ಉದಯರಶ್ಮಿ ದಿನಪತ್ರಿಕೆ
ಚಡಚಣ: ಕಾರ್ತಿಕ ಮಾಸದ ಏಕಾದಶಿ ಪ್ರಯುಕ್ತ ಬೆಳಗಾವಿ ಜಿಲ್ಲೆಯ ಓಬಳಾಪುರದಿಂದ ಪಂಢರಪುರಕ್ಕೆ ತೆರಳುತ್ತಿರುವ ದಿಂಡಿ ಪಾದಯಾತ್ರೆಯ ಭಕ್ತರಿಗೆ ಝಳಕಿ ಗ್ರಾಮದ ನಾರಾಯಣ ಜಹಾಗೀರದಾರ ಅವರ ಮನೆಯಲ್ಲಿ ಅಲ್ಪೋಪಹಾರದ ವ್ಯವಸ್ಥೆ ಮಾಡಲಾಯಿತು.
ಝಳಕಿ ಗ್ರಾಮದ ನಾರಾಯಣ ಜಹಾಗೀರದಾರ ಅವರ ಮನೆಯಲ್ಲಿ ತುಳಸಿ ವೃಂದಾವನದ ಭಜನೆ ಹಾಗೂ ಮಹಾಪೂಜೆ ನೆರವೇರಿಸಿದ ಬಳಿಕ ಪಾದಯಾತ್ರೆಯ ಭಕ್ತರಿಗೆ ಅಲ್ಪೋಪಹಾರ ವಿತರಿಸಿ ಸೇವೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಪಾಂಡುರಂಗ ಜಹಾಗೀರದಾರ, ಯುವ ಮುಖಂಡ ರಾಘವೇಂದ್ರ ಕಾಪಸೆ, ಅಕ್ಷಯ ಪ್ರ. ಝಳಕಿ, ಮಲ್ಲಿಕಾರ್ಜುನ ಹೂಗಾರ, ರವಿ ತೇಲಿ, ಭೀಮರಾಯ ಬಿಲಕಾರ, ಕಲ್ಲಪ್ಪ ಶಿರಶ್ಯಾಡ, ಶ್ರೀಶೈಲ ಬಿರಾದಾರ, ಬಾಬುರಾಯ ಬಿರಾದಾರ, ರಾಜೇಂದ್ರ ಶಿರಶ್ಯಾಡ, ವಿಠ್ಠಲ ಕಾಗರ, ಸುನೀತಾ ಜಹಾಗೀರದಾರ, ವೈಭವಿ ಜಹಾಗೀರದಾರ, ರೇವತಿ ಹೂಗಾರ, ಜ್ಯೋತಿ ಡೋಳಿ, ಸಂಜನಾ ಕಾಪಸೆ, ಮಲ್ಲಮ್ಮ ತಳವಾರ, ಕಾವೇರಿ ಶಿರಶ್ಯಾಡ ಹಾಗೂ ಶರಣವ್ವ ತಳವಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

