ಮುದ್ದೇಬಿಹಾಳ: ಹುಲ್ಲೂರ ಗ್ರಾಪಂನಲ್ಲಿ ಬಸವ ವಸತಿ ಯೋಜನೆ ಫಲಾನುಭವಿಗಳ ಆಯ್ಕೆಯಲ್ಲಿ ನಿಯಮ ಉಲ್ಲಂಘಿಸಿದ್ದಾರೆ, ಆಯ್ಕೆ ತಡೆಹಿಡಿಯುವಂತೆ ಕೊರಿ ಸಲ್ಲಿಸಿದ್ದ ಅರ್ಜಿಗೆ ಹಿಂದಿನ ಪ್ರಭಾರ ಪಿಡಿಓ ಮನ್ನಣೆ ನೀಡದ್ದನ್ನು ಮತ್ತು ಅಧ್ಯಕ್ಷ, ಉಪಾಧ್ಯಕ್ಷರ ಮಕ್ಕಳ
ಸರ್ವಾಧಿಕಾರ ಧೋರಣೆ ಹಾಗೂ ಆಡಳಿತದಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಅದೇ ಗ್ರಾಪಂ ಸದಸ್ಯ ಶಿವಾನಂದ ಲಮಾಣಿ ಗುರುವಾರದಿಂದ ಆರಂಭಿಸಿದ್ದ ಧರಣಿ ಸತ್ಯಾಗ್ರಹ ಗ್ರಾಪಂ ಮಾಜಿ ಅಧ್ಯಕ್ಷ ಹಣಮಗೌಡ ಬಿರಾದಾರ, ಹಾಲಿ ಸದಸ್ಯರು ಹಾಗೂ ಸ್ಥಳೀಯ ಮುಖಂಡರ ಮನವೊಲಿಕೆಯಿಂದಾಗಿ ಶುಕ್ರವಾರ ಅಂತ್ಯಗೊಂಡಿತು.
ಈ ಕುರಿತು ಮಾಧ್ಯಮದವರೊಂದಿಗೆ ಸಚೀನ ಮಾತನಾಡಿ, ಶುಕ್ರವಾರ ಧರಣಿ ಸ್ಥಳಕ್ಕೆ ಆಗಮಿಸಿದ ಗ್ರಾಪಂ ಮಾಜಿ ಅಧ್ಯಕ್ಷ ಹಣಮಗೌಡ ಬಿರಾದಾರ, ಹಾಲಿ ಸದಸ್ಯರು ಹಾಗೂ ಸ್ಥಳೀಯ ಮುಖಂಡರ ಮುಂದೆ ಈ ಪಂಚಾಯಿತಿಯಲ್ಲಿ ತಪ್ಪುಗಳು ನಡೆಯದಂತೆ, ಎಲ್ಲ ಸದಸ್ಯರಿಗೂ ಸಮಾನ ಗೌರವ ಕೊಡುವಂತೆ ಆಡಳಿತದಲ್ಲಿರುವವರ ಮನವೊಲಿಸುವ ಮತ್ತು ಸದಸ್ಯರ ಮಾತು, ಅರ್ಜಿಗಳಿಗೆ ಮಹತ್ವ ಕೊಡುವಂತೆ ತಿಳಿಹೇಳುವ ಭರವಸೆ ನೀಡಿದ್ದರಿಂದ ಧರಣಿ ಮುಕ್ತಾಯಗೊಳಿಸಬೇಕಾಯಿತು. ಮುಂದೆ ಮತ್ತೆ ತಪ್ಪುಗಳು ನಡೆದಲ್ಲಿ ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದರು.
ಈ ವೇಳೆ ಗ್ರಾಪಂ ಮಾಜಿ ಅಧ್ಯಕ್ಷ ಹಣಮಗೌಡ ಬಿರಾದಾರ ಮಾತನಾಡಿದರು.
ಈ ವೇಳೆ ಗ್ರಾಪಂ ಸದಸ್ಯರಾದ ಅಶೋಕಗೌಡ ಬಿರಾದಾರ, ಭೀಮಣ್ಣ ಮಾದರ, ದಿಲೀಪಕುಮಾರ ನಾಯಕ, ದಯಾನಂದ ಹಲಕಾವಟಗಿ, ಸಿರಿಯಪ್ಪ ದಾಸರ, ಸ್ಥಳೀಯ ಮುಖಂಡರಾದ ವಿನೋದ ಓಲೇಕಾರ, ಜಿ.ಎಚ್.ಚವ್ಹಾಣ, ಉಮೇಶ ಲಮಾಣಿ, ಭೀಮಸಿ ಮಾದರ, ಜಗದೀಶ ನಾಯ್ಕೋಡಿ, ರಾಮನಗೌಡ ಬಿರಾದಾರ, ಅಶೋಕ ಹೊಲ್ದೂರ, ಕಾಶೀನಾಥ ಬಿರಾದಾರ ಸೇರಿದಂತೆ ಮತ್ತಿತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

