ಬಸವನಬಾಗೇವಾಡಿ: ಪಟ್ಟಣದಲ್ಲಿ ಜ್ವರ ಪ್ರಕರಣಗಳು ಕಂಡುಬಂದಿರುವುದರಿಂದ ಆರೋಗ್ಯ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳ ಲಾರ್ವ ತಂಡವು ಶುಕ್ರವಾರ ಪಟ್ಟಣದ ವಿವಿಧ ಗಲ್ಲಿಗಳಲ್ಲಿ ಲಾರ್ವಾ ಸಮೀಕ್ಷೆ ಮಾಡುವ ಜೊತೆಗೆ ಸಂಶಯಾಸ್ಪದ ರೋಗಿಗಳ ರಕ್ತಸಂಗ್ರಹ ಮಾಡಿ ಜಿಲ್ಲಾ ಕೇಂದ್ರಕ್ಕೆ ಕಳುಹಿಸಿಕೊಡಲಾಯಿತು. ಜನರಿಗೆ ಮುಂಜಾಗ್ರತೆ ಕುರಿತು ಜಾಗೃತಿ ಮೂಡಿಸಲಾಯಿತು.
ತಾಲೂಕು ಆರೋಗ್ಯಾಧಿಕಾರಿ ಡಾ.ಎಸ್.ಎಸ್.ಓತಗೇರಿ ಅವರು, ಇಂದು ಪಟ್ಟಣದಲ್ಲಿ ನಮ್ಮ ಇಲಾಖೆಯು ನಡೆಸುವ ನಿಯಮಿತ ಲಾರ್ವ ಸಮೀಕ್ಷೆ ಮಾಡುವ ಜೊತೆಗೆ ಸಂಶಯ ಬಂದ ರೋಗಿಗಳಿಂದ ರಕ್ತ ಸಂಗ್ರಹ ಮಾಡಿ ರಕ್ತವನ್ನು ಪ್ರಯೋಗಾಲಯಕ್ಕೆ ಪರೀಕ್ಷೆ ಕಳುಹಿಸಿಕೊಡಲಾಗಿದೆ. ೧೦ ಜನರ ರಕ್ತವನ್ನು ವಿಜಯಪುರದ ಡಿಪಿಎಚ್ ಲ್ಯಾಬ್‌ಗೆ ಕಳುಹಿಸಲಾಯಿತು. ೧೨ ಜನರಿಗೆ ಬ್ಲಡ್ ಸ್ಮಿಮರ ಮಾಡಲಾಗಿದೆ. ಮನೆ ಮನೆಗೆ ತೆರಳಿ ಜ್ವರ ಸಮೀಕ್ಷೆ ಮಾಡಲಾಯಿತು. ಜ್ವರ ಬಂದರೆ ನಮ್ಮ ಕ್ಲಿನಿಕ್ ಇಲ್ಲವೇ ಸರ್ಕಾರಿ ಆಸ್ಪತ್ರೆಗೆ ತೆರಳಿ ರಕ್ತ ತಪಾಸಣೆ ಮಾಡಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕೆಂದು ಜನರಿಗೆ ತಿಳಿಸಲಾಯಿತು ಎಂದು ಮಾಹಿತಿ ನೀಡಿದರು.
ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಯುವ ಘಟಕದ ಅಧ್ಯಕ್ಷ ಅಶೋಕ ಹಾರಿವಾಳ ಅವರು, ಈಚೆಗೆ ಪಟ್ಟಣದಲ್ಲಿ ಹಂದಿಗಳಿಗೆ ರೋಗ ಬಂದು ಸಾಯುತ್ತಿವೆ. ಇದರಿಂದಾಗಿ ಸೊಳ್ಳೆಗಳ ಕಾಟ ವಿಪರೀತವಾಗಿದೆ. ಮಕ್ಕಳು ಸೇರಿದಂತೆ ಅನೇಕರಿಗೆ ಜ್ವರ ಸೇರಿದಂತೆ ವಿವಿಧ ರೋಗದಿಂದ ಬಳಲುತ್ತಿದ್ದಾರೆ. ಡೆಂಗ್ಯೂ ಪ್ರಕರಣಗಳು ಸಹ ಕಂಡುಬಂದಿವೆ. ಇದರ ಬಗ್ಗೆ ತಹಸೀಲ್ದಾರರಿಗೆ, ತಾಲೂಕು ಆರೋಗ್ಯಾಧಿಕಾರಿಗಳಿಗೆ ಈ ಕುರಿತು ಗಮನಕ್ಕೆ ತರಲಾಗಿತ್ತು. ಅದಕ್ಕಾಗಿ ಇಂದು ಅಧಿಕಾರಿಗಳ ತಂಡವು ಲಾರ್ವಾ ಸಮೀಕ್ಷೆ ಮಾಡುವ ಜೊತೆಗೆ ರಕ್ತವನ್ನು ಪರೀಕ್ಷೆ ಕಳುಹಿಸಲಾಗುತ್ತಿರುವುದು ಒಳ್ಳೆಯದು. ಕೂಡಲೇ ಅಧಿಕಾರಿಗಳು ಜನರ ಆರೋಗ್ಯದ ರಕ್ಷಣೆಗೆ ಕಡೆಗೆ ಗಮನ ಹರಿಸಬೇಕೆಂದರು.
ಸಮೀಕ್ಷಾ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳಾದ ಡಾ.ಸುರೇಶ ಪಾಚಾಪುರ, ಅನಿಲ ಹಿರೇಮಠ, ಮಲೇರಿಯಾ ಟೆಕ್ನಿಕಲ್ ಸೂಪರವೈಜರ ಸಂಜೀವ ಸಜ್ಜನ, ತಾಲೂಕು ಆರೋಗ್ಯಾಧಿಕಾರಿ ಡಾ.ಎಸ್.ಎಸ್.ಓತಗೇರಿ, ರಾಜಶೇಖರ ಚಿಂಚೋಳಿ, ಎಸ್.ಬಿ.ಪಾಟೀಲ, ವ್ಹಿ.ಆರ್.ಪವಾರ, ಮಲ್ಲು ಬಾಗೇವಾಡಿ, ಚನ್ನು ಅಸ್ಕಿ, ಸುಜಾತ ಕೆಸೇರಿ, ತಾಲೂಕು ಲಾರ್ವಾ ಸಮೀಕ್ಷಾ ತಂಡ, ಆಶಾ ಕಾರ್ಯಕರ್ತರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

