನಾಳೆ ದಿ.30 ಶುಕ್ರವಾರ ಬೆ.10ಗಂ. ನಾವದ ಕಟ್ಟಡ, ಮೊದಲನೇ ಮಹಡಿ, ಬಸವೇಶ್ವರ ವೃತ್ತ ಮುದ್ದೇಬಿಹಾಳದಲ್ಲಿ ಆರಂಭಿಸಲಾಗುತ್ತಿದೆ ಎಂದು ಅಧ್ಯಕ್ಷ, ವಿಧಾನಪರಿಷತ್ ಸದಸ್ಯ ಸುನೀಗೌಡ ಪಾಟೀಲ ತಿಳಿಸಿದರು.ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಕುಂಟೋಜಿಯ ಭಾವೈಕ್ಯತಾ ಮಠದ ಪ.ಪೂ ಷ.ಬ್ರ ಡಾ. ಶ್ರೀಗುರು ಚನ್ನವೀರ ಶಿವಾಚಾರ್ಯರು ಸಾನಿಧ್ಯ ವಹಿಸಲಿದ್ದು, ಮುದ್ದೇಬಿಹಾಳ ಶಾಸಕ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಉದ್ಘಾಟಿಸಲಿದ್ದಾರೆ ಎಂದು ಸುನೀಗೌಡ ಪಾಟೀಲ ತಿಳಿಸಿದ್ದಾರೆ.

Read More

ವಿಜಯಪುರ: ಕ್ರೀಡೆಗಳು ನಮ್ಮನ್ನು ದೈಹಿಕ ಮತ್ತು ಮಾನಸಿಕವಾಗಿ ಸಬಲರನ್ನಾಗಿ ಮಾಡುತ್ತವೆ. ಎಲ್ಲರೂ ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ವಿಜಯಪುರ ನಗರ ಡಿ. ವೈ. ಎಸ್ಪಿ ಬಸವರಾಜ ಎಲಿಗಾರ ಹೇಳಿದ್ದಾರೆ.ಗುರುವಾರ ಬೆಳಿಗ್ಗೆ ನಗರದ ಪ್ರತಿಷ್ಟಿತ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ. ಬಿ. ಎಂ. ಪಾಟೀಲ ಪಬ್ಲಿಕ್ ಶಾಲೆಯಲ್ಲಿ ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ “ಇತ್ತೀಚೆಗೆ ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ವಿರೋಧಿಸಿ, ಸಾಮೂಹಿಕ ಮ್ಯಾರಾಥಾನ್ ಓಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಶಾಲಾ ಮಟ್ಟದಲ್ಲಿ ಕ್ರೀಡೆಗಳ ಆಯೋಜನೆ ಅಗತ್ಯವಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಈಗಿನಿಂದಲೆ ಹೆಚ್ಚೆಚ್ಚು ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ಹೇಳಿದರು.ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಗ್ರಾಮೀಣ ವಲಯ ಕ್ಷೇತ್ರ ಶಿಕ್ಷಾಣಾಧಿಕಾರಿ ಪ್ರಮೋದಿನಿ ಬೊಳಲಮಟ್ಟಿ ಮಾತನಾಡಿ, ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟಲು ಇಂಥ ಜಾಗೃತಿ ಓಟ ಆಯೋಜಿಸಿರುವುದು ಶ್ಲಾಘನೀಯ ಎಂದು ಹೇಳಿದರು.ಬಿ.ಎಲ್.ಡಿ.ಇ. ಸಂಸ್ಥೆಯ ಹೊಸ ಆವರಣದ ಮುಖ್ಯದ್ವಾರದಿಂದ ಪ್ರಾರಂಭವಾದ ಮಕ್ಕಳ ಓಟ ಸುಮಾರು ಮೂರು ಕಿ. ಮೀ. ವರೆಗೆ ನಡೆಯಿತು.ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ ಸಂಸ್ಥೆಯ ಕ್ರೀಡಾ ನಿರ್ದೇಶಕ ಪ್ರೊ.…

Read More

ಕಲಬುರ್ಗಿ: ನಗರದ ಕರುಣೇಶ್ವರ ಕಾಲೋನಿ ನಿವಾಸಿ ಶರಣೆ ರೇಣುಕಾ ಶಿವಶರಣ ನಗನೂರ ಅವರ ನಿವಾಸದಲ್ಲಿ ಶ್ರಾವಣ ಮಾಸದ ಅಂಗವಾಗಿ ನಡೆಯುವ 21 ನೇ ದಿನದ ಶ್ರಾವಣ ಮಾಸ – ವಚನ – ನಿವಾಸ ಕಾರ್ಯಕ್ರಮವು ಅರ್ಥಪೂರ್ಣವಾಗಿ ಜರುಗಿತು.ಜೇವರ್ಗಿಯ ಬಸವ ಕೇಂದ್ರ ಮಹಿಳಾ ಘಟಕವು ನೇತೃತ್ವದಲ್ಲಿ ನಡೆದ ಈ ಅಪರೂಪದ ಕಾರ್ಯಕ್ರಮಕ್ಕೆ ಶ್ರೀ ಗುರು ಬಸವಣ್ಣನವರ ಹಾಗೂ ಶ್ರೀ ಷಣ್ಮುಖಶಿವಯೋಗಿಗಳ ಭಾವಚಿತ್ರದೊಂದಿಗೆ ವಚನಗಳ ಗ್ರಂಥ ಪ್ರವೇಶ ಮಾಡುವ ಮೂಲಕ ಚಾಲನೆ ನೀಡಲಾಯಿತು.ಬಳಿಕ ಕಾಲೊನಿಯ ಮಹಿಳಾ ಬಳಗವು ಸಾಮೂಹಿಕವಾಗಿ ವಿವಿಧ ಶರಣರ ವಚನಗಳನ್ನು ಪಠಿಸುವ ಮೂಲಕ ಶ್ರದ್ಧಾ-ಭಕ್ತಿಯಿಂದ ಕಾರ್ಯಕ್ರಮ ನಡೆಸಲಾಯಿತುಜೇವರ್ಗಿಯ ಬಸವ ಕೇಂದ್ರ ಮಹಿಳಾ ಘಟಕದ ಈ ಮಹತ್ಕಾರ್ಯಕ್ಕೆ ಸಹಕರಿಸಿದ ನಗನೂರ ಪರಿವಾರದವರಿಗೆ ಮಹಿಳಾ ಘಟಕವು ಧನ್ಯವಾದಗಳೊಂದಿಗೆ ಗೌರವ ಸೂಚಿಸಿತು.ರಾಜೇಶ್ವರಿ ವಿಜಯಕುಮಾರ್ ಪಾಟೀಲ್ ಸೇಡಂ ಅಧ್ಯಕ್ಷತೆ ವಹಿಸಿದ್ದರು.ರೇಣುಕಾ ನಗನೂರ್, ಸಾವಿತ್ರಿ ಹಳ್ಳಿ, ಪುಷ್ಪಾವತಿ ಪಡಶೆಟ್ಟಿ, ಬನಶಂಕರಿ ಹುಂಡೆಕರ್, ಮಂಜುಳಾ ಸುಬೇದಾರ್, ರಾಜೇಶ್ವರಿ ಜೇವರ್ಗಿ ನಾಗಮ್ಮ ಜೇವರ್ಗಿ ಸೇರಿದಂತೆ ಅನೇಕರಿದ್ದರು.

Read More

ಬಸವನ ಬಾಗೇವಾಡಿ: ತಾಲೂಕಿನ ಸಾತಿಹಾಳ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಸಾತಿಹಾಳ ಗ್ರಾಮ ಪಂಚಾಯಿತಿ ಸದಸ್ಯೆ ಕಮಲಾಬಾಯಿ ರೊಳ್ಳಿ ಉಚಿತವಾಗಿ ಕೊಡಮಾಡಿದ ಸಮವಸ್ತ್ರಗಳನ್ನು ವಿತರಿಸಲಾಯಿತು.ಮಕ್ಕಳಿಗೆ ಸಮವಸ್ತ್ರಗಳನ್ನು ವಿತರಿಸಿ ಮಾತನಾಡಿದ ಗ್ರಾಪಂ ಸದಸ್ಯೆ ಕಮಲಾಬಾಯಿ ರೊಳ್ಳಿ ಅವರು, ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಶ್ರೀಮತಿ ಸೈನಾಜ ಚಾಂದಕೋಟೆ ಹಾಗೂ ಸಹಾಯಕಿ ಶ್ರೀಮತಿ ಮಡಿವಾಳಮ್ಮ ಕೋಲ್ಲಾರ ಇವರು ಮಕ್ಕಳನ್ನು ನಿತ್ಯ ಪ್ರೀತಿ-ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಾರೆ. ಪ್ರತಿದಿನ ಶಾಲಾ ಪೂರ್ವ ಶಿಕ್ಷಣ ಚಟುವಟಿಕೆ ಹಾಗೂ ಆಹಾರ ವಿತರಣೆಯನ್ನು ಕ್ರಮಬದ್ದವಾಗಿ ನಿರ್ವಹಿಸುತ್ತಾರೆ ಎಂದು ಮನದುಂಬಿ ಶ್ಲಾಘಿಸಿದರಲ್ಲದೆ, ಅವರ ಪ್ರಾಮಾಣಿಕ ಸೇವೆ ಮತ್ತು ಕರ್ತವ್ಯ ದಕ್ಷತೆಗೆ ಪ್ರತಿಫಲವಾಗಿ ತಾವು ಇಲ್ಲಿಯ ಮಕ್ಕಳಿಗೆ ಸಮವಸ್ತ್ರ ಕೂಡುಗೆ ನೀಡಿರುವುದಾಗಿ ತಿಳಿಸಿದರು.ಇದೇ ಸಂದರ್ಭದಲ್ಲಿ ಕೊಡುಗೆ ನೀಡಿದ ಶ್ರೀಮತಿ ಕಮಲಾಬಾಯಿ ರೋಳ್ಳಿ ಅವರನ್ನು ಅಂಗನವಾಡಿಯ ನಿಯೋಜಿತ ಮೇಲ್ವಿಚಾರಕಿ ಶ್ರೀಮತಿ ಸಾವಿತ್ರಿ ಬಾತಾವಾನಿ ಮತ್ತು ಕೇಂದ್ರದ ಕಾರ್ಯಕರ್ತೆ ಶ್ರೀಮತಿ ಸೈನಾಜ ಚಾಂದಕೋಟೆ ಸನ್ಮಾನಿಸಿ ಗೌರವಿಸಿದರು.

Read More

ವಿಜಯಪುರ: ಜಿಲ್ಲೆಯ ಆಲಮೇಲ ತಾಲ್ಲೂಕಿನ ಕಡಣಿಯ ಬೆರಗು ಪ್ರಕಾಶನ ಸಂಸ್ಥೆಯು ಪ್ರಸಕ್ತ ವರ್ಷದಿಂದ ಉತ್ತಮ ಪ್ರಕಾಶನ ಸಂಸ್ಥೆಯನ್ನು ಗುರುತಿಸಿ ಪ್ರಶಸ್ತಿ ನೀಡಲು ನಿರ್ಧರಿಸಿದೆ ಎಂದು ಸಂಚಾಲಕಿ ವಿಜಯಲಕ್ಷ್ಮಿ ಕತ್ತಿ ತಿಳಿಸಿದ್ದಾರೆ.ಕರ್ನಾಟಕ ಸರಕಾರದ ಸಚಿವರಾಗಿ ಕಾರ್ಯನಿರ್ವಹಿಸಿದ ದಿ.ಎಂ.ಸಿ.ಮನಗೂಳಿ ಸ್ಮರಣಾರ್ಥ ದತ್ತಿ ಪ್ರಶಸ್ತಿಯನ್ನು ಸಿಂದಗಿ ಶಾಸಕರಾದ ಶ್ರೀ ಅಶೋಕ ಮನಗೂಳಿ ಅವರು ಬೆರಗು ಪ್ರಕಾಶನದಲ್ಲಿ ಸ್ಥಾಪಿಸಿದ್ದು ಕರ್ನಾಟಕದಲ್ಲಿನ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಕಾಶನ ಸಂಸ್ಥೆಗೆ ನೀಡಲು ತೀರ್ಮಾನಿಸಲಾಗಿದೆ, ಪ್ರಶಸ್ತಿಯು ೨೫ ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿ ಪದಕ, ಪ್ರಶಸ್ತಿ ಪತ್ರ ಒಳಗೊಂಡಿದ್ದು, ಆಸಕ್ತ ಪ್ರಕಾಶನ ಸಂಸ್ಥೆಗಳು, ಲೇಖಕರು ಪ್ರಸ್ತಾವನೆ ಸಲ್ಲಿಸಬಹುದಾಗಿದೆ. ಸಾಹಿತ್ಯಾಸಕ್ತರು ಕೂಡಾ ಹೆಸರು ಸೂಚಿಸಬಹುದಾಗಿದೆ.ಹಾಗೂ ಮುಖಪುಟ ಕಲಾವಿದರೊಬ್ಬರಿಗೆ ೫ ಸಾವಿರ ರೂ.ನಗದು, ಪ್ರಶಸ್ತಿ ಫಲಕ ನೀಡಲಾಗುತ್ತಿದ್ದು, ಕಲಾವಿದರು ತಮ್ಮ ವಿವರಗಳನ್ನು ಸೆ. ೧೫ ರೊಳಗಾಗಿ ನೀಡುವಂತೆ ಅವರು ಕೋರಿದ್ದಾರೆ.

Read More

ಚಡಚಣ: ಕಲರ್ಸ್ ಕನ್ನಡ ಖಾಸಗಿ ವಾಹಿನಿಯಲ್ಲಿ ಜನಪ್ರಿಯತೆ ಪಡೆದಿರುವ ‘ಬಿಗ್ ಬಾಸ್’ ರಿಯಾಲಿಟಿ ಶೋ ಸೀಸನ್ 11 ರ ಸ್ಪರ್ಧಿಯಾಗಿ ಉತ್ತರ ಕರ್ನಾಟಕದ ಕಲಾವಿದ ಹಾಗೂ ಸಾಮಾಜಿಕ ಕೆಲಸದಲ್ಲಿ ತೊಡಗಿಕೊಂಡಿರುವ ಪಟ್ಟಣದ ‘ಕೇದಾರಿ ಕೆ.ಎಸ್’ ಅವರನ್ನು ಆಯ್ಕೆ ಮಾಡುವಂತೆ ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರು ‘ಬಿಗ್ ಬಾಸ್’ ತಂಡಕ್ಕೆ ಮನವಿ ಮಾಡಿಕೊಳ್ಳುತ್ತಿದ್ದಾರೆ.ಉತ್ತರ ಕರ್ನಾಟಕ ಭಾಗದ ಕಲಾವಿದರಾದ ಕೇದಾರಿ ಕೆ.ಎಸ್ ಅವರು ಚಡಚಣ ಪಟ್ಟಣದ ಮಧ್ಯಮ ವರ್ಗದ ಕುಟುಂಬದವರಾಗಿದ್ದು, ಚಲನಚಿತ್ರ, ಕಿರುಚಿತ್ರಗಳಲ್ಲಿ ಅಭಿನಯಿಸುವ ಜತೆಯಲ್ಲಿ ಕಳೆದ ಏಳು ವರ್ಷಗಳಿಂದ ಸಾಮಾಜಿಕ ಕೆಲಸಗಳಲ್ಲೂ ತೊಡಗಿಕೊಂಡಿದ್ದಾರೆ.ಕೇದಾರಿ ಅವರ ಅಭಿಮಾನಿಗಳು ಹಾಗೂ ಸಾರ್ವಜನಿಕರು ತಮ್ಮ ಫೇಸ್ಬುಕ್, ವಾಟ್ಸಾಪ್ ಸ್ಟೇಟಸ್, ಇನ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ನಾಲ್ಕೈದು ದಿನಗಳಿಂದ ಉತ್ತರ ಕರ್ನಾಟಕದ ಕಲಾವಿದನಿಗೆ ‘ಬಿಗ್ ಬಾಸ್’ ಶೋನಲ್ಲಿ ಸ್ಪರ್ಧಿಯಾಗಲು ಅವಕಾಶ ನೀಡಬೇಕೆಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

Read More

ವಿಜಯಪುರ: ಜಿಲ್ಲೆಯ ಆಲಮೇಲ ತಾಲೂಕಿನ ಮದನಹಳ್ಳಿ ಗ್ರಾಮದ ಶಿವಶರಣ ಗತ್ತರಗಿ ಮತ್ತು ಶ್ರೀಮತಿ ನಿರಂಜನಾ ಶಿವಶರಣ ದಂಪತಿಯ ೧.೧ ವರ್ಷದ ಮುದ್ದಿನ ಕುವರಿ ಶ್ರೀನಿಕಾ ಶ್ರೀಕೃಷ್ಣ ಗೋಕುಲಾಷ್ಟಮಿ ದಿನದಂದು ಬೆಣ್ಣೆ ಕದ್ದು ತಿನ್ನುವ ಬಾಲಕೃಷ್ಣ ನ ವೇಷದಲ್ಲಿ ಕಂಗೊಳಿಸಿದ್ದು ಹೀಗೆ..

Read More

ಸಿದ್ದಸಿರಿ ಸಕ್ಕರೆ ಕಾರ್ಖಾನೆಗೆ ಸಿಗದ ಅನುಮತಿ | ಧರಣಿಗೆ ವಿಪಕ್ಷ ನಾಯಕ ಅಶೋಕ್ ಸಾಥ್ | ದ್ವೇಷ ರಾಜಕಾರಣದ ಆರೋಪ ಕಲಬುರಗಿ: ಕಲಬುರ್ಗಿ ಜಿಲ್ಲೆಯ ಸಿದ್ದಸಿರಿ ಸಕ್ಕರೆ ಕಾರ್ಖಾನೆಯ ಮರು ಆರಂಭಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ ಸಕ್ಕರೆ ಕಾರ್ಖಾನೆ ಮಾಲೀಕರೂ ಆಗಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಧರಣಿ ನಡೆಸಿದ್ದಾರೆ.ಸಕ್ಕರೆ ಕಾರ್ಖಾನೆ ಆರಂಭಕ್ಕೆ ಕೋರ್ಟ್ ಆದೇಶ ನೀಡಿದರೂ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿಗೆ ಕ್ರಮ ವಹಿಸದ ನಿರ್ಧಾರವನ್ನು ಬಸನಗೌಡ ಪಾಟೀಲ್ ಖಂಡಿಸಿದ್ದಾರೆ. ಮಂಗಳವಾರ ರಾತ್ರಿಯಿಂದಲೂ ಯತ್ನಾಳ್ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿ ಬಿಟ್ಟು ತೆರಳದೇ ಧರಣಿ ನಡೆಸಿದ್ದಾರೆ.ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆ ಲೈಸನ್ಸ್ ನವೀಕರಣ ಆಗಿಲ್ಲ ಮತ್ತು ಎಥೆನಾಲ್ ಉತ್ಪಾದನೆ ವಿಚಾರದಲ್ಲಿ‌ ನಿಯಮ ಉಲ್ಲಂಘನೆಯಾಗಿದೆ ಎಂಬ ಕಾರಣ ನೀಡಿ ಮಾಲಿನ್ಯ ನಿಯಂತ್ರಣ ಮಂಡಳಿ ಕಾರ್ಖಾನೆ ಮುಚ್ಚುವಂತೆ ನೋಟಿಸ್ ನೀಡಿ, ಬಂದ್ ಮಾಡಿಸಿತ್ತು. ಮಂಡಳಿಯ ನಿರ್ಧಾರದ ವಿರುದ್ಧ ಹೈಕೋರ್ಟ್…

Read More