ದೇವರಹಿಪ್ಪರಗಿ: ತಾಲ್ಲೂಕಿನ ಮಣೂರ ಗ್ರಾಮದ ವೆಂಕಟೇಶ್ವರ ಜಾತ್ರಾ ಮಹೋತ್ಸವ ಡಿ.೧೭ ರಂದು ಭಾನುವಾರ ಬೆಳಿಗ್ಗೆ ೧೦ ಗಂಟೆಗೆ ಜರುಗಲಿದೆ.
ದೇವಸ್ಥಾನದ ಆವರಣದಲ್ಲಿ ಜರುಗುವ ಮಹೋತ್ಸವದಲ್ಲಿ ಬೀದರ ಚಿದಂಬರ ಆಶ್ರಮದ ಡಾ.ಶಿವಕುಮಾರ ಸ್ವಾಮೀಜಿ, ವೀರಗೋಟ ಅಡವಿಲಿಂಗ ಮಹಾರಾಜರು, ವಿಜಯಪುರ ಜ್ಞಾನಯೋಗಾಶ್ರಮದ ಬಸವಲಿಂಗ ಸ್ವಾಮೀಜಿ, ದೇವೂರ ಹಿರೇಮಠದ ಮರುಳಾರಾಧ್ಯಶ್ರೀಗಳು, ಬಾಲಗಾವಿ ಗುರುದೇವ ಆಶ್ರಮದ ಅಮೃತಾನಂದ ಸ್ವಾಮೀಜಿ ಸೇರಿದಂತೆ ಸಂಸದರು, ಸ್ಥಳೀಯ ಹಾಗೂ ಸಿಂದಗಿ ಮತಕ್ಷೇತ್ರಗಳ ಶಾಸಕರು ಭಾಗವಹಿಸಲಿದ್ದಾರೆ.
ಶ್ರೀವೆಂಕಟೇಶ್ವರ ದೇವಸ್ಥಾನ ಸೇವಾ ಸಮೀತಿಯ ಅಧ್ಯಕ್ಷ ಎಲ್.ಆರ್.ಅಂಗಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕೊನೆಯಲ್ಲಿ ಮಹಾಪ್ರಸಾದ ಜರುಗುವುದು ಎಂದು ದೇವಸ್ಥಾನದ ಸೇವಾ ಸಮೀತಿ ಪ್ರಕಟಣೆ ಮೂಲಕ ತಿಳಿಸಿದೆ.
Subscribe to Updates
Get the latest creative news from FooBar about art, design and business.
Related Posts
Add A Comment
