ಕೆಂಭಾವಿ: ಪಟ್ಟಣದ ಆದರ್ಶ ಶಿಕ್ಷಕರಾಗಿದ್ದ ದಿವಂಗತ ಚಂದ್ರಭಟ್ಟ ಜೋಷಿಯವರ ಸ್ಮರಣಾರ್ಥವಾಗಿ ಗುರುವಾರ ಆಯೋಜಿಸಿದ್ದ ಜೋಷಿ ಸಾಹಿತ್ಯ ವೇದಿಕೆಯಿಂದ ಅವರ ಶಿಷ್ಯರಾದ ಶಿಕ್ಷಕ ನಿಂಗನಗೌಡ ದೇಸಾಯಿಯವರ ಸಾಹಿತ್ಯ ಹಾಗೂ ಶೈಕ್ಷಣಿಕ ಸೇವೆಯನ್ನು ಪರಿಗಣಿಸಿ “ಜ್ಞಾನಚಂದ್ರ” ಪ್ರಶಸ್ತಿ ಪ್ರಧಾನ ಮಾಡಿ ಸನ್ಮಾನಿಸಿ ಗೌರವಿಸಲಾಯಿತು.
ಇದೇ ವೇಳೆ ಪ್ರಶಸ್ತಿ ಪುರಸ್ಕೃತ ಸಾಹಿತಿ ನಿಂಗನಗೌಡ ದೇಸಾಯಿ ಮಾತನಾಡಿ, ವಿದ್ಯಾ ಗುರು ದಿ, ಚಂದ್ರಭಟ್ಟ ಜೋಶಿಯವರೊಂದಿಗಿನ ಒಡನಾಟ, ಅವರ ಬದುಕು, ಬರಹ, ಕುರಿತು ಮೆಲುಕು ಹಾಕುತ್ತಾ, ಅವರ ಶಿಷ್ಯನಾಗಿ ಪ್ರಶಸ್ತಿ ಸ್ವೀಕರಿಸುತ್ತಿರುವುದು ನನ್ನ ಸೌಭಾಗ್ಯವೇ ಸರಿ ಎಂದರು.
ಪ್ರಮುಖರಾದ ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ವಾಮನರಾವ್ ದೇಶಪಾಂಡೆ, ಕೂಡಲಗಿಯ ಗಣಪತಿ ಮಹಾರಾಜರು, ಶ್ರೀಪಾದಭಟ್ಟರು, ಶ್ರೀವಲ್ಲಭಭಟ್ಟರು, ಗುಂಡಭಟ್ಟಜೋಶಿ ಸೇರಿದಂತೆ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

