Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಅಥಣಿ ಸಮಗ್ರ ಅಭಿವೃದ್ಧಿಗೆ ಬದ್ಧ :ಸಚಿವ ಲಕ್ಷ್ಮಣ ಸವದಿ

ಎಲ್ಲ ಜ್ಞಾನಗಳ ಮೂಲ ಜಾನಪದ :ಶಿವಾನಂದ ಉಪ್ಪಾರ

ವಿದ್ಯಾರ್ಥಿಗಳ ಉತ್ತಮ ಫಲಿತಾಂಶಕ್ಕೆ ಶಿಕ್ಷಕರು ಶ್ರಮಿಸಬೇಕು

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಕಹಿಯಾದ ಸಕ್ಕರೆ: ಕೆ.ಜಿಗೆ ₹70ರ ಗಡಿ ದಾಟಿದ ದರ
(ರಾಜ್ಯ ) ಜಿಲ್ಲೆ

ಕಹಿಯಾದ ಸಕ್ಕರೆ: ಕೆ.ಜಿಗೆ ₹70ರ ಗಡಿ ದಾಟಿದ ದರ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಏಕಾಏಕಿ ದುಬಾರಿಯಾಗಿರುವ ಸಕ್ಕರೆ ದರ | ಗ್ರಾಹಕರ ಜೇಬಿಗೆ ಕತ್ತರಿ | ದರ ನಿಯಂತ್ರಣಕ್ಕೆ ಗ್ರಾಹಕರ ಆಗ್ರಹ

ಉದಯರಶ್ಮಿ ದಿನಪತ್ರಿಕೆ

ವರದಿ: ಸಿದ್ರಾಮ್ ಎಮ್ ಇಟ್ಟಿ
ಬಾಗಲಕೋಟೆˌ (ಜಮಖಂಡಿ): ಸಕ್ಕರೆ ಎಂದರೆ ಸಿಹಿ; ಆದರೆ ಇತ್ತೀಚಿನ ಬೆಲೆ ಏರಿಕೆ ಮಾತ್ರ ಗ್ರಾಹಕರ ಪಾಲಿಗೆ ಕಹಿಯಾಗತೊಡಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ. ಸಕ್ಕರೆ ದರ 70ರ ಗಡಿ ತಲುಪಿದ್ದು, ಸಾಮಾನ್ಯ ಜನರ ದಿನಸಿ ಬಜೆಟ್‌ಗೆ ಮತ್ತೊಂದು ಹೊಡೆತ ಬಿದ್ದಂತಾಗಿದೆ. ಕೆಲವೇ ದಿನಗಳ ಅಂತರದಲ್ಲಿ 15ರಿಂದ 20ರಷ್ಟು ದರ ಏರಿಕೆಯಾಗಿರುವುದು ಗ್ರಾಹಕರಲ್ಲಿ ಆತಂಕ ಮೂಡಿಸಿದೆ. ಗ್ರಾಮೀಣ ಭಾಗದಲ್ಲಿ 65ರಿಂದ 70ರ ವರೆಗೆ ಹಾಗೂ ಪಟ್ಟಣ ಪ್ರದೇಶಗಳಲ್ಲಿ 75ರಿಂದ 80ರ ವರೆಗೆ ಸಕ್ಕರೆ ಮಾರಾಟವಾಗುತ್ತಿರುವುದು ಕಂಡುಬರುತ್ತಿದೆ.


ಒಂದು ವರ್ಷದ ಹಿಂದೆ ಕೆ.ಜಿ.ಗೆ 40ರಿಂದ 45ರ ಆಸುಪಾಸಿನಲ್ಲಿದ್ದ ಸಕ್ಕರೆ ದರ, ನಂತರ 50ರ ಗಡಿ ದಾಟಿತ್ತು. ಕಳೆದ ವಾರದವರೆಗೂ 50ರಿಂದ 55ರ ವರೆಗೆ ಲಭ್ಯವಾಗುತ್ತಿದ್ದ ಸಕ್ಕರೆ ಇದೀಗ ಏಕಾಏಕಿ ದುಬಾರಿಯಾಗಿರುವುದು ಗ್ರಾಹಕರನ್ನು ಬೆಚ್ಚಿಬೀಳಿಸಿದೆ. ಅದರಲ್ಲೂ ಕಳೆದ ಎರಡು–ಮೂರು ದಿನಗಳಲ್ಲಿ ದರದಲ್ಲಿ ಕಂಡುಬಂದಿರುವ ತೀವ್ರ ಏರಿಕೆ ಮಾರುಕಟ್ಟೆಯಲ್ಲಿನ ಅಸ್ಥಿರತೆಯನ್ನು ಎತ್ತಿ ತೋರಿಸಿದೆ.
ದೇಶದ ಮಾರುಕಟ್ಟೆಯಲ್ಲೂ ಏರಿಕೆಯ ಒತ್ತಡ
ಸ್ಥಳೀಯ ಮಾರುಕಟ್ಟೆಯಲ್ಲಿನ 70ರ ದರವು ದೇಶದ ಸರಾಸರಿ ದರಕ್ಕಿಂತ ಗಮನಾರ್ಹವಾಗಿ ಹೆಚ್ಚಾಗಿದೆ. ಕೇಂದ್ರ ಸರ್ಕಾರದ ಬೆಲೆ ಮೇಲ್ವಿಚಾರಣಾ ವ್ಯವಸ್ಥೆಯ ಪ್ರಕಾರ ಆ.21ರಂದು ದೇಶದ ಸರಾಸರಿ ಚಿಲ್ಲರೆ ಸಕ್ಕರೆ ದರ 58.23ರಷ್ಟಿತ್ತು. ದೇಶದ ಸಕ್ಕರೆ ಮಾರುಕಟ್ಟೆಯಲ್ಲಿ ಸರಬರಾಜಿನ ಒತ್ತಡ ಮತ್ತು ಹಬ್ಬದ ಪೂರ್ವ ಬೇಡಿಕೆಯ ಪರಿಣಾಮ ಬೆಲೆ ಏರಿಕೆ ಕಂಡುಬಂದಿದೆ. ಕಳೆದ ಎರಡು ತಿಂಗಳಲ್ಲಿ ದೇಶೀಯ ಸಕ್ಕರೆ ಬೆಲೆಗಳು ಸುಮಾರು ಶೇ.40ರಷ್ಟು ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಬೆಲೆ ನಿಯಂತ್ರಣಕ್ಕೆ ಹಲವು ಕ್ರಮಗಳನ್ನು ಕೈಗೊಂಡಿದೆ.
ದರ ಏರಿಕೆಗೆ ಕಾರಣವೇನು?: ಸಕ್ಕರೆ ದರ ಏರಿಕೆಗೆ ಕಡಿಮೆಯಾದ ಉತ್ಪಾದನೆ, ಕೆಲವು ಭಾಗಗಳಲ್ಲಿ ಹವಾಮಾನದಿಂದ ಕಬ್ಬು ಬೆಳೆಗೆ ಉಂಟಾದ ಪರಿಣಾಮ, ಸೀಮಿತ ಮಾರುಕಟ್ಟೆ ಸರಬರಾಜು ಹಾಗೂ ಮುಂಬರುವ ಹಬ್ಬಗಳ ಹಿನ್ನೆಲೆಯಲ್ಲಿ ಹೆಚ್ಚುತ್ತಿರುವ ಬೇಡಿಕೆ ಸೇರಿದಂತೆ ಹಲವು ಅಂಶಗಳು ಕಾರಣವಾಗಿವೆ ಎಂದು ಮಾರುಕಟ್ಟೆ ವರದಿಗಳು ಸೂಚಿಸುತ್ತಿವೆ. ಆದರೆ ಸಕ್ಕರೆ ದರ ಏರಿಕೆಯನ್ನು ಕೇವಲ ಇಥೆನಾಲ್ ಉತ್ಪಾದನೆಗೆ ಕಬ್ಬು ತಿರುಗಿಸಿರುವುದರಿಂದಾಗಿದೆ ಎಂದು ಹೇಳಲು ಸಾಧ್ಯವಿಲ್ಲ;
ಇದರ ಬೆನ್ನಲ್ಲೇ ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಲಭ್ಯತೆ ಹೆಚ್ಚಿಸಿ ಬೆಲೆ ಇಳಿಕೆಗೆ ನೆರವಾಗುವ ಉದ್ದೇಶದಿಂದ ಕೇಂದ್ರ ಸರ್ಕಾರ 10 ಲಕ್ಷ ಟನ್ ಕಚ್ಚಾ ಸಕ್ಕರೆಯನ್ನು ಸುಂಕಮುಕ್ತವಾಗಿ ಆಮದು ಮಾಡಿಕೊಳ್ಳಲು ಅವಕಾಶ ನೀಡಿದೆ. ಈ ಆಮದು ಅಕ್ಟೋಬರ್ 31ರವರೆಗೆ ನಡೆಯಲಿದೆ. ಆದರೆ ಆಮದು ಮಾಡಿದ ಕಚ್ಚಾ ಸಕ್ಕರೆ ಶುದ್ಧೀಕರಣಗೊಂಡು ಮಾರುಕಟ್ಟೆಗೆ ಬರಲು ಸಮಯ ಬೇಕಾಗಿರುವುದರಿಂದ ಇದರ ತಕ್ಷಣದ ಪರಿಣಾಮ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.
ಈಗಾಗಲೇ ಬೇಳೆ, ಅಡುಗೆ ಎಣ್ಣೆ, ತರಕಾರಿ ಸೇರಿದಂತೆ ವಿವಿಧ ದಿನಸಿ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಮಧ್ಯಮ ಹಾಗೂ ಬಡ ಕುಟುಂಬಗಳಿಗೆ ಸಕ್ಕರೆ ದರದ ಹೆಚ್ಚಳ ಮತ್ತೊಂದು ಆರ್ಥಿಕ ಹೊರೆ ತಂದಿದೆ. ಒಟ್ಟಿನಲ್ಲಿ, ದೇಶದಾದ್ಯಂತ ಸಕ್ಕರೆ ಬೆಲೆ ಏರಿಕೆಯ ಒತ್ತಡದ ನಡುವೆ ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿಗೆ 70 ತಲುಪಿರುವ ದರ ಸಾಮಾನ್ಯ ಜನರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ದರ ನಿಯಂತ್ರಣಕ್ಕೆ ಗ್ರಾಹಕರ ಆಗ್ರಹ

ಸ್ಥಳೀಯ ಮಾರುಕಟ್ಟೆಯಲ್ಲಿ ಸಕ್ಕರೆ ದರ ಏಕಾಏಕಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಯ ದರಗಳ ಮೇಲೆ ನಿಗಾ ವಹಿಸಬೇಕು. ವ್ಯಾಪಾರಿಗಳು ನಿಗದಿತ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿದ್ದಾರೆಯೇ, ಕೃತಕ ದಾಸ್ತಾನು ಅಥವಾ ಕಾಳಸಂತೆ ನಡೆಯುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕು. ಸಕ್ಕರೆ ದರ ಸಾಮಾನ್ಯ ಸ್ಥಿತಿಗೆ ಮರಳುವಂತೆ ಮಾರುಕಟ್ಟೆಯಲ್ಲಿ ಸಮರ್ಪಕ ಸರಬರಾಜು ಖಚಿತಪಡಿಸಬೇಕು ಎಂಬುದು ಗ್ರಾಹಕರ ಒತ್ತಾಯವಾಗಿದೆ.

ಹೋಟೆಲ್–ಸಿಹಿತಿನಿಸು ಉದ್ಯಮಕ್ಕೂ ಬಿಸಿ

ಸಕ್ಕರೆ ದರ ಏರಿಕೆಯ ಪರಿಣಾಮ ಹೋಟೆಲ್, ಬೇಕರಿ, ಚಹಾ–ಕಾಫಿ ಅಂಗಡಿ ಹಾಗೂ ಸಿಹಿತಿನಿಸು ತಯಾರಿಕಾ ಉದ್ಯಮಗಳ ಮೇಲೂ ಬೀಳಲಿದೆ. ಸಕ್ಕರೆ ಪ್ರಮುಖ ಕಚ್ಚಾ ವಸ್ತುವಾಗಿರುವುದರಿಂದ ಅದರ ಬೆಲೆ ಹೆಚ್ಚಾದಂತೆ ಉತ್ಪಾದನಾ ವೆಚ್ಚವೂ ಹೆಚ್ಚುತ್ತದೆ. ಹೀಗಾಗಿ ಮುಂದಿನ ದಿನಗಳಲ್ಲಿ ಚಹಾ, ಕಾಫಿ, ಸಿಹಿತಿನಿಸು ಸೇರಿದಂತೆ ಕೆಲವು ಆಹಾರ ಪದಾರ್ಥಗಳ ಬೆಲೆ ಏರಿಕೆಯ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಅಥಣಿ ಸಮಗ್ರ ಅಭಿವೃದ್ಧಿಗೆ ಬದ್ಧ :ಸಚಿವ ಲಕ್ಷ್ಮಣ ಸವದಿ

ಎಲ್ಲ ಜ್ಞಾನಗಳ ಮೂಲ ಜಾನಪದ :ಶಿವಾನಂದ ಉಪ್ಪಾರ

ವಿದ್ಯಾರ್ಥಿಗಳ ಉತ್ತಮ ಫಲಿತಾಂಶಕ್ಕೆ ಶಿಕ್ಷಕರು ಶ್ರಮಿಸಬೇಕು

‘ಭಾರತ್ ಜೋಡೋ ಯುವ ಸಂಘ’ದ ಕುರಿತು ಜಾಗೃತಿ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಅಥಣಿ ಸಮಗ್ರ ಅಭಿವೃದ್ಧಿಗೆ ಬದ್ಧ :ಸಚಿವ ಲಕ್ಷ್ಮಣ ಸವದಿ
    In (ರಾಜ್ಯ ) ಜಿಲ್ಲೆ
  • ಎಲ್ಲ ಜ್ಞಾನಗಳ ಮೂಲ ಜಾನಪದ :ಶಿವಾನಂದ ಉಪ್ಪಾರ
    In (ರಾಜ್ಯ ) ಜಿಲ್ಲೆ
  • ವಿದ್ಯಾರ್ಥಿಗಳ ಉತ್ತಮ ಫಲಿತಾಂಶಕ್ಕೆ ಶಿಕ್ಷಕರು ಶ್ರಮಿಸಬೇಕು
    In (ರಾಜ್ಯ ) ಜಿಲ್ಲೆ
  • ‘ಭಾರತ್ ಜೋಡೋ ಯುವ ಸಂಘ’ದ ಕುರಿತು ಜಾಗೃತಿ
    In (ರಾಜ್ಯ ) ಜಿಲ್ಲೆ
  • ರಾಮತೀರ್ಥ ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ದುರಸ್ತಿಗೆ ಆಗ್ರಹ
    In (ರಾಜ್ಯ ) ಜಿಲ್ಲೆ
  • ದೇಶದ ಅಭಿವೃದ್ಧಿಗೆ ರಾಷ್ಟ್ರೀಯ ಏಕತೆ ಅತ್ಯಗತ್ಯ :ಡಾ.ನಾಯಕ
    In (ರಾಜ್ಯ ) ಜಿಲ್ಲೆ
  • ಕುಡಿಯುವ ನೀರಿನ ಸಮಸ್ಯೆ ಯಾಗದಂತೆ ಕ್ರಮವಹಿಸಿ
    In (ರಾಜ್ಯ ) ಜಿಲ್ಲೆ
  • ಬಾವಿಯಲ್ಲಿ ಇಬ್ಬರು ಬಾಲಕಿಯರ ಶವ ಪತ್ತೆ! ತಂದೆ ನಾಪತ್ತೆ!
    In (ರಾಜ್ಯ ) ಜಿಲ್ಲೆ
  • ಕಹಿಯಾದ ಸಕ್ಕರೆ: ಕೆ.ಜಿಗೆ ₹70ರ ಗಡಿ ದಾಟಿದ ದರ
    In (ರಾಜ್ಯ ) ಜಿಲ್ಲೆ
  • ದೀಪಿಕಾ ವಿದ್ಯಾರ್ಥಿವೇತನ: ವಿದ್ಯಾರ್ಥಿನಿಯರಿಗೆ ಜಾಗೃತಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.