Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

’ಧಗೆ’ ಚಿತ್ರದ ಪೋಸ್ಟರ್ ಪ್ರಚಾರದ ಚಾಲನೆ ಇಂದು

ಡಿ.10ರಂದು ಸುವರ್ಣ ಸೌಧ ಮುಂದೆ ಉಪವಾಸ ಸತ್ಯಾಗ್ರಹಕ್ಕೆ ಕರೆ

ಕಬ್ಬು ಕಟಾವು ವಿಚಾರಕ್ಕೆ ತಂದೆ-ಮಗನ ಬಲಿ: ತಡಲಗಿಯಲ್ಲಿ ರಕ್ತಪಾತ!

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಕಬ್ಬು ಕಟಾವು ವಿಚಾರಕ್ಕೆ ತಂದೆ-ಮಗನ ಬಲಿ: ತಡಲಗಿಯಲ್ಲಿ ರಕ್ತಪಾತ!
(ರಾಜ್ಯ ) ಜಿಲ್ಲೆ

ಕಬ್ಬು ಕಟಾವು ವಿಚಾರಕ್ಕೆ ತಂದೆ-ಮಗನ ಬಲಿ: ತಡಲಗಿಯಲ್ಲಿ ರಕ್ತಪಾತ!

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಎಕರೆ ಜಮೀನು ಲೀಸ್ ವಿವಾದಕ್ಕೆ ಎರಡು ಜೀವಗಳು ಬಲಿ; ಕಲ್ಲು, ಕಟ್ಟಿಗೆ, ಬೊಂಬುಗಳಿಂದ ಮಾರಣಾಂತಿಕ ಹಲ್ಲೆ – ಮೂವರಿಗೆ ಗಾಯ

ಉದಯರಶ್ಮಿ ದಿನಪತ್ರಿಕೆ

ಕೊಲ್ಹಾರ: ಕಬ್ಬು ಕಟಾವು ಮಾಡಿ ಸಕ್ಕರೆ ಕಾರ್ಖಾನೆಗೆ ಸಾಗಿಸುವ ವಿಚಾರವಾಗಿ ಆರಂಭವಾದ ಗಲಾಟೆಯೊಂದು ತಂದೆ-ಮಗನ ಭೀಕರ ಹತ್ಯೆಯಲ್ಲಿ ಅಂತ್ಯವಾದ ಘಟನೆ ತಾಲೂಕಿನ ತಡಲಗಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಜಮೀನು ಲೀಸ್ ವಿವಾದದ ಹಿನ್ನೆಲೆಯಲ್ಲಿ ಎರಡು ಕುಟುಂಬಗಳ ನಡುವೆ ಉಂಟಾದ ಘರ್ಷಣೆ ವಿಕೋಪಕ್ಕೆ ತಿರುಗಿ ನಡೆದ ಮಾರಣಾಂತಿಕ ಹಲ್ಲೆಯಲ್ಲಿ ತಂದೆ-ಮಗ ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ಈ ಘಟನೆಯಿಂದ ಗ್ರಾಮದಲ್ಲಿ ಆತಂಕ ಹಾಗೂ ಶೋಕದ ವಾತಾವರಣ ನಿರ್ಮಾಣವಾಗಿದೆ.
ತಡಲಗಿ ಗ್ರಾಮದ ಹಣಮಂತ ಯಲ್ಲಪ್ಪ ಸಾಲವಾಡಗಿ (65) ಹಾಗೂ ಅವರ ಪುತ್ರ ಮಂಜುನಾಥ ಹನುಮಂತ ಸಾಲವಾಡಗಿ (30) ಹತ್ಯೆಗೀಡಾದವರು. ಮಹಾದೇವಪ್ಪ, ಮಲ್ಲಪ್ಪ ಹಾಗೂ ಸಿದ್ದಾರ್ಥ ಗಾಯಗೊಂಡಿದ್ದು, ಗಾಯಾಳುಗಳನ್ನು ವಿಜಯಪುರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
8 ಎಕರೆ ಜಮೀನು ಲೀಸ್ ವಿವಾದವೇ ಸಂಘರ್ಷಕ್ಕೆ ಕಾರಣ:
ತಡಲಗಿ ಗ್ರಾಮದ ಹನುಮವ್ವ ಮೇಟಿ ಅವರಿಗೆ ಸೇರಿದ ಸುಮಾರು 8 ಎಕರೆ ಜಮೀನನ್ನು ಸಾಲವಾಡಗಿ ಕುಟುಂಬದವರು ಲೀಸ್‌ಗೆ ಪಡೆದು ಕಬ್ಬು ಬೆಳೆದಿದ್ದರು ಎನ್ನಲಾಗಿದೆ. ಆದರೆ, ಸದರಿ ಜಮೀನಿನಲ್ಲಿ ತಮಗೂ ಪಾಲಿದೆ ಎಂದು ಹನುಮವ್ವ ಅವರ ಸಂಬಂಧಿಕರು ತಗಾದೆ ತೆಗೆದು ಕಬ್ಬು ಕಟಾವಿಗೆ ವಿರೋಧ ವ್ಯಕ್ತಪಡಿಸಿದ್ದರು.


ಈ ಬಾರಿ ಬೆಳೆದಿರುವ ಕಬ್ಬನ್ನು ಮಾತ್ರ ಕಟಾವು ಮಾಡಿಕೊಂಡು ಹೋಗುತ್ತೇವೆ, ಮುಂದಿನ ಬಾರಿ ಜಮೀನನ್ನು ಲೀಸ್‌ಗೆ ಪಡೆಯುವುದಿಲ್ಲ ಎಂದು ಸಾಲವಾಡಗಿ ಕುಟುಂಬದವರು ತಿಳಿಸಿದ್ದರು ಎನ್ನಲಾಗಿದೆ. ಆದರೆ, ಇದಕ್ಕೆ ಮೇಟಿ ಕುಟುಂಬದ ಸಂಬಂಧಿಕರು ಒಪ್ಪಿರಲಿಲ್ಲ.
ಶುಕ್ರವಾರ ಸಾಲವಾಡಗಿ ಕುಟುಂಬದವರು ಜಮೀನಿಗೆ ತೆರಳಿ ಕಬ್ಬು ಕಟಾವು ಮಾಡಲು ಮುಂದಾದಾಗ ಮೇಟಿ ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ ಎರಡೂ ಕುಟುಂಬಗಳ ನಡುವೆ ಮಾತಿನ ಚಕಮಕಿ ಆರಂಭವಾಗಿ, ಬಳಿಕ ವಾಗ್ವಾದ ವಿಕೋಪಕ್ಕೆ ತಿರುಗಿದೆ. ಈ ಸಂದರ್ಭದಲ್ಲಿ ಕಲ್ಲು, ಕಟ್ಟಿಗೆ ಹಾಗೂ ಬೊಂಬುಗಳಿಂದ ಪರಸ್ಪರ ಹಲ್ಲೆ ನಡೆದಿದೆ, ಘಟನೆಯಲ್ಲಿ ಹಣಮಂತ ಹಾಗೂ ಮಂಜುನಾಥ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಹನ್ನೆರಡು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಕೆಂಚಪ್ಪ, ಗಿರಿಯಪ್ಪ, ರಾಮಪ್ಪ, ಹಣಮಂತ ಸೇರಿದಂತೆ ಹಲ್ಲೆ ನಡೆಸಿದ ಐದು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಇನ್ನುಳಿದ ಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸಲಾಗುವುದು ಎಂದು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ಕುಟುಂಬಸ್ಥರ ಆಕ್ರಂದನ:
ತಂದೆ ಹಾಗೂ ಸಹೋದರನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆಗೆ ಸಂಬಂಧಿಸಿದಂತೆ ಮೃತ ಹಣಮಂತ ಅವರ ಪುತ್ರ ಸಂಜೀವ್ ಸಾಲೋಡಗಿ ಹಾಗೂ ಮೃತರ ಸಂಬಂಧಿ ರಮೇಶ ಸಾಲವಾಡಗಿ ಘಟನೆಯ ಹಿನ್ನೆಲೆ ಕುರಿತು ಮಾಹಿತಿ ನೀಡಿದ್ದಾರೆ.
ಘಟನೆ ಕೊಲ್ಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಎಸ್ಪಿ ಲಕ್ಷ್ಮಣ ನಿಂಬರಗಿ, ಡಿವೈಎಸ್ಪಿ ಚಂದ್ರಕಾಂತ ನಂದರೆಡ್ಡಿ, ಸಿಪಿಐ ಶರಣಗೌಡ ಗೌಡರ, ಪಿಎಸ್ ಐ ಅಶೋಕ ನಾಯಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

’ಧಗೆ’ ಚಿತ್ರದ ಪೋಸ್ಟರ್ ಪ್ರಚಾರದ ಚಾಲನೆ ಇಂದು

ಡಿ.10ರಂದು ಸುವರ್ಣ ಸೌಧ ಮುಂದೆ ಉಪವಾಸ ಸತ್ಯಾಗ್ರಹಕ್ಕೆ ಕರೆ

ಪಂಢರಪುರಕ್ಕೆ ತೆರಳುವ ದಿಂಡಿ ಪಾದಯಾತ್ರೆಯ ಭಕ್ತರಿಗೆ ಅಲ್ಪೋಪಹಾರ ಸೇವೆ

ಅಥಣಿಯಲ್ಲಿ ಜನಪರ ಸೇವೆಗೆ ಸಾಕ್ಷಿಯಾದ ಬೀಳ್ಕೊಡುಗೆ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ’ಧಗೆ’ ಚಿತ್ರದ ಪೋಸ್ಟರ್ ಪ್ರಚಾರದ ಚಾಲನೆ ಇಂದು
    In (ರಾಜ್ಯ ) ಜಿಲ್ಲೆ
  • ಡಿ.10ರಂದು ಸುವರ್ಣ ಸೌಧ ಮುಂದೆ ಉಪವಾಸ ಸತ್ಯಾಗ್ರಹಕ್ಕೆ ಕರೆ
    In (ರಾಜ್ಯ ) ಜಿಲ್ಲೆ
  • ಕಬ್ಬು ಕಟಾವು ವಿಚಾರಕ್ಕೆ ತಂದೆ-ಮಗನ ಬಲಿ: ತಡಲಗಿಯಲ್ಲಿ ರಕ್ತಪಾತ!
    In (ರಾಜ್ಯ ) ಜಿಲ್ಲೆ
  • ಪಂಢರಪುರಕ್ಕೆ ತೆರಳುವ ದಿಂಡಿ ಪಾದಯಾತ್ರೆಯ ಭಕ್ತರಿಗೆ ಅಲ್ಪೋಪಹಾರ ಸೇವೆ
    In (ರಾಜ್ಯ ) ಜಿಲ್ಲೆ
  • ಅಥಣಿಯಲ್ಲಿ ಜನಪರ ಸೇವೆಗೆ ಸಾಕ್ಷಿಯಾದ ಬೀಳ್ಕೊಡುಗೆ
    In (ರಾಜ್ಯ ) ಜಿಲ್ಲೆ
  • ಮುಳವಾಡದಲ್ಲಿ ಕ್ಯಾಂಪಾ ಕೋಲಾ ಬೃಹತ್ ಘಟಕದಿಂದ ಹೊಸ ಪರ್ವ ಆರಂಭ!
    In (ರಾಜ್ಯ ) ಜಿಲ್ಲೆ
  • ತಿಕೋಟ: ಮಕ್ಕಳ ವಿಜ್ಞಾನ ಜಾತ್ರೆಯ ಕಹಳೆಗೆ ಸಿದ್ಧತೆ ಪೂರ್ಣ
    In (ರಾಜ್ಯ ) ಜಿಲ್ಲೆ
  • ಪಂಚ ತತ್ವಗಳಲ್ಲಿ ಜಲ
    In ವಿಶೇಷ ಲೇಖನ
  • ಎರಡನೇ ದಿನಕ್ಕೆ ಕಾಲಿಟ್ಟ ಕಬ್ಬು ಬೆಳೆಗಾರರ ಅಹೋರಾತ್ರಿ ಧರಣಿ
    In (ರಾಜ್ಯ ) ಜಿಲ್ಲೆ
  • ನ.೧೫ರಂದು ಮಹಾರಾಣಾ ಪ್ರತಾಪ್‌ಸಿಂಹ ಕಂಚಿನ ಪ್ರತಿಮೆ ಅನಾವರಣ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.