ವಿಜಯಪುರ: ಬಿಜಾಪುರ ಲಿಂಗಾಯತ ಡೆವಲೆಪಮೆಂಟ್ ಸೌಹಾರ್ದವು ಗ್ರಾಹಕರ ವಿಶ್ವಾಸ ಗಳಿಸಿ, 10ನೇ ನೂತನ ಶಾಖೆಯನ್ನು ನಾಳೆ ದಿ.30 ಶುಕ್ರವಾರ ಬೆ.10ಗಂ. ನಾವದ ಕಟ್ಟಡ, ಮೊದಲನೇ ಮಹಡಿ, ಬಸವೇಶ್ವರ ವೃತ್ತ ಮುದ್ದೇಬಿಹಾಳದಲ್ಲಿ ಆರಂಭಿಸಲಾಗುತ್ತಿದೆ ಎಂದು ಅಧ್ಯಕ್ಷ, ವಿಧಾನಪರಿಷತ್ ಸದಸ್ಯ ಸುನೀಗೌಡ ಪಾಟೀಲ ತಿಳಿಸಿದರು.
ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಕುಂಟೋಜಿಯ ಭಾವೈಕ್ಯತಾ ಮಠದ ಪ.ಪೂ ಷ.ಬ್ರ ಡಾ. ಶ್ರೀಗುರು ಚನ್ನವೀರ ಶಿವಾಚಾರ್ಯರು ಸಾನಿಧ್ಯ ವಹಿಸಲಿದ್ದು, ಮುದ್ದೇಬಿಹಾಳ ಶಾಸಕ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಉದ್ಘಾಟಿಸಲಿದ್ದಾರೆ ಎಂದು ಸುನೀಗೌಡ ಪಾಟೀಲ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
