Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಡಿ.10ರಂದು ಸುವರ್ಣ ಸೌಧ ಮುಂದೆ ಉಪವಾಸ ಸತ್ಯಾಗ್ರಹಕ್ಕೆ ಕರೆ

ಕಬ್ಬು ಕಟಾವು ವಿಚಾರಕ್ಕೆ ತಂದೆ-ಮಗನ ಬಲಿ: ತಡಲಗಿಯಲ್ಲಿ ರಕ್ತಪಾತ!

ಪಂಢರಪುರಕ್ಕೆ ತೆರಳುವ ದಿಂಡಿ ಪಾದಯಾತ್ರೆಯ ಭಕ್ತರಿಗೆ ಅಲ್ಪೋಪಹಾರ ಸೇವೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಮುಳವಾಡದಲ್ಲಿ ಕ್ಯಾಂಪಾ ಕೋಲಾ ಬೃಹತ್ ಘಟಕದಿಂದ ಹೊಸ ಪರ್ವ ಆರಂಭ!
(ರಾಜ್ಯ ) ಜಿಲ್ಲೆ

ಮುಳವಾಡದಲ್ಲಿ ಕ್ಯಾಂಪಾ ಕೋಲಾ ಬೃಹತ್ ಘಟಕದಿಂದ ಹೊಸ ಪರ್ವ ಆರಂಭ!

By No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಸಮೀಪದ ಮುಳವಾಡದ ಕೈಗಾರಿಕಾ ಅಭಿವೃದ್ಧಿ ಪ್ರದೇಶದ ಜಾಗದಲ್ಲಿ ₹1,622 ಕೋಟಿ ರೂ. ವೆಚ್ಚದ ನೂತನ ಕ್ಯಾಂಪಾ ಕೋಲಾ ಪಾನೀಯ ಉತ್ಪಾದನಾ ಘಟಕಕ್ಕೆ ನ.16ರಂದು ಭೂಮಿ ಪೂಜೆ ನೆರವೇರುವ ಮೂಲಕ ಈ ಭಾಗದವರ ಕೈಗಾರಿಕೆಗಳ ಆಗಮದ ಕನಸಿಗೆ ರೆಕ್ಕೆ-ಪುಕ್ಕ ಮೂಡಲಿದ್ದು, ಇದರಿಂದ ಸಂತಸ ಇಮ್ಮಡಿಗೊಳಿಸಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಎಫ್‌ಎಂಸಿಜಿ ವಿಭಾಗವಾದ ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ (ಆರ್‌ಸಿಪಿಎಲ್), ಕೆಐಎಡಿಬಿ ಮುಳವಾಡ ಕೈಗಾರಿಕಾ ಪ್ರದೇಶದಲ್ಲಿ ತನ್ನ ಪ್ರಸ್ತಾವಿತ ಹಸಿರು ಕ್ಷೇತ್ರ ಪಾನೀಯ ಉತ್ಪಾದನಾ ಘಟಕಕ್ಕೆ ಅಂದು ಭೂಮಿ ಪೂಜೆ ನಡೆಯಲಿದೆ.
ಬರಡಾಗಿದ್ದ ಮುಳವಾಡಕ್ಕೆ ಮುಗಿಲವಕಾಶ!
ಸುಮಾರು 16 ವರ್ಷಗಳ ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಮತ್ತು ಮುರುಗೇಶ ನಿರಾಣಿಯವರು ಕೈಗಾರಿಕೆ ಸಚಿವರಾಗಿದ್ದ ಸಮಯದಲ್ಲೇ ಮುಳವಾಡದಲ್ಲಿ ಕೈಗಾರಿಕೆಗಳ ಅಭಿವೃದ್ಧಿಗಾಗಿ ಸಾವಿರಾರು ಎಕರೆ ಭೂಮಿಯನ್ನು ಪಡೆದು ನೋಟಿಫಿಕೇಶನ್ ಮಾಡಲಾಗಿತ್ತು. ಅಲ್ಲಿಂದ ಇಲ್ಲಿಯ ತನಕ ಸಣ್ಣಪುಟ್ಟ ಗುಡಿ ಕೈಗಾರಿಕೆಗಳು ಬಿಟ್ಟರೆ ಯಾವೊಂದು ಉದ್ಯಮಗಳೂ ಇಲ್ಲ ತಲೆ ಎತ್ತಿರಲ್ಲ. ದೊಡ್ಡ ದೊಡ್ಡ ಕಂಪನಿಗಳು ಬಂದಿರಲಿಲ್ಲ. ಇಷ್ಟೊಂದು ಪ್ರಮಾಣದ ಭೂಮಿಯನ್ನು ನೀಡಿದ ರೈತರು ಕೂಡ ಬೇಸರಗೊಂಡು ತಾವು ಕೊಟ್ಟ ಜಮೀನು ಪಾಳು ಬಿದ್ದು ಹಾಳಾಗುತ್ತಿದೆ ಎಂದು ಹೇಳುತ್ತಿದ್ದರು. ಇದನ್ನು ಅರಿತಿದ್ದ ಈಗಿನ ಕೈಗಾರಿಕೆ, ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಹಾಗೂ ಮಾಜಿ ಸಚಿವ, ಬಸವನ ಬಾಗೇವಾಡಿ ಶಾಸಕರಾದ ಶಿವಾನಂದ ಪಾಟೀಲರ ಒತ್ತಾಸೆ ಮತ್ತು ಪ್ರಯತ್ನದಿಂದ ಇಲ್ಲಿ ಕ್ಯಾಂಪಾ ಕೋಲಾದಂತಹ ಬೃಹತ್ ಉದ್ಯಮ ಸಂಸ್ಥೆಯೊಂದು ನೆಲೆಯೂರುವಂತಾಗಿದೆ. ಇದರಿಂದ ಸದ್ಯ ಭೂಮಿ ಕಳೆದುಕೊಂಡಿದ್ದ ಜನರು ತಮ್ಮೂರಲ್ಲಿ ಕೈಗಾರಿಕೆಗಳು ಬರುತ್ತಿರುವುದಕ್ಕೆ ನಿಟ್ಟುಸಿರು ಬಿಟ್ಟು, ತಮ್ಮ ಮನೆಯ ಮಕ್ಕಳಿಗೆ ಉದ್ಯೋಗ ಸಿಗುತ್ತದೆ ಎನ್ನುವ ಭರವಸೆಯಲ್ಲಿ ಇದ್ದಾರೆ. ಸಚಿವ ಎಂ.ಬಿ.ಪಾಟೀಲರಂತೂ ಸತತ ಮೂರು ವರ್ಷದಿಂದ ಈ ಕಂಪನಿ ಆಗಮನಕ್ಕೆ ಯತ್ನಿಸಿದ್ದಾರೆ. ಇದರಿಂದ ಇನ್ನು ಮುಂದೆ ಮುಳವಾಡದಲ್ಲಿ ಅನೇಕ ದೊಡ್ಡ ಉದ್ಯಮಗಳು ಆರಂಭವಾಗುವ ಮುನ್ಸೂಚನೆಯೂ ದೊರೆತಂತಾಗಿದೆ.
5,200 ಉದ್ಯೋಗಗಳ ಸೃಷ್ಟಿ, 1,622 ಕೋಟಿ ಬಂಡವಾಳ!
ಈ ಯೋಜನೆಗೆ ಸುಮಾರು ₹1,622 ಕೋಟಿ ರೂ. ಹೂಡಿಕೆ ಮಾಡಲಾಗುತ್ತಿದೆ. ಒಟ್ಟು ಕೈಗಾರಿಕಾ ಪ್ರದೇಶದ ಸುಮಾರು 100 ಎಕರೆ ಜಾಗದಲ್ಲಿ ಈ ಘಟಕವನ್ನು ಎರಡು ಹಂತಗಳಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಏಳು ಹೈ-ಸ್ಪೀಡ್ ಉತ್ಪಾದನಾ ಮಾರ್ಗಗಳನ್ನು ಇದು ಹೊಂದಿದ್ದು, ಪೂರ್ಣ ಸಾಮರ್ಥ್ಯದಲ್ಲಿ ವರ್ಷಕ್ಕೆ ಸುಮಾರು 70 ಕೋಟಿ ಲೀಟರ್ ಉತ್ಪಾದನಾ ಸಾಮರ್ಥ್ಯ ಹೊಂದಿರಲಿದೆ. ಎರಡೂ ಹಂತಗಳು ಪೂರ್ಣಗೊಂಡ ನಂತರ ಸುಮಾರು 5,200 ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ. ಇದರೊಂದಿಗೆ ಪ್ಯಾಕೇಜಿಂಗ್, ಕಚ್ಚಾ ವಸ್ತು ಪೂರೈಕೆ, ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಸೇರಿದಂತೆ ಇತರ ಪೂರಕ ಕೈಗಾರಿಕೆಗಳಿಗೂ ಇದರಿಂದ ಉತ್ತೇಜನ ದೊರೆಯಲಿದೆ.
ಏನೇನು ತಯಾರು?
ಈ ಘಟಕದಲ್ಲಿ ಕಾರ್ಬೊನೇಟೆಡ್ ಸಾಫ್ಟ್ ಡ್ರಿಂಕ್ಸ್, ಜ್ಯೂಸ್, ರೆಡಿ-ಟು-ಸರ್ವ್ ಪಾನೀಯಗಳು, ಎನರ್ಜಿ ಡ್ರಿಂಕ್ಸ್ ಮತ್ತು ಪ್ಯಾಕೇಜ್ಡ್ ಕುಡಿಯುವ ನೀರು ತಯಾರಿಸಲಾಗುತ್ತದೆ. ಕ್ಯಾಂಪಾ, ಸೋಸಿಯೋ, ರಸ್ಕಿಕ್, ಸನ್‌ಕ್ರಷ್, ಇಂಡಿಪೆಂಡೆನ್ಸ್ ಮತ್ತು ಸ್ಪಿನ್ನರ್ ಸೇರಿದಂತೆ ಆರ್‌ಸಿಪಿಎಲ್‌ನ ವಿವಿಧ ಬ್ರ್ಯಾಂಡ್‌ಗಳಿಗೆ ಈ ಘಟಕ ಬೆಂಬಲ ನೀಡಲಿದೆ.
ಹೊಸ ಅವಕಾಶಗಳ ಹೊಳಹು..
ವಿಜಯಪುರ ಕೈಗಾರಿಕಾ ಅಭಿವೃದ್ಧಿಗೆ ಅಪಾರ ಸಾಮರ್ಥ್ಯ ಹೊಂದಿದೆ. ಇಂತಹ ಹೂಡಿಕೆಗಳು ನಮ್ಮ ಪ್ರದೇಶಕ್ಕೆ ಹೊಸ ಅವಕಾಶಗಳನ್ನು ತೆರೆದಿಡಲಿವೆ. ಆರ್‌ಸಿಪಿಎಲ್‌ನ ಘಟಕವು ಸ್ಥಳೀಯ ಕೈಗಾರಿಕಾ ವ್ಯವಸ್ಥೆಯನ್ನು ಬಲಪಡಿಸಿ, ಉದ್ಯೋಗ ಸೃಷ್ಟಿ ಮತ್ತು ಸಂಬಂಧಿತ ವಲಯಗಳ ವ್ಯವಹಾರಗಳಿಗೆ ಅವಕಾಶ ನೀಡಲಿದೆ. ಸಮತೋಲಿತ ಪ್ರಾದೇಶಿಕ ಅಭಿವೃದ್ಧಿಗೆ ಕೊಡುಗೆ ನೀಡುವ ಹೂಡಿಕೆಗಳಿಗೆ ಕರ್ನಾಟಕ ಸರ್ಕಾರ ಬದ್ಧವಾಗಿದೆ. ವಿಜಯಪುರದಲ್ಲಿ ಆರ್‌ಸಿಪಿಎಲ್ ಹೂಡಿಕೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಲಾಗಿದೆ.

ವಿಜಯಪುರದಿಂದಲೇ ಭಾರತದ ಗುರಿ..

ಭಾರತೀಯ ಗ್ರಾಹಕರನ್ನು ಆಳವಾಗಿ ಅರ್ಥಮಾಡಿಕೊಂಡು ಉತ್ಪಾದನೆ, ವಿತರಣೆ ಮತ್ತು ಪೂರೈಕೆಯಲ್ಲಿ ಹೂಡಿಕೆ ಮಾಡುವ ಮೂಲಕ ಬಲವಾದ ಮತ್ತು ಶಾಶ್ವತ ಗ್ರಾಹಕ ವ್ಯವಹಾರವನ್ನು ಕಟ್ಟುವುದು ತಮ್ಮ ಗುರಿ. ವಿಜಯಪುರ ಘಟಕ ಈ ಕಾರ್ಯತಂತ್ರದ ಪ್ರಮುಖ ಭಾಗವಾಗಿದೆ. ಇದು ಕರ್ನಾಟಕ ಮತ್ತು ನೆರೆಯ ಮಾರುಕಟ್ಟೆಗಳಿಗೆ ಸೇವೆ ನೀಡುವ ನಮ್ಮ ಸಾಮರ್ಥ್ಯವನ್ನು ಹೆಚ್ಚಿಸಲಿದೆ. ಈ ಹೂಡಿಕೆಯು ಕರ್ನಾಟಕದ ಮೇಲಿನ ನಮ್ಮ ದೀರ್ಘಕಾಲೀನ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ ಎಂದು ಆರ್‌ಸಿಪಿಎಲ್ ನಿರ್ದೇಶಕ ಟಿ.ಕೃಷ್ಣಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಉಕ ಭಾಗಕ್ಕೆ ಬೆಳಕು

ಈ ಯೋಜನೆಯು ಭಾರತದಲ್ಲಿ ಗ್ರಾಹಕ ವ್ಯವಹಾರವನ್ನು ನಿರ್ಮಿಸುವ ಆರ್‌ಸಿಪಿಎಲ್‌ನ ಪ್ರಯಾಣದಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ. ಇಂತಹ ಸದವಕಾಶ ವಿಜಯಪುರ ಜಿಲ್ಲೆಗೆ ಒದಗಿ ಅಭಿವೃದ್ಧಿ ಮತ್ತು ದೂರದೃಷ್ಟಿಯ ಮಹತ್ವದ ಹೆಜ್ಜೆ ಮೂಡುವಂತಾಗಿದೆ ಎಂದು ರಾಜ್ಯದ ಕೈಗಾರಿಕೋದ್ಯಮದ ತಜ್ಞರು ವಿಶ್ಲೇಷಿಸುತ್ತಿದ್ದಾರೆ. ಎಲ್ಲ ಕೈಗಾರಿಕೆಗಳು ಹಳೆಯ ಮೈಸೂರು ಭಾಗ ಮತ್ತು ಬೆಂಗಳೂರಿನ ಸುತ್ತಮುತ್ತವೇ ಇರಬೇಕೆನ್ನುವ ಸಂಪ್ರದಾಯವನ್ನು ಇದರಿಂದ ತಗ್ಗಿಸಿ ಉತ್ತರ ಕರ್ನಾಟಕ ಅಭಿವೃದ್ಧಿಗೆ ಇದು ಮುನ್ನುಡಿ ಬರೆಯಲಿದೆ.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಡಿ.10ರಂದು ಸುವರ್ಣ ಸೌಧ ಮುಂದೆ ಉಪವಾಸ ಸತ್ಯಾಗ್ರಹಕ್ಕೆ ಕರೆ

ಕಬ್ಬು ಕಟಾವು ವಿಚಾರಕ್ಕೆ ತಂದೆ-ಮಗನ ಬಲಿ: ತಡಲಗಿಯಲ್ಲಿ ರಕ್ತಪಾತ!

ಪಂಢರಪುರಕ್ಕೆ ತೆರಳುವ ದಿಂಡಿ ಪಾದಯಾತ್ರೆಯ ಭಕ್ತರಿಗೆ ಅಲ್ಪೋಪಹಾರ ಸೇವೆ

ಅಥಣಿಯಲ್ಲಿ ಜನಪರ ಸೇವೆಗೆ ಸಾಕ್ಷಿಯಾದ ಬೀಳ್ಕೊಡುಗೆ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಡಿ.10ರಂದು ಸುವರ್ಣ ಸೌಧ ಮುಂದೆ ಉಪವಾಸ ಸತ್ಯಾಗ್ರಹಕ್ಕೆ ಕರೆ
    In (ರಾಜ್ಯ ) ಜಿಲ್ಲೆ
  • ಕಬ್ಬು ಕಟಾವು ವಿಚಾರಕ್ಕೆ ತಂದೆ-ಮಗನ ಬಲಿ: ತಡಲಗಿಯಲ್ಲಿ ರಕ್ತಪಾತ!
    In (ರಾಜ್ಯ ) ಜಿಲ್ಲೆ
  • ಪಂಢರಪುರಕ್ಕೆ ತೆರಳುವ ದಿಂಡಿ ಪಾದಯಾತ್ರೆಯ ಭಕ್ತರಿಗೆ ಅಲ್ಪೋಪಹಾರ ಸೇವೆ
    In (ರಾಜ್ಯ ) ಜಿಲ್ಲೆ
  • ಅಥಣಿಯಲ್ಲಿ ಜನಪರ ಸೇವೆಗೆ ಸಾಕ್ಷಿಯಾದ ಬೀಳ್ಕೊಡುಗೆ
    In (ರಾಜ್ಯ ) ಜಿಲ್ಲೆ
  • ಮುಳವಾಡದಲ್ಲಿ ಕ್ಯಾಂಪಾ ಕೋಲಾ ಬೃಹತ್ ಘಟಕದಿಂದ ಹೊಸ ಪರ್ವ ಆರಂಭ!
    In (ರಾಜ್ಯ ) ಜಿಲ್ಲೆ
  • ತಿಕೋಟ: ಮಕ್ಕಳ ವಿಜ್ಞಾನ ಜಾತ್ರೆಯ ಕಹಳೆಗೆ ಸಿದ್ಧತೆ ಪೂರ್ಣ
    In (ರಾಜ್ಯ ) ಜಿಲ್ಲೆ
  • ಪಂಚ ತತ್ವಗಳಲ್ಲಿ ಜಲ
    In ವಿಶೇಷ ಲೇಖನ
  • ಎರಡನೇ ದಿನಕ್ಕೆ ಕಾಲಿಟ್ಟ ಕಬ್ಬು ಬೆಳೆಗಾರರ ಅಹೋರಾತ್ರಿ ಧರಣಿ
    In (ರಾಜ್ಯ ) ಜಿಲ್ಲೆ
  • ನ.೧೫ರಂದು ಮಹಾರಾಣಾ ಪ್ರತಾಪ್‌ಸಿಂಹ ಕಂಚಿನ ಪ್ರತಿಮೆ ಅನಾವರಣ
    In (ರಾಜ್ಯ ) ಜಿಲ್ಲೆ
  • ತಮ್ಮ ವಿಚಾರವೇ ಶ್ರೇಷ್ಠ ಎಂಬ ಮಡಿವಂತಿಕೆ ಕೈ ಬಿಡಬೇಕು :ಭೃಂಗಿಮಠ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.