ಉದಯರಶ್ಮಿ ದಿನಪತ್ರಿಕೆ
ಸಿಂದಗಿ: 2024 ಡಿ 10 ರಂದು ಬೆಳಗಾವಿಯಲ್ಲಿ ನಡೆದ 2ಎ ಮೀಸಲಾತಿ ಹೋರಾಟವನ್ನು ಹತ್ತಿಕ್ಕಲು ಸರಕಾರ ಹಾಗೂ ಪೊಲೀಸರು ಲಾಠಿ ಪ್ರಹಾರ ನಡೆಸಿ ಸಮಾಜಕ್ಕೆ ನೋವು ಉಂಟು ಮಾಡಿದ್ದು ಅದರ ನಿಮಿತ್ಯ ಡಿ 10.26 ರಂದು ಬೆಳಗಾವಿ ಸುವರ್ಣ ಸೌಧ ಮುಂದೆ ಒಂದು ದಿನದ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡು ಕರಾಳ ದಿನವನ್ನಾಗಿ ಆಚರಿಸೋಣ. ಕಾರಣ ಈ ತಾಲೂಕಿನಿಂದ ಸಹಸ್ರಾರು ಸಂಖ್ಯೆಯಲ್ಲಿ ಪಂಚಮಸಾಲಿ ಸಮಾಜದ ಎಲ್ಲ ಗುರು ಹಿರಿಯರು ಹಾಗೂ ಯುವ ಮಿತ್ರರು ಭಾಗವಹಿಸುವಂತೆ ಕೂಡಲಸಂಗಮ ಜಗದ್ಗುರು ಬಸವ ಜಯ ಮೃತ್ಯುಂಜಯ ಮಹಾಸ್ವಾಮಿಗಳು ಕರೆ ನೀಡಿದರು.
ನಗರದ ಬಸವ ಮಂಟಪದಲ್ಲಿ ಗುರುವಾರ ಸಂಜೆ ನಡೆಸಿದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಪಂಚಮಸಾಲಿ ಸಮಾಜದ ಅಧ್ಯಕ್ಷ ಎಂ ಎಂ ಹಂಗರಗಿ, ಮಾಜಿ ಜಿಪಂ ಉಪಾಧ್ಯಕ್ಷ ಸಿದ್ದರಾಮ ಪಾಟೀಲ ಹೂನಳ್ಳಿ ಮಾತನಾಡಿ, ಕಳೆದ 2024 ಡಿಸೆಂಬರ್ 10. ಬೆಳಗಾವಿಯಲ್ಲಿ ನಡೆದ ಹೋರಾಟದ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿ ದಬ್ಬಾಳಿಕೆ ನಡೆಸಿದ ದಿನವನ್ನು ನಾವೆಲ್ಲ ಮರೆಯುವಂತಿಲ್ಲ.ಈ ಘಟನೆ ನಮಗೆಲ್ಲ ಮರೆಯಲಾಗದ ಕಹಿ ದಿನ. ಈ ಕಹಿ ಘಟನೆ ನಡೆದ ದಿನವನ್ನು ಡಿಸೆಂಬರ್ 10.2026 ರಂದು ಪಂಚಮಸಾಲಿಗಳು ಕರಾಳ ದಿನವೆಂದು
ಆಚರಿಸಿ ರಾಜ್ಯ ಸರಕಾರಕ್ಕೆ ಬಿಸಿ ಮುಟ್ಟಿಸೋಣ ಅದಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಸಾವಿರಾರು ಸಂಖ್ಯೆಯಲ್ಲಿ ಸಮಾಜ ಬಾಂಧವರು ಆಗಮಿಸಿ ಶಕ್ತಿ ಪ್ರದರ್ಶನ ನೀಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಆನಂದ್ ಎನ್ ಶಾಬಾದಿ, ವ್ಹಿ ಬಿ ಕುರಡಿ. ಅಶೋಕ ಅಲ್ಲಾಪುರ. ವಕೀಲರಾದ ಸಿದ್ದನಗೌಡ ಪಾಟೀಲ ಗುಂದಗಿ, ದಾನಪಗೌಡ ಚನಗೊಂಡ. ಮುಖಂಡರಾದ ಶ್ರೀಶೈಲ್ ಯಳಮೇಲಿ, ಬಿ.ಜಿ ಚನಗೊಂಡ. ಕಾಳಣ್ಣ ಬಗಲಿ, ಶಂಕರ ಬಂಥನಾಳ. ಶಿವರಾಜ ಪೊ ಪಾಟೀಲ ಸೇರಿದಂತೆ ಅನೇಕರಿದ್ದರು

