Subscribe to Updates
Get the latest creative news from FooBar about art, design and business.
Author: editor.udayarashmi@gmail.com
– ಗುರು ಆರ್ ಹಿರೇಮಠ ( ದೇವನಗಾಂವ)ಆಲಮೇಲ: ಕುತೂಹಲ ಕೆರಳಿಸಿದ್ದ ಸ್ಥಳೀಯ ಪಟ್ಟಣ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಮೀಸಲಾತಿ, ಚುನಾವಣೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ ಗದ್ದುಗೆ ಏರಲು ಎರಡು ರಾಷ್ಟ್ರೀಯ ಪಕ್ಷಗಳು ಮತ್ತು ಪಕ್ಷೇತರ ಸದಸ್ಯರು ತೆರೆಮರೆಯಲ್ಲಿ ಮುಸುಕಿನ ಗುದ್ದಾಟ ನಡೆಸಿದ್ದಾರೆ. ಒಟ್ಟಾರೇಯಾಗಿ ಅಧಿಕಾರ ಹಿಡಿಯುವ ತವಕದಲ್ಲಿದ್ದಾರೆ.ಆಲಮೇಲ ಪಟ್ಟಣ ಪಂಚಾಯ್ತಿ ಒಟ್ಟು 19 ಸದಸ್ಯರ ಬಲ ಹೊಂದಿದೆ. ಅದರಲ್ಲಿ ಬಿಜೆಪಿ 9, ಕಾಂಗ್ರೆಸ್ 7, ಪಕ್ಷೇತರ 3. ಅಧಿಕಾರಕ್ಕೆ ಏರಲು 10 ಜನ ಸದಸ್ಯರ ಬಲಬೇಕು.ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ (ಅ) ,ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ (ಬ) ಮೀಸಲಾತಿ ಘೋಷಣೆಯಾಗಿದೆ.ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯತಯಾಗಿ ಮೇಲ್ದರ್ಜೆಗೆರಿದ್ದಾಗ ಮೊದಲ ಅವಧಿಗೆ ಬಿಜೆಪಿಗೆ ಅಧಿಕಾರ ಹಿಡಿದಿತ್ತು. ಆಗ ಬಿಜೆಪಿ ಶಾಸಕರಿದ್ದರು.ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ (ಅ) ಇದ್ದು ಈ ಸ್ಥಾನಕ್ಕೆ ಬಿಜೆಪಿಯಲ್ಲಿ 5 ಜನ ಹಾಗೂ ಕಾಂಗ್ರೆಸ್ ನಲ್ಲಿ 2 ಜನ,ಪಕ್ಷೇತರ 1, ಒಟ್ಟು 8 ಜನ ಮಧ್ಯೆ ಪೈಫೋಟಿ ನಡೆಸುತ್ತಿದ್ದಾರೆ.ಬಿಜೆಪಿಯ…
ವಿಜಯಪುರ: ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ನಗರ ಮಂಡಲ ವತಿಯಿಂದ ಬಿಜೆಪಿ ಸದಸ್ಯತ್ವ ಅಭಿಯಾನದ ಕಾರ್ಯಾಗಾರ ಸಭೆ ನಡೆಯಿತು.ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಪಕ್ಷದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಮನೆ ಮನೆಗೆ ತೆರಳಿ ಸದಸ್ಯತ್ವ ಮಾಡುವ ಮೂಲಕ ಅಭಿಯಾನ ಯಶಸ್ವಿಗೊಳಿಸಬೇಕು ಎಂದು ಸಲಹೆ ನೀಡಿದರು.ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಂಕರ ಹೂಗಾರ ಮಾತನಾಡಿ, ದೇಶದ ಭವಿಷ್ಯದ ದೃಷ್ಟಿಯಿಂದ ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸುವ ಅವಶ್ಯಕತೆಯಿದೆ. ಹೀಗಾಗಿ ಸದಸ್ಯತ್ವ ಅಭಿಯಾನದಲ್ಲಿ ಅತ್ಯಂತ ಉತ್ಸಾಹದಿಂದ ನಾವೆಲ್ಲರೂ ಭಾಗವಹಿಸಿ, ರಾಜ್ಯದಲ್ಲೇ ವಿಜಯಪುರ ನಗರವನ್ನು ನಂಬರ್ ಒನ್ ಸ್ಥಾನ ಪಡೆಯೋಣ ಎಂದು ಹೇಳಿದರು.ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಸ್.ಎ.ಪಾಟೀಲ ಸದಸ್ಯತ್ವ ಅಭಿಯಾನದ ಕುರಿತು ಮಾಹಿತಿ ನೀಡಿದರು. ಪ್ರಧಾನ ಕಾರ್ಯದರ್ಶಿ ಮಳುಗೌಡ ಬಿರಾದಾರ, ಮಹಾನಗರ ಪಾಲಿಕೆ ಸದಸ್ಯರಾದ ಶಿವರುದ್ರ ಬಾಗಲಕೋಟ, ಪ್ರೇಮಾನಂದ ಬಿರಾದಾರ, ರಾಹುಲ್ ಜಾಧವ, ರಾಜಶೇಖರ ಕುರಿಯವರ, ಜವಾಹಾರ ಗೋಸಾವಿ, ಮಹೇಶ ಒಡೆಯರ, ಮುಖಂಡರಾದ ಬಸವರಾಜ ಬೈಚಬಾಳ, ಲಕ್ಷ್ಮೀ ಕನ್ನೋಳ್ಳಿ ಸೇರಿದಂತೆ ಮಹಾನಗರ ಪಾಲಿಕೆ ಸದಸ್ಯರು,…
ವಿಜಯಪುರ: ಶಿಕ್ಷಕರ ದಿನಾಚರಣೆಯ ಅಂಗವಾಗಿ ವ್ಹಾಲಿಬಾಲ್ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಂಡ ಕ್ರೀಡಾಕೂಟದಲ್ಲಿ ಶಿಕ್ಷಕ ಹಾಗೂ ಶಿಕ್ಷಕಿಯರಿಗಾಗಿ ವ್ಹಾಲಿಬಾಲ್ ಖೋಖೋ, ಥ್ರೋಬಾಲ್, ಸಾಂಸ್ಕೃತಿಕ ಕಾರ್ಯಕ್ರಮಗಳಾದ ಸಾಮೂಹಿಕ ಜಾನಪದ ಗಾಯನ ಹಾಗೂ ಪ್ರಬಂಧ ರಚನೆ ಸ್ಪರ್ಧೆಗಳು ಇಂದು ವಿಜಯಪುರ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಉದ್ಘಾಟನೆಯಾಯಿತು.ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಶೇಖರ ದೈವಾಡಗಿ ವ್ಹಾಲಿಬಾಲ್ ಗೆಳೆಯರ ಬಳಗದ ವತಿಯಿಂದ ಶಿಕ್ಷಕ ದಿನೋತ್ಸವ ನಿಮಿತ್ಯ ಹಮ್ಮಿಕೊಂಡ ಕಾರ್ಯ ಶ್ಲಾಘನೀಯ. ಜಿಲ್ಲೆಯ ಕ್ರೀಡಾಪಟುಗಳ ಕೀರ್ತಿ ರಾಜ್ಯ ರಾಷ್ಟ್ರ ಹಂತಕ್ಕೆ ಹರಡಲೆಂದು ಆಶಿಸುವುದಾಗಿ ತಿಳಿಸಿದರು.ಉಧ್ಘಾಟನಾ ಕಾರ್ಯಕ್ರಮದಲ್ಲಿ ನೌಕರರ ಸಂಘದ ಜಿಲ್ಲಾದ್ಯಕ್ಷರಾದ ಸುರೇಶ ಶೆಡಶ್ಯಾಳ ಅದ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಖಜಾನೆ ಅಧಿಕಾರಿಗಳಾದ ಹಣಮಂತ ಕಾಲತಿಪ್ಪಿ,ನೌಕರರ ಸಂಘದ ಜಿಲ್ಲಾ ಕೋಶಾದ್ಯಕ್ಷ ಸಯ್ಯದ ಜುಬೇರ ಕೆರೂರ, ರಾಜ್ಯ ಪರಿಷತ್ ಸದಸ್ಯ ವಿಜಯಕುಮಾರ ಹತ್ತಿ, ಪ್ರಧಾನ ಕಾರ್ಯದರ್ಶಿ ರಾಜಶೇಕರ ದೈವಾಡಗಿ, ಜಿಓಸಿಸಿ ಬ್ಯಾಂಕ ನಿರ್ದೇಶಕಿ ಜಯಶ್ರೀ ಬೆಣ್ಣಿ, ಬಾಗೇವಾಡಿಯ ನೌಕರರ ಸಂಘದ ಅದ್ಯಕ್ಷ ಶಿವಾನಂದ ಮಂಗಾನವರ, ತಿಕೋಟಾ…
ರಾಜ್ಯಪಾಲರ ನಡೆಗೆ ಖಂಡನೆ | ಕುಮಾರಸ್ವಾಮಿ, ನಿರಾಣಿ ವಿರುದ್ಧವೂ ಪ್ರಾಸಿಕ್ಯೂಷನ್ಗೆ ಅನುಮತಿ ನೀಡುವಂತೆ ಮನವಿ ಬೆಂಗಳೂರು: ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರ ನಡೆ ಖಂಡಿಸಿ ಕಾಂಗ್ರೆಸ್ ನಾಯಕರು ಶನಿವಾರ ‘ರಾಜಭವನ ಚಲೋ’ ನಡೆಸಿದರು.ರವಿವಾರ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ‘ರಾಜಭವನ ಚಲೋ’ ನಡೆಸಿ, ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ, ಬಿಜೆಪಿ ನಾಯಕರಾದ ಜನಾರ್ದನ ರೆಡ್ಡಿ, ಮುರುಗೇಶ್ ನಿರಾಣಿ ಹಾಗೂ ಶಶಿಕಲಾ ಜೊಲ್ಲೆ ಅವರ ವಿರುದ್ಧವೂ ಪ್ರಾಸಿಕ್ಯೂಷನ್ಗೆ ಅನುಮತಿ ನೀಡುವಂತೆ ಮನವಿ ಸಲ್ಲಿಸಿದರು.ರಾಜ್ಯಪಾಲರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್ ಅವರು, ರಾಜ್ಯಪಾಲರ ಕಚೇರಿಯನ್ನು ದುರುಪಯೋಗಪಡಿಸಿಕೊಂಡಿರುವುದನ್ನು ಪ್ರತಿಭಟಿಸಿ ಕಾಂಗ್ರೆಸ್ ಪಕ್ಷವು ‘ರಾಜಭವನ ಚಲೋ’ ಹಮ್ಮಿಕೊಂಡಿದೆ ಎಂದರು.ರಾಜಭವನ ರಾಜಕೀಯ ಪಕ್ಷದ ಕಚೇರಿಯಾಗಬಾರದು ಎಂಬ ಉದ್ದೇಶದಿಂದ ಈ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ನಾವು ‘ರಾಜಭವನ ಚಲೋ’ ಹಮ್ಮಿಕೊಂಡಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಅಲ್ಲ. ಈ ವಿಷಯ…
ಕೆಂಭಾವಿ: ಪಟ್ಟಣದ ಆದರ್ಶ ಶಿಕ್ಷಕರಾಗಿದ್ದ ದಿವಂಗತ ಚಂದ್ರಭಟ್ಟ ಜೋಷಿಯವರ ಸ್ಮರಣಾರ್ಥವಾಗಿ ಗುರುವಾರ ಆಯೋಜಿಸಿದ್ದ ಜೋಷಿ ಸಾಹಿತ್ಯ ವೇದಿಕೆಯಿಂದ ಅವರ ಶಿಷ್ಯರಾದ ಶಿಕ್ಷಕ ನಿಂಗನಗೌಡ ದೇಸಾಯಿಯವರ ಸಾಹಿತ್ಯ ಹಾಗೂ ಶೈಕ್ಷಣಿಕ ಸೇವೆಯನ್ನು ಪರಿಗಣಿಸಿ “ಜ್ಞಾನಚಂದ್ರ” ಪ್ರಶಸ್ತಿ ಪ್ರಧಾನ ಮಾಡಿ ಸನ್ಮಾನಿಸಿ ಗೌರವಿಸಲಾಯಿತು.ಇದೇ ವೇಳೆ ಪ್ರಶಸ್ತಿ ಪುರಸ್ಕೃತ ಸಾಹಿತಿ ನಿಂಗನಗೌಡ ದೇಸಾಯಿ ಮಾತನಾಡಿ, ವಿದ್ಯಾ ಗುರು ದಿ, ಚಂದ್ರಭಟ್ಟ ಜೋಶಿಯವರೊಂದಿಗಿನ ಒಡನಾಟ, ಅವರ ಬದುಕು, ಬರಹ, ಕುರಿತು ಮೆಲುಕು ಹಾಕುತ್ತಾ, ಅವರ ಶಿಷ್ಯನಾಗಿ ಪ್ರಶಸ್ತಿ ಸ್ವೀಕರಿಸುತ್ತಿರುವುದು ನನ್ನ ಸೌಭಾಗ್ಯವೇ ಸರಿ ಎಂದರು.ಪ್ರಮುಖರಾದ ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ವಾಮನರಾವ್ ದೇಶಪಾಂಡೆ, ಕೂಡಲಗಿಯ ಗಣಪತಿ ಮಹಾರಾಜರು, ಶ್ರೀಪಾದಭಟ್ಟರು, ಶ್ರೀವಲ್ಲಭಭಟ್ಟರು, ಗುಂಡಭಟ್ಟಜೋಶಿ ಸೇರಿದಂತೆ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.
ಚಡಚಣ: ಸಮೀಪದ ನಿವರಗಿ ಗ್ರಾಮದ ಶ್ರೀ ಸಂಗಮೇಶ್ವರ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ಚಡಚಣ ವಲಯ ಮಟ್ಟದ ಪ್ರೌಢ ಶಾಲಾ ಹಂತದ ಕ್ರೀಡಾಕೂಟದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.ಚಡಚಣ ಪಟ್ಟಣದ ಸರ್ಕಾರಿ ಉರ್ದು ಪ್ರೌಢ ಶಾಲಾ ಆವರಣದಲ್ಲಿ ಬುಧವಾರದಂದು ಹಮ್ಮಿಕೊಂಡಿದ್ದ ಪ್ರೌಢ ಶಾಲಾ ಹಂತದ ಕ್ರೀಡಾಕೂಟದಲ್ಲಿ ಈ ಸಾಧನೆ ಮಾಡಿದ್ದಾರೆ. ಬಾಲಕಿಯರ ವಿಭಾಗದಲ್ಲಿ ಕಬಡ್ಡಿಯಲ್ಲಿ ಪ್ರಥಮ, ಸಾಕ್ಷಿ ತೇಲಿ ಎತ್ತರ ಜಿಗಿತದಲ್ಲಿ ಪ್ರಥಮ, ಶೃತಿ ಚಿಕ್ಕಲಕಿ ದ್ವಿತೀಯ, ಮಹಾದೇವಿ ತೇಲಿ ೩೦೦೦ ಮೀ ಓಟದಲ್ಲಿ ದ್ವಿತೀಯ ಹಾಗೂ ೮೦೦ ಮೀ ಓಟದಲ್ಲಿ ದ್ವಿತೀಯ, ಸಂಜನಾ ಮೊರೆ ೧೫೦೦ ಮೀ ಓಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.ಬಾಲಕರ ವಿಭಾಗದಲ್ಲಿ ರವಿಶಂಕರ ಪೋಲಾದೆ ೧೦೦ ಮೀ ಓಟದಲ್ಲಿ ಪ್ರಥಮ, ೫೦೦೦ ಮೀ ನಡಿಗೆಯಲ್ಲಿ ದ್ವಿತೀಯ, ಪುನೀತ ಚೌಡ್ಮಿ ೮೦೦ ಮೀ ಓಟದಲ್ಲಿ ಪ್ರಥಮ, ರಾಘವೇಂದ್ರ ಕರ್ಜಗಿ ೪೦೦ ಮೀ ಓಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡು ತಾಲೂಕು…
ದೆಹಲಿಯಲ್ಲಿ ನಡೆದ 5ನೇ Global Fintech Festನಲ್ಲಿ ಪ್ರಧಾನಿ ಮೋದಿ ವಿಶ್ವಾಸ | ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಪ್ರಧಾನಿ ನವದೆಹಲಿ: 2029ರಲ್ಲಿ ದಾಖಲೆಯ ನಾಲ್ಕನೇ ಅವಧಿಗೆ ಅಧಿಕಾರಕ್ಕೆ ಮರಳುವುದಾಗಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಇತ್ತೀಚೆಗಷ್ಟೇ ನಡೆದ ಲೋಕಸಭೆ ಚುನಾವಣೆಯಲ್ಲಿ BJP ಪಕ್ಷವು ಬಹುಮತ ಗಳಿಸದಿರುವುದರಿಂದ ನರೇಂದ್ರ ಮೋದಿ ಅವರ ಪ್ರಾಬಲ್ಯ ಕುಂದುತ್ತಿದೆ ಎಂಬ ಚರ್ಚೆಗಳ ನಡುವೆಯೇ ಪ್ರಧಾನಿ ಮೋದಿ ತಾವು ಮತ್ತೆ 2029ರಲ್ಲಿ ಸತತ ನಾಲ್ಕನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾಗಿ ಬರುತ್ತೇನೆ ಎಂದು ಹೇಳಿದ್ದಾರೆ.ದೆಹಲಿಯಲ್ಲಿ ನಡೆದ 5ನೇ Global Fintech Festನಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ಮೋದಿ, ಸಂಸ್ಥೆಯ 10ನೇ ಗ್ಲೋಬಲ್ ಫಿನ್ ಟೆಕ್ ಫೆಸ್ಟ್ ಕಾರ್ಯಕ್ರಮಕ್ಕೂ ತಾವು ಬರುತ್ತೇವೆ ಎಂದು ಫಿನ್‌ಟೆಕ್ ಉದ್ಯಮದ ನಾಯಕರ ಸಭೆಗೆ ತಿಳಿಸಿದರು.”ಇದು ಗ್ಲೋಬಲ್ ಫಿನ್‌ಟೆಕ್ ಫೆಸ್ಟ್‌ನ 5 ನೇ ಆವೃತ್ತಿಯಾಗಿದೆ. ನಾನು 10 ನೇ ಆವೃತ್ತಿಯಲ್ಲಿಯೂ ಬರುತ್ತೇನೆ. ಭಾರತದ ಫಿನ್‌ಟೆಕ್ ಪರಿಸರ ವ್ಯವಸ್ಥೆಯು ಇಡೀ ಪ್ರಪಂಚದ ಜೀವನವನ್ನು ಸುಗಮಗೊಳಿಸುತ್ತದೆ ಎಂದು ನನಗೆ…
ಇಂಡಿ: ರಾಜ್ಯ ಸರಕಾರ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ ಲಿಂಕ್ ಜೋಡಣೆ ಮಾಡುವ ಕ್ರಮ ಖಂಡಿಸಿ, ಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಹಾಗೂ ಜಿಲ್ಲೆಯ ರೈತರು ಸೇರಿ ಸೆಪ್ಟೆಂಬರ್ ೪ ರಂದು ಮಧ್ಯಾಹ್ನ ೧೨ ಗಂಟೆಗೆ ವಿಜಯಪೂರ ನಗರದ ವಿದ್ಯುತ್ ಕಚೇರಿಯ ಮುಂದೆ ಪ್ರತಿಭಟನೆ ನಡೆಸುವುದಾಗಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಎಸ್.ಬಿ. ಕೆಂಬೋಗಿ ತಿಳಿಸಿದರು.ಶುಕ್ರವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.ಸರ್ಕಾರ ವಿದ್ಯುತ್ ನಿಗಮವನ್ನು ಖಾಸಗೀಕರಣ ಮಾಡಲು ಹುನ್ನಾರ ನಡೆಸಿದೆ. ರೈತರು ಇದರ ವಿರುದ್ದ ಪ್ರತಿಭಟಿಸಬೇಕೆಂದು ಕರೆ ನೀಡಿದರು.ಡಾ. ಸ್ವಾಮಿನಾಥನ ಸಮಿತಿಯು ಕಳೆದ ೨೩ ವರ್ಷಗಳ ಹಿಂದೆಯೇ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗಧಿಪಡಿಸಬೇಕೆಂದು ವರದಿ ನಿಡಿದ್ದರೂ ಕೂಡಾ ಅದು ಇಲ್ಲಿಯವರೆಗೆ ಸರ್ಕಾರ ಜಾರಿಗೆ ತಂದಿಲ್ಲ. ಇದೀಗ ಸರ್ಕಾರ ವಿದ್ಯುತ್ ಖಾಸಗೀಕರಣದ ಕಡೆಗೆ ಹೊರಟಿದೆ. ಇದರ ಬಗ್ಗೆ ರೈತರು ಎಚ್ಚತ್ತುಕೊಳ್ಳಬೇಕು ಎಂದು ಸೂಚನೆ ನೀಡಿದ ಅವರು ಸೆಪ್ಟೆಂಬರ್ ೪ ರಂದು…
ಮುದ್ದೇಬಿಹಾಳ: ಶ್ರೀ ಸಿದ್ದೇಶ್ವರ ಶ್ರೀಗಳ ಹಸ್ತದಿಂದ ವಿಜಯಪುರದಲ್ಲಿ ಪ್ರಾರಂಭವಾದ ಬಿಎಲ್‌ಡಿ ಸೌಹಾರ್ದ ಸಹಕಾರಿ ಸಂಘ ಸಧ್ಯ ಹಲವು ಶಾಖೆಗಳನ್ನು ಪ್ರಾರಂಭಿಸಿ ಎರಡೇ ವರ್ಷಗಳಲ್ಲಿ ದಾಖಲೆಯ ೪೦೦ಕೋಟಿ ರೂ ಗಳಷ್ಟು ವ್ಯವಹಾರ ನಡೆಸಿ ಸಾಧನೆಯತ್ತ ಮುನ್ನುಗ್ಗುತ್ತಿರುವದು ಹೆಮ್ಮೆಯ ವಿಷಯ ಎಂದು ಎಂಎಲ್‌ಸಿ ಸುನೀಲಗೌಡ ಪಾಟೀಲ ಹೇಳಿದರು.ಪಟ್ಟಣದ ಬಸವೇಶ್ವರ ವೃತ್ತದ ಬಳಿ ನೂತನವಾಗಿ ಪ್ರಾರಂಭವಾದ ಬಿಎಲ್‌ಡಿ ಸೌಹಾರ್ದ ಸಹಕಾರಿ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸಾರ್ವಜನಿಕರಿಗೆ ಸೇವೆ ನೀಡುವ ಉದ್ದೆಶದಿಂದ ಪ್ರಾರಂಭಿಸಲಾಗಿರುವ ಈ ಸೌಹಾರ್ದ ಬರುವ ದಿನಗಳಲ್ಲಿ ಬೆಂಗಳೂರಿನಲ್ಲಿರುವ ಉತ್ತರ ಕರ್ನಾಟಕದ ಜನತೆಗೆ ಅನುಕೂಲವಾಗಲೆಂದು ಅಲ್ಲೊಂದು ಸೇರಿದಂತೆ ಹಲವು ಕಡೆ ಹೆಚ್ಚಿನ ಶಾಖೆಗಳನ್ನು ತೆರೆಯುವ ಉದ್ದೇಶ ಹೊಂದಿದೆ. ನುರಿತ ಸಿಬ್ಬಂದಿ ಎಲ್ಲ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದು ಬರುವ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಯಲಿರುವ ವಿಶ್ವಾಸವನ್ನು ವ್ಯಕ್ತಪಡಿಸಿದರು.ದಿವ್ಯ ಸಾನಿಧ್ಯ ವಹಿಸಿದ್ದ ಕುಂಟೋಜಿ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ಶಿವಾಚಾರ್ಯರು ಮಾತನಾಡಿ ಬಿಎಲ್‌ಡಿ ಸಂಸ್ಥೆ ಅಂದರೆನೇ ಅದೊಂದು ದೊಡ್ಡ ಹೆಸರು. ಈ ಸಂಸ್ಥೆಗೆ ತನ್ನದೇ ಆದ ವ್ಯಕ್ತಿತ್ವ ಇದೆ. ಆರೋಗ್ಯ,…
ಸಿಂದಗಿ: ಬಡವರಿಗೆ ಹಂಚಿಕೆಯಾಗಬೇಕಾದ ಮನೆಗಳ ವಿಧಾನವನ್ನು ಬಿಟ್ಟು ಪುರಸಭೆಯ ಆಡಳಿತ ವ್ಯವಸ್ಥೆ ಯಾವ ರೀತಿ ಮಾಡಿದೆ ಎಂದರೆ ಎಸ್.ಸಿ/ಎಸ್.ಟಿ ಸಮುದಾಯಕ್ಕೆ ಬಂದಿರುವ ಮನೆಗಳನ್ನು ಸಾಮಾನ್ಯ ವರ್ಗದವರ ಕುಟುಂಬಗಳಿಗೆ ಮನೆ ಹಾಕಿ ಹಣ ಲೂಟಿ ಹೊಡೆಯೊದಕ್ಕೆ ಕೈಹಾಕಿದ್ದು ಇದು ನಾಚೀಗೇಡಿನ ಸಂಗತಿ ಎಂದು ಬಿಜೆಪ ಮಂಡಲ ತಾಲೂಕಾಧ್ಯಕ್ಷ ಸಂತೋಷ ಪಾಟೀಲ ಡಂಬಳ ಹೇಳಿದರು.ಪಟ್ಟಣದ ತಹಶೀಲ್ದಾರ್ ಕಛೇರಿಯ ಮುಂಭಾಗದಲ್ಲಿ ನಗರದ ಬಿಜೆಪಿಯ ಎಸ್.ಡಿ.ಮೋರ್ಚಾ ವತಿಯಿಂದ ನಡೆದ ಅಕ್ರಮವಾಗಿ ಬೇರೆ ವರ್ಗದವರಿಗೆ ಮನೆಗಳನ್ನು ಹಂಚಿಕೆ ಮಾಡಿದ ಅಧಿಕಾರಿಗಳ ಮೇಲೆ ಅಟ್ರಾಸಿಟಿ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿ ಮಾತನಾಡಿದ ಅವರು, ದಲಿತ ಸಮುದಾಯಕ್ಕೆ ಮಾಡಿದ ಬಹು ದೊಡ್ಡ ಅನ್ಯಾಯ. ಇದರಿಂದ ಬಡವರಿಗೆ ಅನ್ಯಾಯವಾಗಿದೆ. ದಿನದಲಿತರಿಗೆ ಸಿಗಬೇಕಾದ ಯೋಜನೆಗಳು ಸಿರಿವಂತರಿಗೆ ಸಿಗುವಂತಾಗುತ್ತಿದೆ. ಕೊಟ್ಟೆಂತರ ಹಣ ಲೂಟಿ ಹೊಡೆಯುವ ಹುನ್ನಾರ ನಡೆದಿದೆ. ಎಸ್.ಸಿ/ಎಸ್.ಟಿ ಮನೆಗಳನ್ನು ಯಾರೂ ಸಾಮಾನ್ಯ ವರ್ಗಕ್ಕೆ ಹಂಚಿಕೆ ಮಾಡಿದ್ದಾರೆ ಅವರ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಿಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು…
