Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಎರಡನೇ ದಿನಕ್ಕೆ ಕಾಲಿಟ್ಟ ಕಬ್ಬು ಬೆಳೆಗಾರರ ಅಹೋರಾತ್ರಿ ಧರಣಿ

ನ.೧೫ರಂದು ಮಹಾರಾಣಾ ಪ್ರತಾಪ್‌ಸಿಂಹ ಕಂಚಿನ ಪ್ರತಿಮೆ ಅನಾವರಣ

ತಮ್ಮ ವಿಚಾರವೇ ಶ್ರೇಷ್ಠ ಎಂಬ ಮಡಿವಂತಿಕೆ ಕೈ ಬಿಡಬೇಕು :ಭೃಂಗಿಮಠ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ನ.೧೫ರಂದು ಮಹಾರಾಣಾ ಪ್ರತಾಪ್‌ಸಿಂಹ ಕಂಚಿನ ಪ್ರತಿಮೆ ಅನಾವರಣ
(ರಾಜ್ಯ ) ಜಿಲ್ಲೆ

ನ.೧೫ರಂದು ಮಹಾರಾಣಾ ಪ್ರತಾಪ್‌ಸಿಂಹ ಕಂಚಿನ ಪ್ರತಿಮೆ ಅನಾವರಣ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ತಾಳಿಕೋಟೆ: ಐತಿಹಾಸಿಕ ನಗರ ತಾಳಿಕೋಟೆಯಲ್ಲಿ ಹಿಂದೂ ಸೂರ್ಯ, ಮೇವಾಡದ ಸಿಂಹ, ಸೂರ್ಯವಂಶಿ ರಾಜಪೂತ ದೊರೆ ಮಹಾರಾಣಾ ಪ್ರತಾಪ್ ಸಿಂಹ ಅವರ ಭವ್ಯ ಕಂಚಿನ ಪ್ರತಿಮೆ ಅನಾವರಣ ಸಮಾರಂಭವು ನವೆಂಬರ್ ೧೫ರಂದು ಭಾನುವಾರ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ.
ಈ ಐತಿಹಾಸಿಕ ಸಮಾರಂಭದ ಅಂಗವಾಗಿ ಅಂದು ಬೆಳಿಗ್ಗೆ ೮ ಗಂಟೆಗೆ ನಗರದ ರಾಜಪೂತ ಓಣಿಯಿಂದ ಭವ್ಯ ಶೋಭಾಯಾತ್ರೆ ಆರಂಭಗೊಳ್ಳಲಿದೆ. ಸಕಲ ವಾದ್ಯ ವೈಭವ, ವಿವಿಧ ಕಲಾತಂಡಗಳು ಹಾಗೂ ಸಮಾಜ ಬಾಂಧವರ ಉತ್ಸಾಹದೊಂದಿಗೆ ಹೊರಡುವ ಶೋಭಾಯಾತ್ರೆಯು ನಗರದ ಪ್ರಮುಖ ರಸ್ತೆಗಳು ಮತ್ತು ವೃತ್ತಗಳ ಮೂಲಕ ಸಾಗಿ ಮಹಾರಾಣಾ ಪ್ರತಾಪ್ ಸಿಂಹ ವೃತ್ತವನ್ನು ತಲುಪಲಿದೆ.
ಕನ್ನಡ ಶಾಲಾ ಮೈಧಾನದಲ್ಲಿ ನಡೆಯಲಿರುವ ಅನಾವರಣ ಸಮಾರಂಭದ ದಿವ್ಯ ಸಾನಿದ್ಯವನ್ನು ಶ್ರೀ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಪರಮಪೂಜ್ಯ ಶ್ರೀ ಸಿದ್ಧಲಿಂಗ ದೇವರು, ವಿದ್ವಾನ್ ಶ್ರೀ ಷ.ಬ್ರ. ಗುರುಲಿಂಗ ಶಿವಾಚಾರ್ಯರು, ಬಾಲ ತಪಸ್ವಿ ಶ್ರೀ ಸೋಮಲಿಂಗ ಮಹಾಸ್ವಾಮಿಗಳು, ಹಾಗೂ ಮೇ.ಮೂ. ಶ್ರೀ ಭೀಮಾಶಂಕರ ಜೋಶಿ ಅವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ.
ಭಾರತ ಸರ್ಕಾರದ ಸಚಿವರಾದ ಪ್ರಲ್ಹಾದ ಜೋಶಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಮಾಜಿ ಕೇಂದ್ರ ಸಚಿವರು ಹಾಗೂ ಸಂಸದರಾದ ಅನುರಾಗ್ ಸಿಂಗ್ ಠಾಕೂರ್ ಅವರು ಮಹಾರಾಣಾ ಪ್ರತಾಪ್ ಸಿಂಹ ಅವರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಹಾಗೂ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿ, ಅಧ್ಯಕ್ಷರಾದ ಸಿ.ಎಸ್. ನಾಡಗೌಡ (ಅಪ್ಪಾಜಿ) ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಸಚಿವರಾದ ಡಾ. ಅಜಯಸಿಂಗ್ ಧರ್ಮಸಿಂಗ್ ಅವರು ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ಸಂಸದ ರಮೇಶ ಜಿಗಜಿಣಗಿ, ವಿಜಯಪುರ ನಗರ ಶಾಸಕ ಕೇಂದ್ರ ಮಾಜಿ ಸಚಿವ ಬಸನಗೌಡ ಪಾಟೀಲ(ಯತ್ನಾಳ), ಮಾಜಿ ಸಚಿವ ಶಿವಾನಂದ ಪಾಟೀಲ, ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ(ಕುದರಿಸಾಲವಾಡಗಿ), ಮಾಜಿ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ), ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಈಶ್ವರಸಿಂಗ್ ಠಾಕೂರ, ಡಾ.ಬಿ.ವೆಂಕಟಸಿAಗ್, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ), ಆರ್.ಬಾಲಾಜಿಸಿಂಗ್, ಕೆಕೆಓದ ಅಧ್ಯಕ್ಷ ಉದಯಸಿಂಗ್, ಸುಭಾಸಸಿಂಗ್ ಜಮಾದಾರ, ಶಿವಾಶುಸಿಂಗ್ ರಜಪೂತ, ಶ್ರೀಮತಿ ಸಂದ್ಯಾತಾಯಿ ರಜಪೂತ, ಸುಜೀತಸಿಂಗ್ ಠಾಕೂರ, ಮಹಾವೀರ ಭಾರತಿ, ತಾಳಿಕೋಟೆ ರಜಪೂತ ಸಮಾಜದ ಅಧ್ಯಕ್ಷ ಹರಿಸಿಂಗ್ ಮೂಲಿಮನಿ, ಆಗಮಿಸಲಿದ್ದಾರೆ.
ಮಹಾರಾಣಾ ಪ್ರತಾಪ್ ಸಿಂಹ ಅವರು ತಮ್ಮ ಶೌರ್ಯ, ಸ್ವಾಭಿಮಾನ, ದೇಶಪ್ರೇಮ ಹಾಗೂ ಸ್ವಾತಂತ್ರ÷್ಯಕ್ಕಾಗಿ ನಡೆಸಿದ ಹೋರಾಟದ ಮೂಲಕ ಭಾರತೀಯ ಇತಿಹಾಸದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ. ಅವರ ಸಾಹಸಗಾಥೆ ಮತ್ತು ಆದರ್ಶಗಳು ಇಂದಿನ ಯುವಜನತೆಗೆ ಪ್ರೇರಣೆಯಾಗಿದ್ದು, ಅವರ ಸ್ಮರಣಾರ್ಥ ತಾಳಿಕೋಟೆಯಲ್ಲಿ ಕಂಚಿನ ಪ್ರತಿಮೆ ಸ್ಥಾಪನೆಯಾಗಿದ್ದು ಅನಾವರಣದೊಂದಿಗೆ ನಗರದಲ್ಲಿ ಐತಿಹಾಸಿಕ ಮಹತ್ವ ಪಡೆಯಲಿದೆ.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಎರಡನೇ ದಿನಕ್ಕೆ ಕಾಲಿಟ್ಟ ಕಬ್ಬು ಬೆಳೆಗಾರರ ಅಹೋರಾತ್ರಿ ಧರಣಿ

ತಮ್ಮ ವಿಚಾರವೇ ಶ್ರೇಷ್ಠ ಎಂಬ ಮಡಿವಂತಿಕೆ ಕೈ ಬಿಡಬೇಕು :ಭೃಂಗಿಮಠ

ಧಾರ್ಮಿಕ ಪರ್ವ ಮಹಾಮಹೋತ್ಸವ ಇಂದಿನಿಂದ

ಸಂಗೀತ – ನೃತ್ಯೋತ್ಸವ: ನ.೧೪ರಿಂದ ಎರಡು ದಿನಗಳ ಕಲಾ ಧಾರಾ-೨

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಎರಡನೇ ದಿನಕ್ಕೆ ಕಾಲಿಟ್ಟ ಕಬ್ಬು ಬೆಳೆಗಾರರ ಅಹೋರಾತ್ರಿ ಧರಣಿ
    In (ರಾಜ್ಯ ) ಜಿಲ್ಲೆ
  • ನ.೧೫ರಂದು ಮಹಾರಾಣಾ ಪ್ರತಾಪ್‌ಸಿಂಹ ಕಂಚಿನ ಪ್ರತಿಮೆ ಅನಾವರಣ
    In (ರಾಜ್ಯ ) ಜಿಲ್ಲೆ
  • ತಮ್ಮ ವಿಚಾರವೇ ಶ್ರೇಷ್ಠ ಎಂಬ ಮಡಿವಂತಿಕೆ ಕೈ ಬಿಡಬೇಕು :ಭೃಂಗಿಮಠ
    In (ರಾಜ್ಯ ) ಜಿಲ್ಲೆ
  • ಧಾರ್ಮಿಕ ಪರ್ವ ಮಹಾಮಹೋತ್ಸವ ಇಂದಿನಿಂದ
    In (ರಾಜ್ಯ ) ಜಿಲ್ಲೆ
  • ಸಂಗೀತ – ನೃತ್ಯೋತ್ಸವ: ನ.೧೪ರಿಂದ ಎರಡು ದಿನಗಳ ಕಲಾ ಧಾರಾ-೨
    In (ರಾಜ್ಯ ) ಜಿಲ್ಲೆ
  • ಸಚಿವ ಮಧು ಬಂಗಾರಪ್ಪ ವಿಜಯಪುರ ಜಿಲ್ಲಾ ಪ್ರವಾಸ
    In (ರಾಜ್ಯ ) ಜಿಲ್ಲೆ
  • ಯುವಜನತೆ ಸೃಜನಶೀಲತೆಗೆ ಯುವಜನೋತ್ಸವ ವೇದಿಕೆ :ಸಂಬಣ್ಣಿ
    In (ರಾಜ್ಯ ) ಜಿಲ್ಲೆ
  • ಕೋಳಿ ಸಾಕಾಣಿಕೆಯಲ್ಲಿ ವೈಜ್ಞಾನಿಕ ನಿರ್ವಹಣೆ, ಆರೋಗ್ಯ ಸಂರಕ್ಷಣೆ ಹಾಗೂ ಉದ್ಯಮಶೀಲತೆ ಕುರಿತು ಮೂರು ದಿನಗಳ ರೈತರ ತರಬೇತಿ
    In (ರಾಜ್ಯ ) ಜಿಲ್ಲೆ
  • ಸರ್ಕಾರಿ ನರ್ಸಿಂಗ್ ಮಹಾವಿದ್ಯಾಲಯದಲ್ಲಿ ಉಳಿದಿರುವ ಎರಡು ಬಿ.ಎಸ್‌ಸಿ ನರ್ಸಿಂಗ್ ಸೀಟುಗಳ ಭರ್ತಿಗೆ ನ.೧೪ರಂದು ನೇರ ಸಂದರ್ಶನ
    In (ರಾಜ್ಯ ) ಜಿಲ್ಲೆ
  • ಹಿಂಗಾರು-ಬೇಸಿಗೆ ಬೆಳೆಗಳಿಗೆ ವಿಮೆ ಕವಚ: ಕೃಷಿ ಇಲಾಖೆಯಿಂದ ಅಧಿಸೂಚನೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.