ದೇವರಹಿಪ್ಪರಗಿ: ಶ್ರೀವೀರಭದ್ರೇಶ್ವರ ದೇವರ ನೂತನ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯ ಹನ್ನೊಂದನೆಯ ವರ್ಷದ ಕಾರ್ತಿಕೋತ್ಸವ ಹಾಗೂ ದೀಪೋತ್ಸವದ ಅಂಗವಾಗಿ ಶ್ರೀ ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವ ದಿ:೧೮ ಸೋಮವಾರದಂದು ಜರುಗಲಿದೆ.
ಪಟ್ಟಣದ ಬಿ.ಎಲ್.ಡಿ.ಇ ಪ್ರೌಢಶಾಲಾ ಆವರಣದಿಂದ ಮಧ್ಯಾನ್ಹ ೩ ಗಂಟೆಗೆ ಕುಂಭ, ಕಳಸ, ವಾದ್ಯ ವೈಭವಗಳೊಂದಿಗೆ ಆರಂಭಗೊಳ್ಳುವ ಮಹೋತ್ಸವ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ವೀರಭದ್ರೇಶ್ವರ ದೇವಸ್ಥಾನ ತಲುಪುವುದು. ನಂತರ ೭ ಗಂಟೆಗೆ ಧರ್ಮಸಭೆ ಆರಂಭಗೊಳ್ಳಲಿದೆ.
ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಧರ್ಮಸಭೆಯಲ್ಲಿ ಸಿಂದಗಿ, ದೇವರಹಿಪ್ಪರಗಿ, ದೇವೂರ, ಬಸವನ ಬಾಗೇವಾಡಿ, ಕನ್ನೋಳ್ಳಿ, ಕೊಕಟನೂರ, ಕನ್ನೂರ, ಚಿಮ್ಮಲಗಿ, ತಾಳಿಕೋಟಿ ಮಠಗಳ ಶ್ರೀಗಳು, ಪೂಜ್ಯರು, ಸ್ಥಳೀಯ ಮತ್ತು ಸಿಂದಗಿ ಮತಕ್ಷೇತ್ರಗಳ ಶಾಸಕರು, ಮಾಜಿಶಾಸಕರು, ರಾಜಕೀಯ ಧುರೀಣರು ಸೇರಿದಂತೆ ಪಟ್ಟಣದ ಪ್ರಮುಖರು ಪಾಲ್ಗೊಳ್ಳಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸದ್ಭಕ್ತರು ಭಾಗವಹಿಸಿ ಶ್ರೀಗಳ ಕೃಪೆಗೆ ಪಾತ್ರರಾಗುವುದರ ಜೊತೆಗೆ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಸೇವಾ ಸಮೀತಿ ಪ್ರಕಟಣೆ ಮೂಲಕ ತಿಳಿಸಿದೆ.
Subscribe to Updates
Get the latest creative news from FooBar about art, design and business.
Related Posts
Add A Comment
