Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

₹೨,೫೦೦ ಪರಿಹಾರಕ್ಕೆ ರೈತರ ಆಕ್ರೋಶ :ವಿನೂತನ ಪ್ರತಿಭಟನೆ

ನೇಮಕಾತಿ ಪರೀಕ್ಷೆ ಸುಸೂತ್ರ ನಿರ್ವಹಣೆಗೆ ಡಿಸಿ ಡಾ.ಆನಂದ ಕೆ ಸೂಚನೆ

ರೈತರ ಆರ್ಥಿಕ ಸ್ವಾವಲಂಬನೆಗೆ ಹೊಸ ಹೆಜ್ಜೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ರೈತರ ಆರ್ಥಿಕ ಸ್ವಾವಲಂಬನೆಗೆ ಹೊಸ ಹೆಜ್ಜೆ
(ರಾಜ್ಯ ) ಜಿಲ್ಲೆ

ರೈತರ ಆರ್ಥಿಕ ಸ್ವಾವಲಂಬನೆಗೆ ಹೊಸ ಹೆಜ್ಜೆ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಮುದ್ದೇಬಿಹಾಳದಲ್ಲಿ ಕೊಪ್ಪಳದ ಗವಿಸಿದ್ದೇಶ್ವರರ ಹಸ್ತಾಕ್ಷರದಿಂದ ದಾಸೋಹಿ ಸಹಕಾರಿಗೆ ವಿದ್ಯುಕ್ತ ಚಾಲನೆ

ಉದಯರಶ್ಮಿ ದಿನಪತ್ರಿಕೆ

ಮುದ್ದೇಬಿಹಾಳ: ನಗರದಲ್ಲಿ ಸ್ಥಾಪಿತವಾದ ದಾಸೋಹಿ ರೈತ ಉತ್ಪಾದಕ ಸಹಕಾರಿ ಸಂಘದ ಆರ್ಥಿಕ ವ್ಯವಹಾರಗಳಿಗೆ ತಮ್ಮ ಪವಿತ್ರ ಹಸ್ತಾಕ್ಷರದ ಮೂಲಕ ಕೊಪ್ಪಳದ ಗವಿಸಿದ್ದೇಶ್ವರ ಮಠದ ಅಭಿನವ ಗವಿ ಸಿದ್ದೇಶ್ವರ ಮಹಾಸ್ವಾಮಿಗಳು ವಿದ್ಯುಕ್ತ ಚಾಲನೆ ನೀಡಿದರು.
ಇಲ್ಲಿನ ವಿದ್ಯಾನಗರದಲ್ಲಿರುವ ದಾಸೋಹಿ ರೈತ ಉತ್ಪಾದಕ ಸಮೂಹ ಸಂಸ್ಥೆಗಳ ಕಛೇರಿಯಲ್ಲಿ ನಡೆದ ಸಮಾರಂಭದಲ್ಲಿ ರೈತರ ಅಗತ್ಯತೆಗೆ ಪೂರಕ ಆರ್ಥಿಕ ನೆರವು ಒದಗಿಸಲು ಮತ್ತು ವ್ಯವಹಾರಿಕ ಚಟುವಟಿಕೆಗಳಿಗೆ ಸಹಕಾರ ನೀಡುವ ಉದ್ದೇಶದಿಂದ ಅಸ್ತಿತ್ವ ಪಡೆದ ನೂತನ ದಾಸೋಹಿ ರೈತ ಉತ್ಪಾದಕ ಸಹಕಾರಿ ಸಂಘವನ್ನು ಉದ್ಘಾಟಿಸಿದ ಅವರು ರೈತರೇ ಸೇರಿ ಕಟ್ಟಿದ ಸಂಸ್ಥೆಯ ಮೂಲಕ ರೈತರ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗಳ ಉನ್ನತೀಕರಣಕ್ಕೆ ನಡೆಸುತ್ತಿರುವ ಪ್ರಯತ್ನಗಳನ್ನು ಶ್ಲಾಘಿಸಿದರು.
ರೈತರ ಒಡೆತನದಲ್ಲಿ ಸಮೃದ್ಧಿಯತ್ತ ನಡಿಗೆ ಎಂಬ ಧ್ಯೇಯ ವಾಕ್ಯದೊಂದಿಗೆ ರೈತರ ಆರ್ಥಿಕ ಬಲವರ್ಧನೆ, ಗ್ರಾಮೀಣ ಉದ್ಯಮ ಶೀಲತೆ ಮತ್ತು ಸುಸ್ಥಿರ ಸಮೃದ್ಧಿಯತ್ತ ಸಹಕಾರದ ಮೂಲಕ ಸಾಗುವುದರೊಂದಿಗೆ ಉತ್ತರೋತ್ತರ ಅಸಂಖ್ಯಾತ ರೈತರ ಬದುಕು ಕಟ್ಟಿಕೊಡುವ ನಿಟ್ಟಿನಲ್ಲಿ ದಾಸೋಹಿಯ ಹೆಸರು ಚಿರಸ್ಥಾಯಿಯಾಗಲೆಂದು ಆಶೀರ್ವದಿಸಿದರು.
ಈ ಮೊದಲು ದಾಸೋಹಿ ಸಮೂಹ ಸಂಸ್ಥೆಗಳ ರೈತಕೇಂದ್ರೀಕೃತ ಚಟುವಟಿಕೆಗಳು, ಸೇವೆಗಳು ಹಾಗೂ ಸೌಲಭ್ಯಗಳ ಬಗ್ಗೆ ತಿಳಿದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ದಾಸೋಹಿ ಸಮೂಹ ಸಂಸ್ಥೆಗಳ ರೂವಾರಿ ಅರವಿಂದ ಕೊಪ್ಪ, ಕುಕ್ಕುಟ ಕಂಪನಿಯ ಚರ‍್ಮನ್ ರಶ್ಮಿ ಕೊಪ್ಪ, ಉಪಾಧ್ಯಕ್ಷ ಆರ್.ಬಿ.ಸಜ್ಜನ, ಸಹಕಾರಿ ಸಂಘದ ಉಪಾಧ್ಯಕ್ಷ ಮಂಜುನಾಥ ಕಳಸಗೊಂಡ, ನಿರ್ದೇಶಕರಾದ ಅಮರೇಶ ಹಟ್ಟಿ, ಸಿದ್ದಪ್ಪ ಕುರಿ, ಕಾಶೀನಾಥ ಹೆಬ್ಬಾಳ, ಭೀಮಾಶಂಕರಗೌಡ ಪಾಟೀಲ, ಗುರುಬಸಪ್ಪಗೌಡ ಪಾಟೀಲ, ಪ್ರೀತಿ ದೇಗಿನಾಳ, ಕಲ್ಲನಗೌಡ ಹಗರಟಗಿ, ಕಾಂತು ಲಮಾಣಿ, ಮಲ್ಲಣ್ಣ ಮಂಗ್ಯಾಳ, ಬಸವರಾಜ ಸಿದ್ದಾಪೂರ, ಲೇಶಪ್ಪ ಪ್ಯಾಟಿಗೌಡರ, ಕಂಪನಿ ನಿರ್ದೇಶಕರಾದ ಕಲ್ಲಣ್ಣ ಪ್ಯಾಟಿ, ಜಗದೀಶ ಪಂಪಣ್ಣವರ, ಗೋಲಪ್ಪ ಗಂಗನಗೌಡ್ರ, ಸೋಮನಗೌಡ ಬಿರಾದಾರ(ಮಡಿಕೇಶ್ವರ), ಶ್ರೀಶೈಲ ಮೇಟಿ(ಚೊಂಡಿ), ಪ್ರಭುದೇವಯ್ಯ ಹಿರೇಮಠ, ಬಸವರಾಜ ಕುಂಟೋಜಿ, ಭೀಮಣ್ಣ ಮಳಗೌಡರ, ರವೀಂದ್ರ ಕೋಳೂರ, ಪರಸಪ್ಪ ಮೇಟಿ, ಗುಂಡಪ್ಪ ಬಿರಾದಾರ, ಡಾ. ವಿಜಯ ಹುಬ್ಬಳ್ಳಿ, ಕಾರ್ಯನಿರ್ವಾಹಕ ಮಂಡಳಿ ಅಧ್ಯಕ್ಷ ಸಿ.ಆರ್ ಬಿರಾದಾರ, ಉಪಾಧ್ಯಕ್ಷ ಬಿ.ಎಂ ಪಾಟೀಲ ಸೇರಿದಂತೆ ದಾಸೋಹಿ ಸಮೂಹ ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಗ್ರಾಮಗಳಿಂದ ಆಗಮಿಸಿದ ರೈತರು, ಸಿಬ್ಬಂದಿ ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.
ನಾಗರತ್ನಾ ಅರಮನಿ ಸ್ವಾಗತಿಸಿದರು ಡಾ. ರಾಜಶೇಖರ ಹತ್ತರಸಂಗ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಶ್ಮಿ ಗೋನಾಳ ಕಾರ್ಯಕ್ರಮ ನಿರೂಪಿಸಿದರು. ಶೇಖರಗೌಡ ವಂದಿಸಿದರು.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

₹೨,೫೦೦ ಪರಿಹಾರಕ್ಕೆ ರೈತರ ಆಕ್ರೋಶ :ವಿನೂತನ ಪ್ರತಿಭಟನೆ

ನೇಮಕಾತಿ ಪರೀಕ್ಷೆ ಸುಸೂತ್ರ ನಿರ್ವಹಣೆಗೆ ಡಿಸಿ ಡಾ.ಆನಂದ ಕೆ ಸೂಚನೆ

ಕ್ರೀಡೆ: ಶಾಕಂಬರಿ ಪ್ರೌಢಶಾಲೆ ವಿದ್ಯಾರ್ಥಿಗಳು ಪ್ರಥಮ

ಸಹಕಾರಿ ಸಂಘಗಳ ಪ್ರಗತಿಯಲ್ಲಿ ರೈತರ ಸಹಕಾರ ಮುಖ್ಯ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ₹೨,೫೦೦ ಪರಿಹಾರಕ್ಕೆ ರೈತರ ಆಕ್ರೋಶ :ವಿನೂತನ ಪ್ರತಿಭಟನೆ
    In (ರಾಜ್ಯ ) ಜಿಲ್ಲೆ
  • ನೇಮಕಾತಿ ಪರೀಕ್ಷೆ ಸುಸೂತ್ರ ನಿರ್ವಹಣೆಗೆ ಡಿಸಿ ಡಾ.ಆನಂದ ಕೆ ಸೂಚನೆ
    In (ರಾಜ್ಯ ) ಜಿಲ್ಲೆ
  • ರೈತರ ಆರ್ಥಿಕ ಸ್ವಾವಲಂಬನೆಗೆ ಹೊಸ ಹೆಜ್ಜೆ
    In (ರಾಜ್ಯ ) ಜಿಲ್ಲೆ
  • ಕ್ರೀಡೆ: ಶಾಕಂಬರಿ ಪ್ರೌಢಶಾಲೆ ವಿದ್ಯಾರ್ಥಿಗಳು ಪ್ರಥಮ
    In (ರಾಜ್ಯ ) ಜಿಲ್ಲೆ
  • ಸಹಕಾರಿ ಸಂಘಗಳ ಪ್ರಗತಿಯಲ್ಲಿ ರೈತರ ಸಹಕಾರ ಮುಖ್ಯ
    In (ರಾಜ್ಯ ) ಜಿಲ್ಲೆ
  • ಸಹಕಾರ, ತಾಳ್ಮೆ, ಭಾತೃತ್ವದಿಂದ ಸಂಘ ಪ್ರಗತಿ ಕಾಣಲು ಸಾಧ್ಯ
    In (ರಾಜ್ಯ ) ಜಿಲ್ಲೆ
  • ಅರ್ಜಿ ಹಿಂಪಡೆವರೆಗೂ ಒಂದು ತೊಟ್ಟು ನೀರು ಹರಿಸಬೇಡಿ
    In (ರಾಜ್ಯ ) ಜಿಲ್ಲೆ
  • ಯಾವೊಬ್ಬ ಮತದಾರನ ಹಕ್ಕು ಕಸಿದುಕೊಳ್ಳಲು ಬಿಡೊಲ್ಲ
    In (ರಾಜ್ಯ ) ಜಿಲ್ಲೆ
  • ಸಹಬಾಳ್ವೆಯಿಂದ ಬದುಕುವ ಸುಂದರ ಪರಂಪರೆ ಎಲ್ಲೆಡೆ ಪಸರಿಸಲಿ
    In (ರಾಜ್ಯ ) ಜಿಲ್ಲೆ
  • ಪೌಷ್ಟಿಕ ಆಹಾರವೇ ಆರೋಗ್ಯವಂತ ಸಮಾಜದ ಬುನಾದಿ :ಜುಂಜರವಾಡ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.