Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಕಲ್ಯಾಣ ಕರ್ನಾಟಕದ ಅದ್ಭುತ ಪ್ರೇಕ್ಷಣೀಯ ಸ್ಥಳಗಳು

ಬೆವರ ಹನಿ – ಯಶಸ್ಸಿನ ಧ್ವನಿ

ಉದಯರಶ್ಮಿ ಇಂದಿನ ದಿನಪತ್ರಿಕೆ ಸೆಪ್ಟೆಂಬರ್ 16,2026

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಕಲ್ಯಾಣ ಕರ್ನಾಟಕದ ಅದ್ಭುತ ಪ್ರೇಕ್ಷಣೀಯ ಸ್ಥಳಗಳು
ವಿಶೇಷ ಲೇಖನ

ಕಲ್ಯಾಣ ಕರ್ನಾಟಕದ ಅದ್ಭುತ ಪ್ರೇಕ್ಷಣೀಯ ಸ್ಥಳಗಳು

By No Comments10 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ
– ಡಾ. ಶಾಲಿನಿ ರಜನೀಶ್.
ಸರ್ಕಾರದ ಮುಖ್ಯ ಕಾರ್ಯದರ್ಶಿ
ಬೆಂಗಳೂರು

ಉದಯರಶ್ಮಿ ದಿನಪತ್ರಿಕೆ

​ಕಲ್ಯಾಣ ಕರ್ನಾಟಕವು ಕರ್ನಾಟಕದ ಆಡಳಿತ ವಿಭಾಗವಾಗಿದೆ ಇದು ಈಶಾನ್ಯ ಕರ್ನಾಟಕದಲ್ಲಿದೆ. ಇದು ೧೯೪೮ರ ವರೆಗೆ ಹೈದರಾಬಾದ್ ಕರ್ನಾಟಕ ರಾಜ್ಯದಲ್ಲಿ ಕನ್ನಡ-ಮಾತನಾಡುವ ಭಾಗವಾಗಿತ್ತು ಮತ್ತು ಹೈದರಾಬಾದ್ ನಿಜಾಮನ ಆಳ್ವಿಕೆಗೆ ಒಳಪಟ್ಟಿತ್ತು. ಭಾರತೀಯ ಒಕ್ಕೂಟದೊಂದಿಗೆ ವಿಲೀನಗೊಂಡ ನಂತರ ಈ ಪ್ರದೇಶವು ೧೯೫೬ ರವರೆಗೆ ಹೈದರಾಬಾದ್ ರಾಜ್ಯದ ಭಾಗವಾಗಿತ್ತು. ಹೈದರಾಬಾದ್-ಕರ್ನಾಟಕ ಪ್ರದೇಶವು ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ಕಲಬುರಗಿ ಇಂದಿನ ಕರ್ನಾಟಕ ರಾಜ್ಯದಲ್ಲಿವೆ. ಹೈದರಾಬಾದ್-ಕರ್ನಾಟಕ ಪ್ರದೇಶವು ಭಾರತದ ಎರಡನೇ ಅತಿದೊಡ್ಡ ಶುಷ್ಕ ಪ್ರದೇಶವಾಗಿದೆ. ಈ ಪ್ರದೇಶವನ್ನು “ಕಲ್ಯಾಣ ಕರ್ನಾಟಕ” ಎಂದು ಘೋಷಿಸಲಾಗಿದೆ, ೧೭ ಸೆಪ್ಟೆಂಬರ್ ೧೯೪೮ ಹೈದರಾಬಾದ್ ರಾಜ್ಯವು ಇತಿಹಾಸದಲ್ಲಿ ಕರ್ನಾಟಕ ರಾಜ್ಯವು ಭಾರತೀಯ ಒಕ್ಕೂಟದಲ್ಲಿ ವಿಲೀನಗೊಂಡಿತು.
ನಾನು ೨೦೦೮-೨೦೧೧ರವರೆಗೆ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರಾಗಿ ಹಾಗೂ ಕೆಕೆಆರ್‌ಡಿಬಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದೆ. ಆಗ ಈ ಭಾಗವು ‘ಅತೀ ಹಿಂದುಳಿದ ಪ್ರದೇಶ’ ಎಂಬ ಮಾತು ಜನ ಜನಿತವಾಗಿತ್ತು. ಆದರೆ ಇಲ್ಲಿ ಕೆಲಸ ಮಾಡುವಾಗ ಈ ಭಾಗದ ಸಾಂಸ್ಕೃತಿಕ, ಐತಿಹಾಸಿಕ ಮಹತ್ವದ ಅರಿವುಂಟಾಯಿತು. ಈ ಐತಿಹಾಸಿಕ ದಿನದ ೭೮ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕದ ಪ್ರವಾಸೋದ್ಯಮದ ಸಾಧ್ಯತೆಗಳು ಹಾಗೂ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಹಂಚಿಕೊಳ್ಳಲು ನನಗೆ ಸಂತೋಷವಾಗುತ್ತಿದೆ. ಇಂದಿಗೂ ಅನೇಕರಿಗೆ ತಿಳಿದಿಲ್ಲದ ಈ ಭಾಗವು ತನ್ನ ವೈವಿಧ್ಯಮಯ ಇತಿಹಾಸ, ಕಲೆ, ಸಂಸ್ಕೃತಿ, ವಾಸ್ತುಶಿಲ್ಪ, ಪಾರಂಪರಿಕ ತಾಣಗಳು ಹಾಗೂ ನೈರ್ಗಿಕ ಸೌಂದರ್ಯದಿಂದ ಅಪಾರ ಪ್ರವಾಸೋದ್ಯಮ ಸಾಮರ್ಥ್ಯವನ್ನು ಹೊಂದಿದೆ. ಅದನ್ನು ಹಂಚಿಕೊಳ್ಳುವ ಪ್ರಯತ್ನವಾಗಿದೆ ಈ ಲೇಖನ.
೭೦೦೦ ವರ್ಷದ ಇತಿಹಾಸ-ರಾಮಾಯಣ ಕಾಲದ ಸ್ಮೃತಿಗಳು
ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾದ ಹಂಪಿ ಜಗತ್ತಿನ ಪ್ರವಾಸಿಗರ ಮೆಚ್ಚಿನ ಹಾಗೂ ಹೆಮ್ಮೆಯ ತಾಣವಾಗಿದೆ. ವಿಶ್ವಪರಂಪರೆಯಲ್ಲಿ ಇದು ಪ್ರೇಕ್ಷಣೀಯ ಸ್ಥಳವಾಗಿದ್ದು, ದೇಶ-ವಿದೇಶಿಗರನ್ನು ಆಕರ್ಷಿಸುತ್ತಿದೆ. ಇಲ್ಲಿ ಸ್ಥಾಪಿಸಲಾಗಿರುವ ಹಂಪಿಯ ಕಲ್ಲಿನ ರಥ ಹಾಗೂ ಇತರ ಭವ್ಯ ಸ್ಮಾರಕಗಳು ಪ್ರವಾಸಿಗರ ಕಣ್ಮನ ಸೆಳೆಯುತ್ತದೆ. ಭಾರತದ ಹೆಮ್ಮೆಯ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತವನ್ನು ತಿಳಿದ ಹೆಚ್ಚಿನ ಜನ ಅಯೋಧ್ಯಾ ನಗರಿ ಹಾಗೂ ರಾವಣನ ಲಂಕೆ ಬಗ್ಗೆ ತಿಳಿದು ಕೊಂಡಿರುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ಮತ್ತೊಂದು ಮಹತ್ವದ ತಾಣ ಕರ್ನಾಟಕದಲ್ಲಿದೆ.
ಕಿಷ್ಕಂಧೆ (ಕೊಪ್ಪಳ ಜಿಲ್ಲೆ) ನಗರಿಯಲ್ಲಿ ಶ್ರೀರಾಮನು ಸುಗ್ರೀವ ರಾಜನಿಗೆ ಭೇಟಿಯಾದನೆಂದು ಮತ್ತು ಶ್ರೀರಾಮನ ಪರಮಭಕ್ತನಾದ ಹನುಮಂತನು ಇಲ್ಲಿನ ಅಂಜನಾದ್ರಿ ಬೆಟ್ಟದಲ್ಲಿ ಜನ್ಮತಾಳಿದನೆಂದು ತಿಳಿದು ಬರುತ್ತದೆ. ಸುಮಾರು ೬೦೦ ಮೆಟ್ಟಲುಗಳನ್ನೇರಿ ಅಂಜನಾದ್ರಿಯನ್ನು ಹತ್ತಿದರೆ ಬೆಣಚು ಕಲ್ಲಿನ ದೊಡ್ಡ ಬಂಡೆಗಲ್ಲುಗಳಿಂದ ಕೂಡಿದ ಬೆಟ್ಟ ನಮಗೆ ಹನುಮಂತನ ಬೃಹತ್ ವ್ಯಕ್ತಿತ್ವದೊಂದಿಗೆ ಗೋಚರಿಸುತ್ತದೆ. ಅಲ್ಲದೇ ದಕ್ಷಿಣ ಭಾರತದ ಮಾನಸ ಸರೋವರವೆಂದು ಕರೆಸಿಕೊಳ್ಳುವ ಪಂಪಾಸರೋವರವು ಬಿಳಿಬಣ್ಣದ ತಾವರೆಗಳಿಂದ ಆವೃತವಾಗಿರುವ ಮನಮೋಹಕ ದೃಶ್ಯ ಲಭಿಸುತ್ತದೆ.
ಹಂಪಿ (ವಿಜಯನಗರ ಜಿಲ್ಲೆ)


ವಿಜಯನಗರ ಸಾಮ್ರಾಜ್ಯದ ಅವಶೇಷಗಳು, ವಿರೂಪಾಕ್ಷ ದೇವಸ್ಥಾನ ಮತ್ತು ಸುಗ್ರೀವನ ಗುಹೆ, ಹಜಾರರಾಮನ ದೇವಾಲಯ, ಪಂಪಾ ಸರೋವರ – ಇವು ರಾಮಾಯಣದ ಅನೇಕ ದೃಶ್ಯಗಳೊಂದಿಗೆ ಸಂಬಂಧ ಹೊಂದಿವೆ.ಹಂಪಿಯು ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಘೋಷಿಸಿದ ಸ್ಮಾರಕಗಳ ಗುಂಪನ್ನು ಹೊಂದಿದೆ. ವಾರ್ಷಿಕ ಹಂಪಿ ಉತ್ಸವ ಅಥವಾ “ವಿಜಯ ಉತ್ಸವ”ವನ್ನು ವಿಜಯನಗರ ಆಳ್ವಿಕೆಯಿಂದಲೂ ಆಚರಿಸಲಾಗುತ್ತಿದೆ. ಇದನ್ನು ಕರ್ನಾಟಕ ಸರ್ಕಾರವು ನಾಡ ಹಬ್ಬ (ಹಬ್ಬ) ಎಂದು ಆಯೋಜಿಸುತ್ತದೆ.
೩೦೦೦ ವರ್ಷಗಳಷ್ಟು ಹಳೆಯದಾದ ಆದಿ ಮಾನವರ ನೆಲೆಗಳು
ಭಾರತೀಯ ಪುರಾತತ್ವ ಮತ್ತು ಸರ್ವೇಕ್ಷಣಾ ಇಲಾಖೆಯ ವಿಶ್ವ ಪರಂಪರೆಯ ಪ್ರೇಕ್ಷಣೀಯ ಸ್ಥಳಗಳಲ್ಲಿ ಹಿರೇಬೆನಕಲ್ ಕೂಡ ಒಂದಾಗಿದೆ. ಗಂಗಾವತಿ ತಾಲೂಕಿನ ಹಿರೇಬೆನಕಲ್ ಗ್ರಾಮದ ಹತ್ತಿರ ಸುಮಾರು ೧೦,೦೦೦ ಹೆಕ್ಟೇರುಗಳಲ್ಲಿ ಹಬ್ಬಿಕೊಂಡಿರುವ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಆನೆಗುಂದಿಗೆ ಹತ್ತಿರದಲ್ಲಿರುವ ಬೆಟ್ಟದ ತುದಿಯಲ್ಲಿ ಸುಮಾರು ೩೦೦೦ ವರ್ಷಗಳಷ್ಟು ಹಳೆಯದಾದ ಆದಿಮಾನವರ ನಿವೇಶನಗಳಿವೆ. ಈ ನೆಲೆಗಳಿಗೆ ಶಿಲಾಸಮಾಧಿಗಳೆಂದು ಕರೆಯುತ್ತಾರೆ. ಆದರೆ, ಸ್ಥಳೀಯವಾಗಿ ಇದಕ್ಕೆ ಮೊರೆರ ಮನೆಗಳೆಂದು ಮತ್ತು ಅಲ್ಲಿರುವ ಬೆಟ್ಟಕ್ಕೆ ನಗಾರಿ ಗುಡ್ಡವೆಂದು ಕರೆಯುವುದುಂಟು. ಇದರಲ್ಲಿ ಆಶ್ಚರ್ಯಕರವಾದ ಸಂಗತಿ ಎಂದರೆ ನಮ್ಮ ಪೂರ್ವಿಕರು ದೊಡ್ಡ ಬಂಡೆಗಲ್ಲುಗಳನ್ನು ಕೊರೆದು ೧೦x೧೦ ಅಳತೆಯ ಕಲ್ಲುಗಳನ್ನು ಯಾವುದೇ ರೀತಿಯ ಭಾರ ಎತ್ತುವ ಯಂತ್ರಗಳ ಸಹಾಯವಿಲ್ಲದೆ ಜೋಡಿಸಿ ಸಮಾಧಿಗಳನ್ನು ನಿರ್ಮಾಣ ಮಾಡಿದ್ದು ಅವರ ತಂತ್ರಜ್ಞಾನಕ್ಕೆ ಸಾಕ್ಷಿಯಾಗಿದೆ.
ಮಸ್ಕಿ (ರಾಯಚೂರು ಜಿಲ್ಲೆ)
ಅಶೋಕನ ನಾಮಾಂಕಿತವಿರುವ ಶಾಸನವಿರುವ ಸ್ಥಳ, ಜೊತೆಗೆ ಮೆಗಾಲಿಥಿಕ್ ಸಮಾಧಿಗಳು ಇತರೆ ಅವಶೇಷಗಳು ದೊರಕಿವೆ. ೪೦೦೦ ವರ್ಷಗಳ ಹಿಂದೆಯೆ ಜನವಸತಿ ಇದ್ದ ಬಗ್ಗೆ ಸಂಶೋಧನೆಗಳು ದೃಢಿಕರಿಸಿವೆ.
ಸಂಗನಕಲ್ಲು, ಕುಪ್ಪಗಲ್ಲು (ಬಳ್ಳಾರಿ ಜಿಲ್ಲೆ)
ನವಶಿಲಾಯುಗ ಸಂಸ್ಕೃತಿಯ ಕಲ್ಲಿನಾಯುಧಗಳು, ಕುಂಬಾರಿಕೆ ಮಾಡಿದ ಸ್ಥಳ, ಕಲ್ಲಿನಾಯುಧಗಳನ್ನು ತಯಾರಿಸುವ ಕರ್ಖಾನೆಯ ಸ್ಥಳವಾಗಿದೆ. ಕಲ್ಲಿನ ವೃತ್ತಗಳು, ಕಬ್ಬಿಣ ಯುಗದ ಕುರುಹುಗಳು ಶೋದವಾಗಿವೆ. ಇದು ದಕ್ಷಿಣ ಭಾರತದ ಅತ್ಯಂತ ಹಳೆಯ ನೆಲೆಯಾಗಿದೆ. ಆರಂಭಿಕ ಕೃಷಿ ಮಾಡಿದ ಸ್ಥಳವಾಗಿದೆ. ಸಾಕು ಪ್ರಾಣಿಗಳ ಸಾಕಾಣಿಕೆ ಮಾಡಿದ ನೆಲೆಯಾಗಿದೆ. ಬೂದಿ ದಿಬ್ಬಗಳು ಇಲ್ಲಿ ದೊರಕಿವೆ.
ಬೃಹತ್ ಶಿಲಾಯುಗ ಸಂಸ್ಕೃತಿ ಸಮಾಧಿಗಳನ್ನು ಧಾರ್ಮಿಕ ಅಥವಾ ಖಗೋಳ ವೀಕ್ಷಣೆಗಾಗಿ ಈ ರಚನೆಗಳನ್ನು ಬಳಸಿರಬಹುದು. ಉದಾ: ಬ್ರಹ್ಮಗಿರಿಯಲ್ಲಿ ಸೂರ್ಯೋದಯದೊಂದಿಗೆ ಕಲ್ಲುಗಳು ಹೊಂದಾಣೆ ಹೊಂದುತ್ತವೆ.
ನಿರ್ಮಾಣ ತಂತ್ರ: ಕಲ್ಲುಗಳನ್ನು ದೂರದಿಂದ ಸಾಗಿಸಿ ಎತ್ತಲಾಗಿದೆ. ಕರ್ನಾಟಕದಲ್ಲೂ ಬೃಹತ್ ಕಲ್ಲುಗಳನ್ನು ಸೈಡಿಂಗ್/ಲೆವರ್ ವಿಧಾನದಿಂದ ಸ್ಥಾಪಿಸಿರಬಹುದು.


ಗಂಗಾವತಿ ಬಳಿ ಪತ್ತೆಯಾದ ತಾಮ್ರ ಯುಗದ ಗವಿಚಿತ್ರ ಮತ್ತು ಶಿಲಾಶಾಸನ ಸುಮಾರು ೩೦೦೦ ವರ್ಷ ಹಳೆಯದು ಎಂದು ಅಂದಾಜಿಸಲಾಗಿದೆ. ಇಲ್ಲಿ ಕೆಂಪು ವರ್ಣದ ಚಿತ್ರಗಳು, ಶಿಲಾ ಶಾಸನಗಳು ಮತ್ತು ಕಲ್ಲುಗುಳಿಗಳು ಕಂಡುಬಂದಿವೆ, ಇದು ಆದಿಮಾನವನ ವಾಸಸ್ಥಾನ ಮತ್ತು ಸಂಸ್ಕೃತಿಯ ಸೂಚಕವಾಗಿದೆ.
೨೦೦೦ ವರ್ಷದ ಇತಿಹಾಸ – ಬೌದ್ಧಧರ್ಮ ಪ್ರಚಾರ
ಕರ್ನಾಟಕದಲ್ಲಿ ಬೌದ್ಧಧರ್ಮದ ಉಗಮ ಮತ್ತು ಪ್ರಸಾರ ಕ್ರಿ.ಪೂ. ೩ನೇ ಶತಮಾನದಿಂದ ಆರಂಭವಾಯಿತು. ಅಶೋಕನ ಕಾಲದಲ್ಲಿ ಬೌದ್ಧಧರ್ಮ ಭಾರತದಾದ್ಯಂತ ಹರಡಿದಂತೆ ಕರ್ನಾಟಕದಲ್ಲೂ ಅದರ ಚಿಹ್ನೆಗಳು ಕಾಣಿಸಿಕೊಂಡವು. ಸನ್ನತಿ ಒಂದು ಐತಿಹಾಸಿಕ ಮತ್ತು ಪ್ರೇಕ್ಷಣೀಯ ಸ್ಥಳವಾಗಿದ್ದು, ಇದು ಚಿತ್ತಾಪೂರ ತಾಲೂಕಿನ ನಾಲವಾರ ರೈಲ್ವೆ ನಿಲ್ದಾಣದಿಂದ ಸುಮಾರು ೧೮ ಕಿ.ಮೀ. ದೂರದ ಭೀಮಾ ನದಿಯ ದಂಡೆಯ ಮೇಲಿದೆ.
​ಭಾರತ ಸರ್ಕಾರದ ಸರ್ವೇಕ್ಷಣಾ ಇಲಾಖೆ ಇಲ್ಲಿ ಭೂಉತ್ಪನನ ಕಾರ್ಯ ಕೈಗೊಂಡಿದ್ದು, ಹಲವಾರು ಪ್ರಾಚೀನ ಐತಿಹಾಸಿಕ ಅವಶೇಷಗಳು ದೊರೆತಿವೆ. ಇಲ್ಲಿ (ಕನಗನಹಳ್ಳಿ ಗ್ರಾಮ) ದೊರೆತ ಬೌದ್ಧ ಸ್ತೂಪ ಉತ್ತರ ಭಾರತದ ಸಾಂಚಿ ಸ್ತೂಪವನ್ನು ಹೋಲುವಂತಿದೆ. ಈ ಭಾಗ ಶಾತವಾಹನರ ಕಾಲದಿಂದಲೂ ಮತ್ತು ಮೌರ್ಯರ ಆಶೋಕನ ಕಾಲದಲ್ಲಿ ಪ್ರಸಿದ್ದಿ ಪಡೆದುದಾಗಿದೆಯೆಂದು ತಿಳಿದು ಬರುತ್ತದೆ. ಇಲ್ಲಿನ ಅವಶೇಷಗಳಲ್ಲಿ ಅಶೋಕರಾಯನ ಹೆಸರಿನ ಉಲ್ಲೇಖವಿದೆ. ಈ ಪ್ರದೇಶವನ್ನು ಜಾಗತಿಕ ಮಟ್ಟದಲ್ಲಿ “ಬುದ್ಧಿಸ್ಟ್ ಸರ್ಕ್ಯೂಟ್” ಆಗಿ ಮುಂಚೂಣಿಗೆ ತರಲು ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ರಾಜ್ಯ ಸರ್ಕಾರದಿಂದ ಹಲವಾರು ಉಪಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಸನ್ನತಿ (ಕಲಬುರಗಿ ಜಿಲ್ಲೆ)
ಮಹಾಸ್ತೂಪ (ಕ್ರಿ.ಪೂ. ೨ನೇ ಶತಮಾನ), ಅಶೋಕನ ಶಾಸನಗಳು, ಬುದ್ಧನ ಅವಶೇಷಗಳು, ಇಲ್ಲಿ ಪತ್ತೆಯಾದ ಬುದ್ಧನ ಕಂಚಿನ ಪ್ರತಿಮೆ (೧೮೦೦ ವರ್ಷ ಹಳೆಯದು) ಪ್ರಸಿದ್ಧವಾಗಿದೆ.
ಪಟ್ಟದಕಲ್ಲು (ಬಾಗಲಕೋಟೆ ಜಿಲ್ಲೆ)
ದೇವಸ್ಥಾನಗಳ ಶಿಲ್ಪಕಲೆಯ ಪ್ರಥಮ ಪ್ರಯೋಗಗಳನ್ನು ಪ್ರತಿನಿಧಿಸುವ ದೇವಾಲಯಗಳ ಗುಂಪಿಗೆ ಪಟ್ಟದಕಲ್ಲು ಸೇರಿದೆ. ಪಟ್ಟದಕಲ್ಲು ಎಂಬ ಹಳ್ಳಿ ಮಲಪ್ರಭಾ ನದಿಯ ದಂಡೆಯಲ್ಲಿದೆ. ಇದು ಬಾಗಲಕೋಟೆ ಜಿಲ್ಲೆಯಲ್ಲಿ ಇದೆ. UಓಇSಅಔ ವಿಶ್ವ ಪರಂಪರಾ ತಾಣ, ಚಾಲುಕ್ಯರ ವಾಸ್ತುಶಿಲ್ಪದ ಮಾಣಿಕ್ಯ. ವಿರೂಪಾಕ್ಷ, ಸಂಗಮೇಶ್ವರ, ಮಲ್ಲಿಕಾರ್ಜುನ ದೇವಾಲಯಗಳು ಕಲ್ಲಿನ ಕೆತ್ತನೆಗೆ ಹೆಸರುವಾಸಿಯಾಗಿವೆ.


ಐಹೊಳೆ
ಭಾರತೀಯ ಶಿಲ್ಪಕಲೆಯ ತೊಟ್ಟಿಲು ಎನಿಸಿರುವ ಐಹೊಳೆ, ಮಲಪ್ರಭಾ ನದಿಯ ದಂಡೆಯಲ್ಲಿದೆ. ಬಾಗಲಕೊಟೆ ಜಿಲ್ಲೆಯ ಬಾದಾಮಿ ತಾಲೂಕಿಗೆ ಸೇರಿದ ಐಹೊಳೆ, ಚಾಲುಕ್ಯ ವಾಸ್ತುಶಿಲ್ಪದ ಒಂದು ಕೇಂದ್ರವಾಗಿದೆ. ಐಹೊಳೆಯು ಬಾದಾಮಿ ಚಾಲುಕ್ಯರ ಮೊದಲ ರಾಜಧಾನಿಯಾಗಿತ್ತು. ಇಲ್ಲಿ ಕಂಡು ಬರುವ ದೇವಾಲಯಗಳು ಮತ್ತು ವಾಸ್ತುಶಿಲ್ಪಗಳು ಪ್ರಾಚೀನವಾದವುಗಳಾಗಿವೆ. ಚಾಲುಕ್ಯರ ಕಾಲದಲ್ಲಿ ಇದು ವಿದ್ಯಾಕೇಂದ್ರವಾಗಿತ್ತು. ಇದನ್ನು ದೇವಾಲಯ ವಾಸ್ತು ನಿರ್ಮಾಣದ ತೊಟ್ಟಿಲು ಎಂದು ಕರೆಯುತ್ತಾರೆ. ಐಹೊಳೆಯ ಹೆಸರು ಕೆಲವು ಶಾಸನಗಳಲ್ಲಿ ಆರ್ಯಪುರ ಎಂದು ಉಲ್ಲೇಖಸಲ್ಪಟ್ಟಿದೆ. ಶಾಸನದ ಉಲ್ಲೇಖ ಹೆಸರನ್ನು ಮೊದಲು ಅಯ್ಯವೊಳೆ-ಆಯಿವೊಳೆ-ಐಯಾವೊಳಿ- ಆರ್ಯಪುರ ಎಂದು ಬರುಬರುತ್ತಾ ಅದನ್ನು ಐಹೊಳೆ ಎಂದು ಕರೆದಿರಬಹುದು ಎಂದು ನಂಬಲಾಗಿದೆ. ಚಾಲುಕ್ಯರ ಮೊದಲ ರಾಜಧಾನಿ, ೧೦೦ ಕ್ಕೂ ಹೆಚ್ಚು ದೇವಾಲಯಗಳ ತಾಣ. ದೇವಾಲಯಗಳ ವಾಸ್ತು ನಿರ್ಮಾಣದ ತೊಟ್ಟಿಲು ಎಂದು ಕರೆಯುತ್ತಾರೆ.
ಬಾದಾಮಿ
ಭಾರತದ ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿರುವ ಹಿಂದೂ ಮತ್ತು ಜೈನ ಗುಹಾ ದೇವಾಲಯಗಳ ಸಂಕೀರ್ಣವಾಗಿದೆ. ಈ ಗುಹೆಗಳು ಬಂಡೆ ಕಲ್ಲುಗಳಿಂದ ಕೊರೆದು ಮಾಡಿರುವುದರಿಂದ ಭಾರತದಲ್ಲಿನ ವಾಸ್ತುಶಿಲ್ಪದ, ವಿಶೇಷವಾಗಿ ಬಾದಾಮಿ ಚಾಲುಕ್ಯ ವಾಸ್ತುಶಿಲ್ಪದ ಪ್ರಮುಖ ಉದಾಹರಣೆಗಳಾಗಿವೆ. ಅವುಗಳಲ್ಲಿ ಕೆಲವು ೬ನೇ ಶತಮಾನದ್ದಾಗಿವೆ. ಬಾದಾಮಿಯು ಒಂದು ಮಾನವ ನಿರ್ಮಿತ ಸರೋವರದ ಪಶ್ಚಿಮ ದಂಡೆಯ ಮೇಲೆ ಇದ್ದು ಕಲ್ಲಿನ ಮೆಟ್ಟಿಲುಗಳನ್ನು ಹೊಂದಿರುವ ಮಣ್ಣಿನ ಗೋಡೆಯಿಂದ ಸುತ್ತುವರಿದಿದೆ, ನಂತರದ ಕಾಲದಲ್ಲಿ ಕಟ್ಟಲಾದ ಕೋಟೆಗಳಿಂದ ಉತ್ತರ ಮತ್ತು ದಕ್ಷಿಣದಲ್ಲಿ ಸುತ್ತುವರಿದಿದೆ. ಬಾದಾಮಿ ಗುಹಾದೇವಾಲಯಗಳು ಡೆಕ್ಕನ್ ಪ್ರದೇಶದ ಪ್ರಾಚೀನ ಹಿಂದೂ ದೇವಾಲಯಗಳ ಉದಾಹರಣೆಗಳಾಗಿವೆ.
ಮೊದಲನೇ ಗುಹೆಯಲ್ಲಿ, ಹಿಂದೂ ದೈವಗಳ ಮತ್ತು ವಿಷಯಗಳ ವಿವಿಧ ಶಿಲ್ಪಗಳಿದ್ದು, ತಾಂಡವ ನೃತ್ಯದ ಶಿವನ ನಟರಾಜ ವಿಗ್ರಹವು ಪ್ರಮುಖವಾದ ಕೆತ್ತನೆಯಾಗಿದೆ. ಎರಡನೆಯ ಗುಹೆಯು ಅದರ ವಿನ್ಯಾಸ ಮತ್ತು ಆಯಾಮಗಳ ದೃಷ್ಟಿಯಿಂದ ಹೆಚ್ಚಾಗಿ ಮೊದಲನೆಯ ಗುಹೆಯನ್ನು ಹೋಲುತ್ತದೆ, ಇದರಲ್ಲಿ ಹಿಂದೂ ವಿಷಯಗಳಿವೆ, ಇದರಲ್ಲಿ ವಿಷ್ಣುವಿನ ತ್ರಿವಿಕ್ರಮನ ಮೂರ್ತಿಯು ದೊಡ್ಡದಾಗಿದೆ. ಮೂರನೇಯ ಗುಹೆಯು ಅತಿದೊಡ್ಡ ಗುಹೆಯಾಗಿದ್ದು, ಇದು ವಿಷ್ಣುವಿಗೆ ಸಂಬಂಧಿಸಿದ್ದು ಇದು ಈ ಗುಹಾ ಸಂಕೀರ್ಣದಲ್ಲಿಯೇ ಅತ್ಯಂತ ನಾಜೂಕಾದ ಕೆತ್ತನೆಗಳನ್ನು ಹೊಂದಿದೆ. ನಾಲ್ಕನೇ ಗುಹೆಯು ಜೈನ ಧರ್ಮದ ಪೂಜ್ಯ ವ್ಯಕ್ತಿಗಳಿಗೆ ಸಮರ್ಪಿತವಾಗಿದೆ. ಸರೋವರದ ಸುತ್ತ, ಬಾದಾಮಿಯು ಹೆಚ್ಚುವರಿ ಗುಹೆಗಳನ್ನು ಹೊಂದಿದ್ದು ಅವುಗಳಲ್ಲಿ ಒಂದು ಬೌದ್ಧ ಗುಹೆಯಾಗಿರಬಹುದು. ಮತ್ತೊಂದು ಗುಹೆಯನ್ನು ೨೦೧೫ ರಲ್ಲಿ ಕಂಡುಹಿಡಿಯಲಾಯಿತು, ಇದು ನಾಲ್ಕು ಮುಖ್ಯ ಗುಹೆಗಳಿಂದ ಸುಮಾರು ೫೦೦ ಮೀಟರ್ (೧,೬೦೦ ಅಡಿ) ದೂರದಲ್ಲಿದ್ದು, ೨೭ ಹಿಂದೂ ಕೆತ್ತನೆಗಳನ್ನು ಹೊಂದಿದೆ. ಈ ಗುಹಾ ದೇವಾಲಯಗಳು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಪಟ್ಟದಕಲ್ಲಿನಿಂದ ೧೪ ಮೈಲಿ ಮತ್ತು ನೂರಕ್ಕೂ ಹೆಚ್ಚು ಪ್ರಾಚೀನ ಮತ್ತು ಮಧ್ಯಕಾಲೀನ ಯುಗದ ಹಿಂದೂ, ಜೈನ ಮತ್ತು ಬೌದ್ಧ ಸ್ಮಾರಕಗಳನ್ನು ಹೊಂದಿರುವ ಇನ್ನೊಂದು ತಾಣವಾದ ಐಹೊಳೆಯಿಂದ ೨೨ ಮೈಲಿ ದೂರದಲ್ಲಿವೆ. ಬಾದಾಮಿಯಲ್ಲಿ ಗುಹಾ ದೇವಾಲಯಗಳು, ಅಗಸ್ತ್ಯ ಸರೋವರ ಮತ್ತು ಬನಶಂಕರಿ ದೇವಸ್ಥಾನ. ಇನ್ನಿತರ ಸ್ಥಳಗಳು ವಿಶಿಷ್ಟವಾಗಿದೆ.
ಮಳಖೇಡಾ ಕೋಟೆ
೯ ಮತ್ತು ೧೦ನೇ ಶತಮಾನಗಳಲ್ಲಿ ಡೆಕ್ಕನ್ ಪ್ರದೇಶವನ್ನು ಆಳಿದ ರಾಷ್ಟ್ರಕೂಟ ರಾಜವಂಶದ ರಾಜಧಾನಿಯಾಗಿದ್ದ ಮಾನ್ಯಖೇತವನ್ನು ಇಂದು ಮಲಖೇಡಾ ಎಂದು ಕರೆಯಲಾಗುತ್ತಿದೆ. ಸುಮಾರು ೩೦೦೦ ವರ್ಷಗಳಷ್ಟು ಹಳೆಯದಾದ ಕೋಟೆಯನ್ನು ನಾವು ಇಲ್ಲಿ ಕಾಣಬಹುದು. ಹಾಗೂ ಜೈನ ಧರ್ಮದ ಪ್ರಮುಖ ಮೂರ್ತಿಶಿಲ್ಪಗಳು ಇತರೆ ಸ್ಮಾರಕಗಳನ್ನು ಕಾಣಬಹುದು.
ಬನವಾಸಿ ((ಉತ್ತರ ಕನ್ನಡ)
ಬನವಾಸಿ ಕರ್ನಾಟಕದ ಅತ್ಯಂತ ಹಳೆಯ ಪಟ್ಟಣಗಳಲ್ಲಿ ಒಂದಾಗಿದೆ. ಕದಂಬರ ಕಾಲದಲ್ಲಿ (೪ನೇ ಶತಮಾನ), ಮಧುಕೇಶ್ವರ ದೇವಾಲಯ, ಬೌದ್ಧ ವಿಹಾರಗಳು ಮತ್ತು ಚೈತ್ಯಗಳು ಶೋಧವಾಗಿವೆ.
​ಬೌದ್ಧಧರ್ಮ ಪ್ರಚಾರದ ಹಂತಗಳು
ಮೌರ್ಯ ಯುಗ (ಕ್ರಿ.ಪೂ. ೩ನೇ ಶತಮಾನ):

  • ಅಶೋಕನ ಶಾಸನಗಳು (ಸನ್ನತಿ, ಮಾಸ್ಕಿ).
  • ಬೌದ್ಧ ಭಿಕ್ಷುಗಳು ದಕ್ಷಿಣ ಭಾರತಕ್ಕೆ ಪ್ರಯಾಣ.
    ಸಾತವಾಹನರು ಮತ್ತು ಕದಂಬರು (ಕ್ರಿ.ಶ. ೨-೫ನೇ ಶತಮಾನ):
    ಬನವಾಸಿ, ಬಾದಾಮಿ ಗುಹೆಗಳಲ್ಲಿ ಬೌದ್ಧ ಚೈತ್ಯಗಳು.
    ಚಾಲುಕ್ಯರು ಮತ್ತು ರಾಷ್ಟ್ರಕೂಟರು (೬-೧೦ನೇ ಶತಮಾನ):
    ಬೌದ್ಧಧರ್ಮ ಕ್ಷೀಣಿಸುತ್ತಾ ಹೋಯಿತು, ಆದರೆ ಕೆಲವು ವಿಹಾರಗಳು ಉಳಿದವು.
    ನಾಗಾವಿ: ೧೨೦೦-೧೫೦೦ ವರ್ಷದ ಇತಿಹಾಸ- ದಕ್ಷಿಣದ ತಕ್ಷಶಿಲೆ ಚಿತ್ತಾಪುರ ಬಳಿ ಇರುವ ನಾಗಾವಿಯು ಒಂದು ಪ್ರಾಚೀನ ಊರಾಗಿದ್ದು, ರಾಷ್ಟ್ರಕೂಟರ ಕಾಲದಲ್ಲಿ ಪ್ರಮುಖ ಶಿಕ್ಷಣ ಕೇಂದ್ರವಾಗಿತ್ತು. ಇಲ್ಲಿನ ಸಾವಿರ ವರ್ಷಗಳಷ್ಟು ಪುರಾತನವಾದ ದೇವಸ್ಥಾನದಲ್ಲಿನ ಯಲ್ಲಮ್ಮ ದೇವಿಯನ್ನು ರಾಷ್ಟ್ರಕೂಟರ ಕುಲದೇವತೆ ಎಂದು ಆರಾಧಿಸಲಾಗುತ್ತದೆ. ನಾಗಾವಿಯ ಇತಿಹಾಸವು ರಾಷ್ಟ್ರಕೂಟರು, ಕಲ್ಯಾಣದ ಚಾಲುಕ್ಯರು ಮತ್ತು ಬಹಮನಿ ಸುಲ್ತಾನರಂತಹ ವಿವಿಧ ರಾಜವಂಶಗಳ ಆಳ್ವಿಕೆಯನ್ನು ದಾಖಲಿಸುತ್ತದೆ. ಹಾಗಾಗಿಯೇ ಇದು ಮಿಶ್ರ ವಾಸ್ತುಶಿಲ್ಪ ಶೈಲಿಯಲ್ಲಿ ಗೋಚರಿಸುತ್ತದೆ. ಇಂದಿಗೂ ಭಕ್ತರು ದೂರದಿಂದಲೂ ಸಾವಿರಾರು ಜನ ಬರುತ್ತಾರೆ.
    ಶಹಾಪೂರ ಪಟ್ಟಣ
    ಶಹಾಪೂರ ಪಟ್ಟಣದಲ್ಲಿರುವ ಕೋಟೆಯ ಬೆಟ್ಟದ ಮೇಲೆ ಪವಡಿಸಿರುವ ಮಲಗಿದ ಬುದ್ಧನ ದೃಶ್ಯ ಈ ಬೆಟ್ಟ ಪ್ರಕೃತಿದತ್ತವಾಗಿ ನೈಜವಾಗಿ ಬುದ್ಧನೇ ಮಲಗಿದ್ದಾನೆ ಎಂದು ಭಾಸವಾಗುತ್ತದೆ. ಬೆಟ್ಟವೇ ಬುದ್ಧನು ಮಲಗಿರುವಂತೆ ರೂಪುಗೊಂಡಿರುವುದು ಅದ್ಭುತವೇ ಸರಿ. ದೂರದಿಂದ ನೋಡಿದರೆ, ಬುದ್ಧನ ಹಣೆ, ಮೂಗು ಮತ್ತು ಎದೆಯ ಮೇಲೆ ಕೈ ಇಟ್ಟುಕೊಂಡು ನಿದ್ರಾವಸ್ಥೆಯಲ್ಲಿರುವಂತೆ ಗೋಚರಿಸುತ್ತದೆ. ಇದು ಪ್ರಕೃತಿಯ ಅದ್ಭುತ ಶಿಲ್ಪಕಲೆ ಅಲ್ಲವೇ?
    ಸುರಪುರ
    ಕಲ್ಯಾಣ ಪ್ರದೇಶವು ನಿಜವಾಗಿಯೂ ಪ್ರಕೃತಿ ಸೌಂದರ್ಯದ ಗಣಿಯಾಗಿದೆ. ಗಂಗಾವತಿಯಿಂದ ಸುರಪೂರ ಮಾರ್ಗದುದ್ದಕ್ಕೂ ಅನೇಕ ಅದ್ಭುತವಾದ ಶಿಲೆಗಳನ್ನು ಕಾಣಬಹುದು. ಈ ಬಂಡೆಗಲ್ಲಿನ ಶಿಲೆಗಳು ಒಂದರ ಮೇಲೊಂದು ಪವಡಿಸಿ ಸಾವಿರಾರು ವರ್ಷಗಳಿಂದ ತಮ್ಮ ಸಮತೋಲನೆಯನ್ನು ಕಾಪಾಡಿಕೊಂಡು ಉರುಳದೇ ನಿಂತಿರುವುದು ಆಶ್ಚರ್ಯಕರವಾಗಿದೆ.
    ಬೋನಾಳ ಕೆರೆ: (ಯಾದಗಿರಿ ಜಿಲ್ಲೆ)
    ಈ ಭಾಗದ ಇನ್ನೊಂದು ಪ್ರೇಕ್ಷಣಿಯ ಸ್ಥಳವೆಂದರೆ ಬೋನಾಳ ಗ್ರಾಮದ ಹತ್ತಿರ ಇರುವ ಕೆರೆ ಹಾಗೂ ಅಲ್ಲಿನ ಪಕ್ಷಿಧಾಮ. ಸುಮಾರು ಎರಡು ಚದುರ ಮೈಲು ನೀರಿನಿಂದಾವೃತವಾದ ಈ ಕೆರೆಯನ್ನು ಕ್ರಿ.ಶ. ೧೮೪೪ ರಲ್ಲಿ ಬ್ರಿಟೀಷರು ಪುನಃ ನಿರ್ಮಾಣ ಮಾಡಿದ್ದರೆಂದು ತಿಳಿದು ಬರುತ್ತದೆ. ಇಲ್ಲಿ ಆಸ್ಟ್ರೇಲಿಯಾ, ಅರ್ಜೆಂಟೈನಾ, ನೈಜೇರಿಯಾ ಮತ್ತು ಶ್ರೀಲಂಕಾ ದೇಶಗಳಿಂದ ವಲಸೆ ಬಂದ ಪಕ್ಷಿಗಳನ್ನು ನಾವು ಕಾಣಬಹುದು. ವಿಶೇಷವಾಗಿ ಈ ಪಕ್ಷಿಗಳ ಸಂಖ್ಯೆ ನವೆಂಬರ್ ತಿಂಗಳಿನಿಂದ ಜನವರಿವರೆಗೆ ಹೆಚ್ಚಾಗಿರುತ್ತವೆ. ರಾಜ್ಯದ ಅತಿ ದೊಡ್ಡ ಪಕ್ಷಿಧಾಮವಾಗಿದೆ.
    ಕೊಳ್ಳೂರು
    ಗುಲಬರ್ಗಾ ಮಾರ್ಗ ಮಧ್ಯದಲ್ಲಿ ಕೃಷ್ಣಾನದಿಯ ದಂಡೆಯ ಮೇಲೆ ಕೊಳ್ಳೂರು ಎಂಬ ಗ್ರಾಮವಿದೆ. ಇಲ್ಲಿ ಕೋಹಿನೂರು ವಜ್ರ ದೊರಕಿರುವುದು ತಿಳಿದು ಬರುತ್ತದೆ. ಇಂದಿಗೂ ಸಹ ಅನೇಕ ವಿದೇಶಿ ಕಂಪನಿಗಳು ಈ ಖನಿಜ ಸಂಪತ್ತಿನ ಹುಡುಕಾಟಕ್ಕೋಸ್ಕರ ಸರ್ವೇಕ್ಷಣೆ ಮಾಡುತ್ತಿರುವುದು ಈ ಭಾಗದ ಸಮೃದ್ಧಿಯ ದ್ಯೋತಕವಾಗಿದೆ.
    ಬೀದರ್ ಕೋಟೆ
    ಕರ್ನಾಟಕದ ಪ್ರಾಚೀನ ರಾಜವಂಶದ ಅಧಿಕೃತ ವಾಸ್ತುಶಿಲ್ಪದ ಭವ್ಯತೆಯನ್ನು ಹೊಂದಿರುವ ಐತಿಹಾಸಿಕ ಹೆಗ್ಗುರುತಾಗಿರುವ ಹಾಗೂ ದಕ್ಷಿಣಭಾರತದ ರಾಜವಂಶಗಳ ಹೆಮ್ಮೆಯ ಪ್ರತಿರೂಪಗಳಲ್ಲಿ ಬೀದರ್ ಕೋಟೆಯೂ ಒಂದು. ಈ ಕೋಟೆಯನ್ನು ಈಗ ಭಾರತದ ಒಂದು ಅಪರೂಪದ ಸ್ಥಳವೆಂದು ಪರಿಗಣಿಸಲಾಗಿದೆ. ಬೀದರ್ ಕೋಟೆಯು ತನ್ನ ಮೂಲರೂಪವನ್ನು ಕಳೆದುಕೊಂಡಿದ್ದರೂ ಕೂಡ ಈ ಭವ್ಯವಾದ ಕೋಟೆಯು ಅನೇಕ ರೋಮಾಂಚಕ ಇತಿಹಾಸವನ್ನು ಹೊಂದಿದೆ. ಈ ಕೋಟೆ ಬಹಮನಿ ಸುಲ್ತಾನರ ಕಾಲದ ವಾಸ್ತುಶಿಲ್ಪದ ಭವ್ಯತೆ. ಒಳಗೆ ಅರಮನೆಗಳು, ಮಸೀದಿಗಳು, ಸಮಾಧಿಗಳು ಮತ್ತು ವಿಶಾಲವಾದ ಬಾರಾ ಗಜಾ ತೋಪು ಇದೆ.
    ಮದರಸಾ, ಬೀದರ್
    ೧೪೬೦ ರ ದಶಕದಲ್ಲಿ ನಿರ್ಮಿಸಲಾದ ಮೊಹಮ್ಮದ್ ಗವಾನ್ ಮದರಸಾ, ಒಂದು ಕಾಲದಲ್ಲಿ ಇಸ್ಲಾಮಿಕ್ ಕಾಲೇಜಾಗಿದ್ದ ಕಟ್ಟಡದ ಅವಶೇಷವಾಗಿದೆ. ಮೂರು ಅಂತಸ್ತಿನ ಸಂಕೀರ್ಣ ಕುರಾನ್ನ ಪದ್ಯಗಳ ಶಾಸನಗಳಿಂದ ಅಲಂಕರಿಸಲ್ಪಟ್ಟಿದೆ. ಈ ಪಾರಂಪರಿಕ ರಚನೆಯನ್ನು ರಾಷ್ಟ್ರೀಯ ಪ್ರಾಮುಖ್ಯತೆಯ ಸ್ಮಾರಕಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.
    ಕಲಬುರಗಿ ಕೋಟೆ
    ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಎನಿಸಿರುವ ಕಲಬುರಗಿ ಕೋಟೆ, ರಾಜ-ಮಹಾರಾಜರ ಕಾಲದ ಕಟ್ಟಡಗಳು, ಜುಮ್ಮಾ ಮಸೀದಿ, ಶರಣ ಬಸವೇಶ್ವರ ದೇವಸ್ಥಾನ, ಗುಂಬಜಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ.
    ಜಾಮಾ ಮಸೀದಿ, ಬಿಜಾಪುರ
    ೧೬ನೇ ಶತಮಾನದಲ್ಲಿ ಬಿಜಾಪುರ ಸುಲ್ತಾನರ ಅಲಿ ಆದಿಲ್ ಷಾ ನಿರ್ಮಾಣವನ್ನು ಪ್ರಾರಂಭಿಸಿದನು, ಆದರೆ ಅದು ಎಂದಿಗೂ ಪೂರ್ಣಗೊಂಡಿಲ್ಲ. ಇದು ಬಿಜಾಪುರದ ಅತಿ ದೊಡ್ಡ ಮಸೀದಿಯಾಗಿದ್ದು, ೪,೦೦೦ ಭಕ್ತರಿಗೆ ಇಲ್ಲಿ ಪ್ರಾರ್ಥನೆ ಸಲ್ಲಿಸಬಹುದು.
    ಬಿಜಾಪುರ – ಗೋಲಗುಂಬಜ್
    ಬಿಜಾಪುರದಲ್ಲಿರುವ ಈ ಕೋಟೆ ದಕ್ಷಿಣ ಭಾರತದ ಆಗ್ರಾ ಎಂದೇ ಪ್ರಸಿದ್ಧಿ ಪಡೆದಿದೆ. ಗೋಲ ಗುಂಬಜ್, ಆಸಾರ್ ಮಸೀದಿ, ಭೀಮಾ ನದಿ ತೀರದ ಸ್ಮಾರಕಗಳು ನೋಡಲೇ ಬೇಕಾದವು.
    ಬಿಜಾಪುರವಲ್ಲದೆ ಬೀದರ, ಗೊಲ್ಕೊಂಡ, ಗುಲ್ಬರ್ಗಾಗಳನ್ನೊಳಗೊಳ್ಳುವ ‘ಗೋಲಗುಂಬಜ್’ ಬಿಜಾಪುರದ ಅತ್ಯಂತ ಆಕರ್ಷಕವಾದ ಸ್ಮಾರಕ. ಇದನ್ನು ಮುಹಮ್ಮದ್ ಆದಿಲ್ ಷಾ,(೧೬೨೭-೫೬) ತನ್ನ ಸಮಾಧಿ ಹಾಗೂ ಸ್ಮಾರಕವಾಗಿ ನಿರ್ಮಿಸಿದನು. ಗೋಲ್ ಗುಂಬಜ್ ತಳಹದಿಯು ೨೦೫ ಅಡಿಗಳ ಚಚೌಕ. ಅದರ ಸುತ್ತಲೂ ಇರುವ ಗೋಡೆಗಳು ೧೯೮ ಅಡಿ ಎತ್ತರವಾಗಿವೆ. ಈ ಗೋಡೆಗಳ ಮೇಲೆ ಗುಂಬಜವು ಕಣ್ಣಿಗೆ ಕಾಣುವ ಯಾವುದೇ ಆಸರೆಯೂ ಇಲ್ಲದೆ ನಿಂತಿದೆ.
    ಇಲ್ಲಿ ಆಡಿದ ಮಾತು ಅಥವಾ ಮಾಡಿದ ಶಬ್ದವು ಹನ್ನೊಂದು ಬಾರಿ ಪ್ರತಿಧ್ವನಿಸುತ್ತದೆ. ಹಾಲ್‌ನಿಂದ ೩೩.೨೨ ಮೀಟರುಗಳ ಎತ್ತರದಲ್ಲಿ ಸುಮಾರು ಮೂರೂಕಾಲು ಅಡಿ ಅಗಲದ ಗ್ಯಾಲರಿಯಿದೆ. ಗುಂಬಜದ ಕೆಳಗಿರುವ ವಿಶಾಲವಾದ ಹಾಲಿನ ವಿಸ್ತೀರ್ಣವು ೧೮೩೩೭೬೭ ಚದುರಡಿಗಳು. ಗೋಲಗುಂಬಜ್, ಜಗತ್ತಿನಲ್ಲಿರುವ ಅತ್ಯಂತ ದೊಡ್ಡ ಸಿಂಗಲ್ ಛೇಂಬರ್ ಸ್ಥಳಗಳಲ್ಲಿ ಒಂದು. ರೋಮ್ ನಗರದಲ್ಲಿರುವ ಸೈಂಟ್ ಪೀಟರ್ ಬ್ಯಾಸಿಲಿಕಾದ ಡೋಮನ್ನು ಹೊರತುಪಡಿಸಿದರೆ, ಇದು ವಿಶ್ವದ ಎರಡನೇ ದೊಡ್ಡ ಗುಮ್ಮಟ.
    ಖಾಜಾ ಬಂದೇ ನವಾಜ ದರ್ಗಾ
    ಭಾರತದ ಅತಿದೊಡ್ಡ ದರ್ಗಾವಾಗಿರುವ ಅಜಮೇರಿನ ದರ್ಗಾದ ನಂತರ ಇನ್ನೊಂದು ಅತಿ ದೊಡ್ಡ ದರ್ಗಾ ಸೂಫಿ ಸಂತ ದರ್ಗಾವನ್ನು ಇಲ್ಲಿ ನೋಡಬಹುದು.
    ಜುಮ್ಮಾ ಮಸೀದಿ
    ಪರ್ಷಿಯನ್ ವಾಸ್ತುಶಿಲ್ಪ ಹೊಂದಿರುವ ಮಸೀದಿ ಗುಲಬರ್ಗಾ ಕೋಟೆಯ ಮಧ್ಯಭಾಗದಲ್ಲಿದೆ. ಈ ಮಸೀದಿಗೆ ಜುಮ್ಮಾ ಮಸೀದಿಯೆಂದು ಕರೆಯಲಾಗುತ್ತಿದ್ದು, ೩೮೦೧೬ ಚದುರ ಅಡಿಯಲ್ಲಿ ನಿರ್ಮಿಸಲ್ಪಟ್ಟಿದೆ. ಈ ಸ್ಮಾರಕದ ವಿಶೇಷವೆಂದರೆ ಸಂಪೂರ್ಣವಾಗಿ ಮೇಲ್ಮಾವಣಿ ಹೊಂದಿರುವ ಭಾರತದ ಏಕೈಕ ಮಸೀದಿ ಇದಾಗಿದೆ. ಇದರಲ್ಲಿ ಸುಮಾರು ೫೦೦೦ ಜನರು ಏಕ ಕಾಲದಲ್ಲಿ ಪ್ರಾರ್ಥನೆ ಮಾಡಲು ಸ್ಥಳಾವಕಾಶವಿದೆ. ಈ ಕಟ್ಟಡವು ೧೩೬೭ ಪರ್ಶಿಯಾ ದೇಶದ ವಾಸ್ತುಶಿಲ್ಪಕಾರರಿಂದ ನಿರ್ಮಿಸಲ್ಪಟ್ಟಿದೆ. ಇಲ್ಲಿ ೨೫೦ ಕಮಾನುಗಳಿದ್ದು ಯಾವ ಬದಿಯಿಂದಲೂ ನಿಂತು ನೋಡಿದರೂ ಸಹ ನಮಗೆ ಸಮಾನಾಂತರವಾಗಿ ಗೋಚರಿಸುತ್ತವೆ. ಹಾಗೂ ಯಾವುದೇ ಧ್ವನಿವರ್ಧಕ ಇಲ್ಲದೇ, ಇಡೀ ಮಸೀದಿಯಲ್ಲಿ ಪ್ರಾರ್ಥನೆಯ ಶಬ್ದ ಕೇಳಿ ವಿಸ್ಮಯ ಉಂಟಾಗುತ್ತದೆ.
    ೮೦೦ ವರ್ಷದ ಇತಿಹಾಸ- ಲೋಕತಂತ್ರದ ಬುನಾದಿ
    ಜಗದ್ಗುರು ಬಸವೇಶ್ವರರು (ಕ್ರಿ.ಶ. ೧೧೩೧-೧೧೬೭) ೧೨ ನೇ ಶತಮಾನದ ತತ್ವಜ್ಞಾನಿ, ಕವಿ ಮತ್ತು ಸಮಾಜ ಸುಧಾರಕರಾಗಿದ್ದು, ಲಿಂಗಾಯತ ಧರ್ಮದ ಸ್ಥಾಪಕರಾಗಿದ್ದಾರೆ. ಅವರು ಕ್ರಿ.ಶ. ೧೧೩೧ರಲ್ಲಿ ಬಾಗೇವಾಡಿಯಲ್ಲಿ (ಇಂದಿನ ಬಿಜಾಪುರ ಜಿಲ್ಲೆ) ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಕಲ್ಯಾಣದ (ಇಂದಿನ ಬಸವಕಲ್ಯಾಣದ) ರಾಜ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು. ಬಸವೇಶ್ವರರು ಜಾತಿ ವ್ಯವಸ್ಥೆ ಮತ್ತು ಲಿಂಗ ತಾರತಮ್ಯವನ್ನು ವಿರೋಧಿಸಿದರು ಮತ್ತು “ಅನುಭವಮಂಟಪ” ಸ್ಥಾಪಿಸುವ ಮೂಲಕ ಸಾಮಾಜಿಕ ಸಮಾನತೆಗಾಗಿ ಶ್ರಮಿಸಿದರು. ೫೦೦ಕ್ಕೂ ಹೆಚ್ಚು ಶರಣರ ಸಮ್ಮಿಲನ, ಎಲ್ಲರಿಗೂ ಮುಕ್ತ ಚರ್ಚೆಗೆ ಅವಕಾಶ ಕಲ್ಪಿಸಿದರು.
    ​ವಿಶ್ವದಲ್ಲಿ ಅಮೇರಿಕಾ / ಫ್ರಾನ್ಸ್ ದೇಶಗಳಿಂದ ಲೋಕ ತಂತ್ರ ಬಂದಿದೆ ಎಂದು ಎಲ್ಲರೂ ಹೇಳುತ್ತಾರೆ. ಆದರೆ, ಬಸವಣ್ಣ ಅವರ ಅನುಭವಮಂಟಪ ಇಂದಿನ ಲೋಕತಂತ್ರ ಎಂದು ಮರೆಯಲಾರೆ. ಕರ್ನಾಟಕದ ಇತಿಹಾಸದಲ್ಲಿ ಒಂದು ಮಹಾನ್ ಅಧ್ಯಾಯ. ಅವರ ಬದುಕು ಮತ್ತು ಕಾರ್ಯಗಳು ಇಂದಿಗೂ ಲೋಕತಂತ್ರ ಸಮಾನತೆ, ಮತ್ತು ಸಾಮಾಜಿಕ ನ್ಯಾಯದ ಪ್ರೇರಣೆಯಾಗಿ ನಿಲ್ಲುತ್ತವೆ.
    *ಶರಣಬಸವೇಶ್ವರ ದೇವಸ್ಥಾನ
    ಬಸವ ಕಲ್ಯಾಣ (ಬಿಜಾಪುರ-ಗುಲ್ಬರ್ಗಾ ಮಾರ್ಗ)ದಲ್ಲಿ ಕರ್ನಾಟಕದ ಚಾಲುಕ್ಯ-ರಾಷ್ಟ್ರಕೂಟ ವಾಸ್ತುಶಿಲ್ಪದ ಮಿಶ್ರಣ ಶೈಲಿಯಲ್ಲಿ ನಿರ್ಮಿಸಿದ್ದಾರೆ.
    ಶರಣಬಸವೇಶ್ವರರು ಎಲ್ಲಾ ಜಾತಿ, ಧರ್ಮದ ಜನರಿಗೆ ಸೇವೆ ಮಾಡಿದರು. ಅವರ ದೇವಸ್ಥಾನದಲ್ಲಿ ಹಿಂದು-ಮುಸ್ಲಿಂ-ಜೈನ-ಲಿಂಗಾಯತ ಭಕ್ತರು ಒಟ್ಟಾಗಿ ಪೂಜೆ ಸಲ್ಲಿಸುತ್ತಾರೆ.
    ವೈಷ್ಟೋದೇವಿ ಮಾದರಿ ನರಸಿಂಹ ಝರಾ ನೈಸರ್ಗಿಕ ಗುಹೆ ದೇವಾಲಯ
    ಬೀದರ್ ಕೋಟೆ ಭಾರತದ ಕರ್ನಾಟಕದ ಉತ್ತರ ಪ್ರಸ್ಥಭೂಮಿಯ ಬೀದರ್ ನಗರದಲ್ಲಿದೆ. ಬಹಮನಿ ರಾಜವಂಶದ ಸುಲ್ತಾನ್ ಅಲ್ಲಾದೀನ್ ಬಹ್ಮನಿ ತನ್ನ ರಾಜಧಾನಿಯನ್ನು ಗುಲ್ಬರ್ಗದಿಂದ ೧೪೨೭ ರಲ್ಲಿ ಬೀದರ್ಗೆ ಸ್ಥಳಾಂತರಿಸಿದರು ಮತ್ತು ಹಲವಾರು ಕೋಟೆಗಳ ಜೊತೆಗೆ ಇಸ್ಲಾಮಿಕ್ ಸ್ಮಾರಕಗಳನ್ನು ನಿರ್ಮಿಸಿದರು. ಅಲ್ಲದೇ ಬೀದರ್ ತನ್ನದೇ ಆದ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಆಹ್ಲಾದಕರವಾದ ವಾತಾವರಣ, ಅದ್ಭುತವಾದ ಕೋಟೆ, ಗುರುನಾನಕರ ಗುರುದ್ವಾರ, ಬಸವಕಲ್ಯಾಣದ ಅನುಭವ ಮಂಟಪವನ್ನು ಕಾಣಬಹುದು.
    ಹಾಗೂ ಈ ನಗರದ ಇನ್ನೊಂದು ಪ್ರಮುಖ ಸ್ಥಳವೆಂದರೆ, “ನರಸಿಂಹ ಝರಾ”, ಬೀದರ್ ಕೋಟೆಯಿಂದ ೨ ಕಿ.ಮೀ ದೂರದಲ್ಲಿರುವ ಗುಹೆ, ಇದು ಪುರಾಣ ಕಾಲದಿಂದಲೂ ಹೆಸರುವಾಸಿಯಾಗಿರುವ ಗುಹೆಯಲ್ಲಿ ನಿರ್ಮಿಸಲ್ಪಟ್ಟ ವಿಷ್ಣು/ನರಸಿಂಹ ದೇವರ ಗುಹಾಂತರ ದೇವಸ್ಥಾನ. ದರ್ಶನ ಪಡೆಯಲು ಹೋಗಬೇಕಾದರೆ ಸುಮಾರು ೯೧ ಮೀಟರ್ ಗುಹೆಯೊಳಗೆ ಪ್ರವೇಶಿಸಬೇಕಾಗುತ್ತದೆ. ಮಾರ್ಗದುದ್ದಕ್ಕೂ ೧.೩೭ ಅಡಿ ಮೀಟರ್ ಆಳವಾಗಿರುವ ನೈಸರ್ಗಿಕವಾಗಿ ನೀರು ತುಂಬಿಕೊಂಡಿದೆ. ಆ ನೀರಿನಲ್ಲಿಯೇ ನಡೆದುಕೊಂಡು ಹೋಗಿ ದೇವರ ದರ್ಶನ ಪಡೆದುಕೊಳ್ಳಬೇಕಾಗುತ್ತದೆ. ಈ ದೇವಾಲಯ ಜಮ್ಮು-ಕಾಶ್ಮೀರದಲ್ಲಿರುವ ಗುಹಾಂತರ ವೈಷ್ಟೋದೇವಿ ದೇವಸ್ಥಾನವನ್ನು ಹೋಲುವಂತಿದೆ.
    ಬೀದರಿನ ಪ್ರಾಚೀನ ಅಂತರ್ಜಲ ವ್ಯವಸ್ಥೆ ಅದನ್ನು ನಿರ್ಮಿಸಿದವರ ಅಸಾಧಾರಣ ಎಂಜಿನಿಯರಿಂಗ್ ಕೌಶಲ್ಯ ಮತ್ತು ಧೈರ್ಯದ ಸಂಕೇತವಾಗಿದೆ.
    ​೧೨೦೦ ವರ್ಷದ ಇತಿಹಾಸದ ಬ್ರಿಟೀಷ್ ಅದ್ಭುತ ವಾಸ್ತುಶಿಲ್ಪ
    ರಾಂಪುರ ಪಟ್ಟಣದ “ಟೈಲರ್ ಮಂಜಿಲ್’ ಇದು ಬೋನಾಳ ಪಕ್ಷಿಧಾಮದಿಂದ (ಯಾದಗಿರಿ ಜಿಲ್ಲೆ) ಸುಮಾರು ೧೦ಕಿ.ಮೀ. ದೂರದಲ್ಲಿದೆ. ಕ್ರಿ.ಶ. ೧೮೪೪ ರಲ್ಲಿ ನಿರ್ಮಿಸಿರುವ ಈ ಕಟ್ಟಡ ಬ್ರಿಟೀಷ ನಿವಾಸಿ ಆದ ಕರ್ನಲ್ ಮೆಡೋಸ್ ಟೈಲರ್ ಎಂಬುವವನ ವಾಸಗೃಹವಾಗಿತ್ತು. ಕಟ್ಟಡ ಬೆಟ್ಟದ ಮೇಲೆ ನಿರ್ಮಿಸಲಾಗಿದ್ದು, ಇಲ್ಲಿಂದ ಕಣ್ಣು ಹಾಯಿಸಿದರೆ ಸುರಪುರದ ಕೋಟೆ, ಅರಮನೆ ಮತ್ತು ವೇಣುಗೋಪಾಲಸ್ವಾಮಿ ದೇವಸ್ಥಾನವನ್ನು ವೀಕ್ಷಿಸಬಹುದು. ಈ ಕಟ್ಟಡದ ತಾಂತ್ರಿಕ ಕೌಶಲ್ಯ ಕಲ್ಪನಾತೀತವಾಗಿದೆ. ಇಲ್ಲಿ ಅಳವಡಿಸಿರುವ ಬಾಗಿಲುಗಳನ್ನು ಗಮನಿಸಿದರೆ ಪ್ರತಿಯೊಂದು ಬಾಗಿಲು ಒಂದಕ್ಕೊಂದು ಅಂತರ ಜೋಡಣೆಯಿಂದ ಕೂಡಿವೆ. ನಾವು ಒಂದು ಬಾಗಿಲನ್ನು ತಳ್ಳಿ ತೆರೆದಾಗ ಕಟ್ಟಡದಲ್ಲಿರುವ ಎಲ್ಲಾ ೭ ಬಾಗಿಲುಗಳು ತಾವಾಗಿಯೇ ಶಬ್ದಮಾಡಿ ತೆರೆದುಕೊಳ್ಳುತ್ತವೆ. ೨೧ನೇ ಶತಮಾನದ ಆಧುನಿಕ ತಂತ್ರಜ್ಞಾನ ಕೂಡ ನಿಬ್ಬೆರಗಾಗುವಂತಹ ಈ ಕಟ್ಟಡದ ತಂತ್ರಗಾರಿಕೆ ಹಾಗೂ ಸುತ್ತಮುತ್ತಲಿನ ನೈಸರ್ಗಿಕ ಸೌಂದರ್ಯ ಶ್ಲಾಘನೀಯವಾಗಿದೆ. ಇಲ್ಲಿ ಕಳ್ಳತನ ಎಚ್ಚರಿಸುವ ಅಲಾರಂ ಅನ್ನು ಅಳವಡಿಸಲಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶವು ನಿಜವಾಗಿಯೂ ಪ್ರವಾಸಿಗರ ಆಕರ್ಷಣೀಯ ತಾಣವೆನ್ನುವುದರಲ್ಲಿ ಸಂದೇಹವಿಲ್ಲ.
    ಈ ಭಾಗದಲ್ಲಿರುವ ಕಿಷ್ಕಂಧ, ಭೂತಾಯಿಯ ಮಡಿಲಲ್ಲಿರುವ ಆದಿಮಾನವರ ವಾಸಗೃಹಗಳು-ಪ್ರಕೃತಿದತ್ತವಾಗಿ ಬೋನಾಳ ಪಕ್ಷಿಧಾಮ. ಆಧ್ಯಾತ್ಮಿಕ ರಂಗದಲ್ಲಿ ಕೃಪಾಶೀರ್ವಾದವನ್ನು ನೀಡುವ ದೇವಸ್ಥಾನಗಳು, ಅತ್ಯಾಕರ್ಷಕ ವಾಸ್ತುಶೈಲಿಗಳು, ನರಸಿಂಹ ಝರಾ, ಕಲ್ಲಿನ ರಥ, ಕೋಟೆಗಳು ಹಾಗೂ ಮಸೀದಿಗಳು, ದಾಸೋಹದ ಆದರಾತಿಥ್ಯ ಇವೆಲ್ಲವೂ ಈ ಭಾಗದ ಅದ್ಭುತಗಳೆಂದೇ ಹೇಳಿದರೆ ಅತಿಶಯೋಕ್ತಿಯಾಗಲಾರದು. ಈ ತಾಣಗಳೆಲ್ಲವೂ ಹೈದರಾಬಾದ್ ಕರ್ನಾಟಕದ ನಿಜ ಸೌಂದರ್ಯವನ್ನು ಜಗತ್ತಿಗೆ ಪರಿಚಯಿಸುತ್ತಿವೆ.
    ಬನ್ನಿ, ಈ ಕಣ್ಮನ ಸೆಳೆಯುವ ಅದ್ಭುತ ಪ್ರೇಕ್ಷಣೀಯ ಸ್ಥಳಗಳಿಗೆ ಒಮ್ಮೆ ಭೇಟಿ ನೀಡಿ. ರೋಮಾಂಚನ ಗೊಳಿಸುವ ನವಿರಾದ ಅನುಭವವನ್ನು ತಮ್ಮದಾಗಿಸಿ ಕೊಳ್ಳಿ ಹಾಗೂ ನಮ್ಮ ಕನ್ನಡನಾಡಿನ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಶ್ರೀಮಂತಿಕೆ ಬಗ್ಗೆ ಹೆಮ್ಮೆ ಪಡೆದು ನಮ್ಮ ಕೊಡುಗೆಯು ಈ ನಾಡಿನ ನಿರಂತರ ಸಮೃದ್ಧಿಗೆ ಇರಲಿ ಎಂದು ಹಾರೈಸುತ್ತೇನೆ.
    ಕಲ್ಯಾಣ ಕರ್ನಾಟಕದ ಇತಿಹಾಸವನ್ನು ತಿಳಿಯೋಣ, ಪರಂಪರೆಯನ್ನು ಗೌರವಿಸೋಣ, ಪ್ರವಾಸೋದ್ಯಮದ ಮೂಲಕ ಅದರ ವೈಭವವನ್ನು ಜಗತ್ತಿಗೆ ಪರಿಚಯಿಸೋಣ.
BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಬೆವರ ಹನಿ – ಯಶಸ್ಸಿನ ಧ್ವನಿ

ಉದಯರಶ್ಮಿ ಇಂದಿನ ದಿನಪತ್ರಿಕೆ ಸೆಪ್ಟೆಂಬರ್ 16,2026

ಶರಣರ ಸಂದೇಶ ಆಲಿಸುವುದು ಪುಣ್ಯದ ಕಾರ್ಯ

ನ್ಯಾಷನಲ್ ಕ್ರಿಕೆಟ್ ಸ್ಫರ್ಧೆ: ಬಾಲಕಿ ಆರಾಧ್ಯ ಆಯ್ಕೆ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಕಲ್ಯಾಣ ಕರ್ನಾಟಕದ ಅದ್ಭುತ ಪ್ರೇಕ್ಷಣೀಯ ಸ್ಥಳಗಳು
    In ವಿಶೇಷ ಲೇಖನ
  • ಬೆವರ ಹನಿ – ಯಶಸ್ಸಿನ ಧ್ವನಿ
    In ವಿಶೇಷ ಲೇಖನ
  • ಉದಯರಶ್ಮಿ ಇಂದಿನ ದಿನಪತ್ರಿಕೆ ಸೆಪ್ಟೆಂಬರ್ 16,2026
    In ದಿನಪತ್ರಿಕೆ
  • ಶರಣರ ಸಂದೇಶ ಆಲಿಸುವುದು ಪುಣ್ಯದ ಕಾರ್ಯ
    In (ರಾಜ್ಯ ) ಜಿಲ್ಲೆ
  • ನ್ಯಾಷನಲ್ ಕ್ರಿಕೆಟ್ ಸ್ಫರ್ಧೆ: ಬಾಲಕಿ ಆರಾಧ್ಯ ಆಯ್ಕೆ
    In (ರಾಜ್ಯ ) ಜಿಲ್ಲೆ
  • ಶ್ರೀ ಪವನ ಸೌಹಾರ್ದ ಸಹಕಾರಿ ಸಂಘದ ಸಾಮಾನ್ಯ ಸಭೆ
    In (ರಾಜ್ಯ ) ಜಿಲ್ಲೆ
  • ಏಕರೂಪ ನಾಗರಿಕ ಸಂಹಿತೆ ಜಾರಿ ನಿರ್ಧಾರಕ್ಕೆ ಸ್ವಾಗತ
    In (ರಾಜ್ಯ ) ಜಿಲ್ಲೆ
  • ಜಿಓಸಿಸಿ ಬ್ಯಾಂಕಿಗೆ “ಅತ್ಯುತ್ತಮ ನಗರ ಸಹಕಾರಿ ಬ್ಯಾಂಕ್” ಪ್ರಶಸ್ತಿ
    In (ರಾಜ್ಯ ) ಜಿಲ್ಲೆ
  • ಎಲ್ಲ ರಂಗಗಳಲ್ಲೂ ಕ್ರಿಯಾಶೀಲವಾಗಿರುವ ಮಹಿಳೆ :ಬಸವಲಿಂಗ ಶ್ರೀ
    In (ರಾಜ್ಯ ) ಜಿಲ್ಲೆ
  • ಧರ್ಮಮಾರ್ಗದಲ್ಲಿ ನಡೆದು ದೇವರ ಕೃಪೆಗೆ ಪಾತ್ರರಾಗಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.