ಕೊಲ್ಹಾರ: ತಾಲೂಕಿನ ರೋಣಿಹಾಳ ಸಮೀಪದ ಮುತ್ತಲದಿನ್ನಿ ಗ್ರಾಮದ ಆರಾಧ್ಯ ದೇವತೆ ಹನುಮಾನ ದೇವರ ಕಾರ್ತಿಕ ದೀಪೋತ್ಸವ ಮಂಗಲ ಕಾರ್ಯಕ್ರಮ ಡಿ.೧೬ ಶನಿವಾರ ಸಾಯಂಕಾಲ ಜರುಗುವದು ಎಂದು ದೇವಸ್ಥಾನ ಸಮೀತಿಯವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ದಿನಾಂಕ ೧೬ ಶನಿವಾರ ಸಾಯಂಕಾಲ ೬ ಘಂಟೆಗೆ ಸಂಗೀತ ಕಾರ್ಯಕ್ರಮ ೭ ಘಂಟೆಗೆ ಭಕ್ತಾಧಿಗಳಿಂದ ದೀಪೋತ್ಸವ ಬೆಳಗುವದು. ತದನಂತರ ೭.೩೦ ಘಂಟೆಗೆ ವಿಜಯಪೂರ ಜ್ಞಾನಯೋಗಾಶ್ರಮದ ಸಂಗಮೇಶ್ವರ ಮಹಾಸ್ವಾಮಿಗಳವರಿಂದ ಪ್ರವಚನ ಕಾರ್ಯಕ್ರಮ ಜರುಗುವದು. ಭಕ್ತಾಧಿಗಳು ದೇವರ ದರ್ಶನ ಆಶಿರ್ವಾದ ಮತ್ತು ಪ್ರವಚನವನ್ನು ಆಲಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಸಮೀತಿಯವರು ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
