ಬಸವನ ಬಾಗೇವಾಡಿ: ತಾಲೂಕಿನ ಸಾತಿಹಾಳ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಸಾತಿಹಾಳ ಗ್ರಾಮ ಪಂಚಾಯಿತಿ ಸದಸ್ಯೆ ಕಮಲಾಬಾಯಿ ರೊಳ್ಳಿ ಉಚಿತವಾಗಿ ಕೊಡಮಾಡಿದ ಸಮವಸ್ತ್ರಗಳನ್ನು ವಿತರಿಸಲಾಯಿತು.
ಮಕ್ಕಳಿಗೆ ಸಮವಸ್ತ್ರಗಳನ್ನು ವಿತರಿಸಿ ಮಾತನಾಡಿದ ಗ್ರಾಪಂ ಸದಸ್ಯೆ ಕಮಲಾಬಾಯಿ ರೊಳ್ಳಿ ಅವರು, ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಶ್ರೀಮತಿ ಸೈನಾಜ ಚಾಂದಕೋಟೆ ಹಾಗೂ ಸಹಾಯಕಿ ಶ್ರೀಮತಿ ಮಡಿವಾಳಮ್ಮ ಕೋಲ್ಲಾರ ಇವರು ಮಕ್ಕಳನ್ನು ನಿತ್ಯ ಪ್ರೀತಿ-ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಾರೆ. ಪ್ರತಿದಿನ ಶಾಲಾ ಪೂರ್ವ ಶಿಕ್ಷಣ ಚಟುವಟಿಕೆ ಹಾಗೂ ಆಹಾರ ವಿತರಣೆಯನ್ನು ಕ್ರಮಬದ್ದವಾಗಿ ನಿರ್ವಹಿಸುತ್ತಾರೆ ಎಂದು ಮನದುಂಬಿ ಶ್ಲಾಘಿಸಿದರಲ್ಲದೆ, ಅವರ ಪ್ರಾಮಾಣಿಕ ಸೇವೆ ಮತ್ತು ಕರ್ತವ್ಯ ದಕ್ಷತೆಗೆ ಪ್ರತಿಫಲವಾಗಿ ತಾವು ಇಲ್ಲಿಯ ಮಕ್ಕಳಿಗೆ ಸಮವಸ್ತ್ರ ಕೂಡುಗೆ ನೀಡಿರುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಕೊಡುಗೆ ನೀಡಿದ ಶ್ರೀಮತಿ ಕಮಲಾಬಾಯಿ ರೋಳ್ಳಿ ಅವರನ್ನು ಅಂಗನವಾಡಿಯ ನಿಯೋಜಿತ ಮೇಲ್ವಿಚಾರಕಿ ಶ್ರೀಮತಿ ಸಾವಿತ್ರಿ ಬಾತಾವಾನಿ ಮತ್ತು ಕೇಂದ್ರದ ಕಾರ್ಯಕರ್ತೆ ಶ್ರೀಮತಿ ಸೈನಾಜ ಚಾಂದಕೋಟೆ ಸನ್ಮಾನಿಸಿ ಗೌರವಿಸಿದರು.
Subscribe to Updates
Get the latest creative news from FooBar about art, design and business.
ಅಂಗನವಾಡಿ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಿಸಿದ ಗ್ರಾಪಂ ಸದಸ್ಯೆ ರೊಳ್ಳಿ
Related Posts
Add A Comment

