ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ನಾಲತವಾಡದ ಎಸ್.ವಿ. ಆಂಗ್ಲ ಮಾಧ್ಯಮ ಶಾಲೆಯ ಆಶ್ರಯದಲ್ಲಿ ಜರುಗಿದ ೨೦೨೬-೨೭ನೇ ಸಾಲಿನ ವಿಜಯಪುರ ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಕ್ರೀಡಾಕೂಟದಲ್ಲಿ ಸಮೀಪದ ವಂದಾಲ ಗ್ರಾಮದ ಶಾಕಂಬರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು, ಚನ್ನಪಟ್ಟಣದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.
ವಿಜೇತ ವಿದ್ಯಾರ್ಥಿಗಳ ವಿವರ
೧೭ ವರ್ಷದೊಳಗಿನ ಬಾಲಕರ ವಿಭಾಗ (ಪ್ರಥಮ): ರವಿ ಸಿ. ಕಡಿಜಾಡರ (೧೦ನೇ ವರ್ಗ)
ಹಣಮಂತ ಬಿ. ವಾದರ (೧೦ನೇ ವರ್ತ)
ಮಣಿಕಂಠ ಜು. ದೊಡ್ಡಪ್ಪನವರ (೯ನೇ ವರ್ಗ)
ಬಸವರಾಜ ಕಾಳಗಿ (೮ನೇ ವರ್ಗ)
೧೭ ವರ್ಷದೊಳಗಿನ ಬಾಲಕಿಯರ ವಿಭಾಗ (ಪ್ರಥಮ): ಸೌಜನ್ಯಾ ಬ್ಯಾಲಾಳ,
ಸನ್ನಿಧಿ ಗಂಗೂರ ಮತ್ತು
ಮಲ್ಲಮ್ಮ ಮಾದಾಪೂರ (೮ನೇ ವರ್ಗ)
೧೪ ವರ್ಷದೊಳಗಿನ ಬಾಲಕರ ವಿಭಾಗ (ಪ್ರಥಮ): ಮುತ್ತಣ್ಣಾ ಮಾದರ,
ಸಂಜಯ ಮಾದರ ಹಾಗೂ
ವಿನಯ ಗಡಿಜಾಡರ (೮ನೇ ತರಗತಿ)
೧೪ ವರ್ಷದೊಳಗಿನ ಬಾಲಕಿಯರ ವಿಭಾಗ (ಪ್ರಥಮ): ಸೌಂದರ್ಯಾ ಚಿಕ್ಕಮಠ,
ದೇವಿಕಾ ಲೆಕ್ಕೆನ್ನವರ,
ಭಾಗ್ಯಾ ಡಮನಾಳ (೮ನೇ ತರಗತಿ)

