ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ತಾಲ್ಲೂಕು ಸೇರಿದಂತೆ ಮತಕ್ಷೇತ್ರವನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸುವಂತೆ ಆಗ್ರಹಿಸಿ ರಾಷ್ಟ್ರೀಯ ರೈತರ ಸಂಘದ ಪದಾಧಿಕಾರಿಗಳು ಗ್ರೇಡ್-೨ ತಹಶೀಲ್ದಾರ ಎಂ.ಜಿ. ಬಿರಾದಾರ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯಕ್ಕೆ ಸೋಮವಾರ ಆಗಮಿಸಿದ ರೈತರು ಮತಕ್ಷೇತ್ರವನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಲು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಮಹಿಳಾ ಕಾರ್ಯದರ್ಶಿ ರೇಣುಕಾ ಪಾಟೀಲ, ಜಿಲ್ಲಾ ಉಪಾಧ್ಯಕ್ಷ ಭಾಷಾಸಾಬ್ ಮನಗೂಳಿ, ತಾಲ್ಲೂಕು ಉಪಾಧ್ಯಕ್ಷ ಚಂದ್ರಶೇಖರ ಪ್ಯಾಟಿ, ಡಿಎಸ್‌ಎಸ್‌ನ ಪ್ರಕಾಶ ಗುಡಿಮನಿ, ಮಾತನಾಡಿ, ತಾಲ್ಲೂಕು ಆಡಳಿತ ಬೆಳೆ ಸಮೀಕ್ಷೆಯಲ್ಲಿ ಬೇಜವ್ದಾರಿಯಿಂದ ಕೆಲಸ ಮಾಡಿದೆ. ಮಳೆ ಹಾಗೂ ಬೆಳೆ ಕುರಿತು ಸರಿಯಾದ ಮಾಹಿತಿ ಒದಗಿಸದ ಕಾರಣ ಬರಗಾಲ ಪೀಡಿತ ಪ್ರದೇಶದಿಂದ ವಂಚಿತವಾಗಿದೆ. ಕೂಡಲೇ ಮತಕ್ಷೇತ್ರವನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಬೇಕು. ಪ್ರತಿ ಎಕರೆಗೆ ೨೫ ಸಾವಿರ ರೂ ಪರಿಹಾರ ನೀಡಬೇಕು. ಬೆಳೆಸಾಲ ಮನ್ನಾ, ನೀರು ಪೂರೈಕೆ ಹಾಗೂ ಮೇವು ಬ್ಯಾಂಕ್ ಆರಂಭಿಸಬೇಕು. ಇಲ್ಲವಾದಲ್ಲಿ ತಾಲ್ಲೂಕಿನ ಎಲ್ಲ ಕಚೇರಿಗಳಿಗೆ ಬೀಗ ಹಾಕಿ ಉಗ್ರವಾಗಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿ ನಂತರ ಮುಖ್ಯಮಂತ್ರಿಗಳಿಗೆ ತಹಶೀಲ್ದಾರ ಮೂಲಕ ಮನವಿ ಸಲ್ಲಿಸಿದರು.
ತಾಲ್ಲೂಕು ಅಧ್ಯಕ್ಷ ಶಿವಪ್ಪ ಡೋಣೂರ, ಸಂಗಮೇಶ ಹುಣಸಗಿ, ಸಾಹೇಬಗೌಡ ಪಾಟೀಲ, ಸಿದ್ರಾಮ ಗುಂದಗಿ, ಗಣೇಶ ಕನ್ನೋಳ್ಳಿ, ಸಿದ್ಧನಗೌಡ ಬಿರಾದಾರ, ಹಣಮಂತ್ರಾಯಗೌಡ ಪಾಟೀಲ, ಅಪ್ಪಾಸಾಹೇಬ ಹರವಾಳ, ಅಕ್ಬರ್ ಅರಬ್ಬಿ, ಮಾದೇವಪ್ಪ ಹರವಾಳ, ವಿಠ್ಠಲ ಹಿರೇಕುರುಬರ, ಮಹೇಶ ಬಡಿಗೇರ ಇದ್ದರು

