ಚಿಮ್ಮಡದ ಕಾರ್ತಿಕ ದೀಪೋತ್ಸವದಲ್ಲಿ ಪ್ರಭು ಶ್ರೀ ಅಭಿಮತ
ಚಿಮ್ಮಡ: ಪ್ರತಿಯೊಂದು ಧರ್ಮದ ಪೂರ್ವಜರು ಆಚರಣೆಗೆ ತಂದಿರುವ ಹಬ್ಬ, ಹರಿದಿನ, ಧಾರ್ಮಿಕ, ಸಾಮಾಜಿಕ ಉತ್ಸವಗಳಿಗೆ ವೈಜ್ಞಾನಿಕ ಹಿನ್ನೆಲೆಗಳಿವೆ ಎಂದು ಸ್ಥಳಿಯ ವಿರಕ್ತಮಠದ ಶ್ರೀ ಪ್ರಭು ಮಹಾಸ್ವಾಮಿಗಳು ಹೇಳಿದರು.
ಗ್ರಾಮದಲ್ಲಿ ಗುರುವಾರ ರಾತ್ರಿ ಶ್ರೀ ಪ್ರಭುಲಿಂಗೇಶ್ವರ ಕಾರ್ತಿಕೋತ್ಸವದ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ದೀಪೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು ಕಾರ್ತಿಕ ಮಾಸದ ಮಾಗಿಯ ಛಳಿಯಿಂದ ಪ್ರಕೃತಿದತ್ತ ಬರುವ ರೋಗಾಣುಗಳನ್ನು ನಾಶಗೊಳಿಸಲು ಆಚರಣೆಗೆ ತಂದಿರುವ ಈ ದೀಪೋತ್ಸವದಿಂದ ಮನುಷ್ಯರ ಜೀವನ ಬೆಳಗಲಿದೆಯಂದರು. ಸ್ಥಳಿಯ ರಘುನಾಥ ಪ್ರೀಯ ಸಾಧು ಮಹಾರಾಜರ ಮಠದ ಶ್ರೀ ಜನಾರ್ಧನ ಮಹಾರಾಜರು ಮಾತನಾಡಿದರು.,
ಬಾಳಪ್ಪಾ ಹಳಿಂಗಳಿ, ಅಣ್ಣಪ್ಪಗೌಡ ಪಾಟೀಲ, ರಾಮಪ್ಪಾ ಬಗನಾಳ, ಗ್ರಾಪಂ. ಮಾಜಿ ಅಧ್ಯಕ್ಷ ಶಂಕರ ಬಟಕುರ್ಕಿ, ಗುರಲಿಂಗಪ್ಪಾ ಪೂಜಾರಿ, ಆನಂದ ಕವಟಿ, ಪರಪ್ಪಾ ಪಾಲಭಾವಿ, ಅಶೋಕ ಧಡೂತಿ, ಬೀರಪ್ಪಾ ಹಳೆಮನಿ, ಪ್ರಭು ಮುಧೋಳ, ಬಸವರಾಜ ಕುಂಚನೂರ ಸೇರಿದಂತೆ ಹಲವಾರು ಜನ ಪ್ರಮುಖರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಗ್ರಾಮದ ಭಾಹುಸಾಹೇಬರ ಮಠದ ಆವರಣದಿಂದ ಬನಸಂಕರಿ ದೇವಸ್ಥಾನ, ಮಲ್ಲಿಕಾರ್ಜುನ ದೇವಸ್ಥಾನ, ದ್ಯಾಮವ್ವದೇವಿ ದೇವಸ್ಥಾನ, ಶ್ರೀ ವಿರಕ್ತಮಠ, ಶ್ರೀ ಪ್ರಭುಲಿಂಗೇಶ್ವರ ದೇವಸ್ಥಾನದ ಆವರಣ ಸೇರಿದಂತೆ ಗ್ರಾಮದ ಪ್ರಮುಖ ಬೀದಿಗಳನ್ನು ಟ್ಯಾಂಕರ ಮೂಲಕ ನೀರಿನಿಂದ ಶುಚಿಗೊಳಿಸಿ ರಂಗೋಲಿ ಹಾಕಿ ಸಾವಿರಾರು ದೀಪಗಳನ್ನು ಬೆಳಗಿಸುವ ಮೂಲಕ ಕಾರ್ತಿಕ ದೀಪೋತ್ಸವವನ್ನು ಅಧ್ದೂರಿಯಾಗಿ ಆವರಿಸಲಾಯಿತು. ಗ್ರಾ.ಪಂ. ಮಾಜಿ ಅಧ್ಯಕ್ಷ ಪರಪ್ಪಾ ಪಾಲಭಾವಿ ಕಾರ್ಯಕ್ರಮದಲ್ಲಿ ದಾಸೋಹ ಸೇವೆ ನೆರವೇರಿಸಿದರು.
ಶಿಕ್ಷಕ ಎಸ್.ಟಿ.ಕುಂಬಾರ ಸ್ವಾಗತಿಸಿದರು. ಪ್ರಕಾಶ ಪೂಜಾರಿ ನಿರೂಪಿಸಿ ವಂದಿಸಿದರು.

