ಉದಯರಶ್ಮಿ ದಿನಪತ್ರಿಕೆ
ಇಂಡಿ: ಎಲ್ಲ ಜ್ಞಾನಗಳ ತಾಯಿ ಹಾಗೂ ಎಲ್ಲ ಸಂಗತಿಗಳ ಪೂರ್ವಜರು ಜಾನಪದ ಹಾಗೂ ಜನಪದರು ಆಗಿದೆ ಎಂದು ಅಲಮೇಲ ಹೆಚ್. ಎ. ನಂದಿ ಪದವಿ ಕಾಲೇಜಿನ ಪ್ರಾಚಾರ್ಯ ಶಿವಾನಂದ ಉಪ್ಪಾರ ಅಭಿಪ್ರಾಯ ಪಟ್ಟರು.
ಅವರು ಇಂಡಿ ತಾಲೂಕಿನ ನಾದ ಕೆ ಡಿ ಗ್ರಾಮದಲ್ಲಿ ಸರಕಾರಿ ಪ್ರೌಢಶಾಲೆ ಹಾಗೂ ಕನ್ನಡ ಜಾನಪದ ಪರಿಷತ್ ಇಂಡಿ ಅವರ ಸಹಯೋಗದಲ್ಲಿ ಆಯೋಜಿಸಿದ್ದ ಸಂಭ್ರಮ ಶನಿವಾರ ಹಾಗೂ ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮದಲ್ಲಿ ಜಾನಪದದಲ್ಲಿ ಮಹಿಳೆಯರು ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದರು.
ಜಾನಪದ ಗರತಿ ಹಾಡಿದ್ದು ಅಂತರಂಗದಿಂದ ಬಂದ ಸಾಹಿತ್ಯವಾಗಿದೆ. ಜಾನಪದ ಉಳಿಯಲಿಕ್ಕೆ ಮುಂದಿನ ಪೀಳಿಗೆಗೆ ಅದರ ರುಚಿ ಹಚ್ಚಬೇಕು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಸರಕಾರಿ ಪದವಿ ಪೂರ್ವ ಕಾಲೇಜು ಗೋಳಸಾರ ದ ಪ್ರಾಚಾರ್ಯರಾದ ದಾಕ್ಷಾಯಣಮ್ಮಾ ಅವರು ಸಂಭ್ರಮ ಶನಿವಾರ ಮಕ್ಕಳಿಗೆ ಶಾಲೆಯೆಡೆಗೆ ಆಕರ್ಷಣೆ ಆಗಲಿಕೆ ಹಾಗೂ ಮಕ್ಕಳಿಗೆ ಕಲಿಕೆಯಲ್ಲಿನ ಏಕತಾನತೆ ಹೋಗಲಾಡಿಸಿ ಮಕ್ಕಳಲ್ಲಿ ವೈವಿಧ್ಯತೆ ಉಂಟಾಗಲು ಸಾಧ್ಯವಾಗುತ್ತದೆ ಎಂದರು.
ಇಂಡಿ ತಾಲೂಕ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಪಂಡಿತ ಅವಜಿ ಮಾತನಾಡಿ, ಪ್ರತಿ ಕಾರ್ಯಕ್ರಮದ ಮೂಲಕ ಜಾನಪದದ ಸೊಗಡನ್ನು ಎಲ್ಲ ಕಡೆ ಹರಡಲು ಇಂತ ಕಾರ್ಯಕ್ರಮದ ಅವಶ್ಯಕತೆ ಇರುತ್ತದೆ ಎಂದು ಹೇಳಿದರು.
ಶಿರಶ್ಯಾಡ ದ ಶ್ರೀ ಅಭಿನವ ಮುರುಗೇಂದ್ರ ಶಿವಾಚಾರ್ಯರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ವಿದ್ಯಾರ್ಥಿಗಳಿಂದ ಜಾನಪದ ಕಾರ್ಯಕ್ರಮ ಜರುಗಿತು. ನಾದ ಬಿ ಕೆ ಗ್ರಾಮದ ಗೊಂದಲಿ ಸಮುದಾಯದ ಕಲಾವಿದರು ಅದ್ಭುತವಾದ ಗೊಂದಲ ಕಾರ್ಯಕ್ರಮ ನಡೆಸಿಕೊಟ್ಟರು.
ಮುಖ್ಯ ಶಿಕ್ಷಕ ಸಿ ಎಂ ಬಂಡಗರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಬಸವರಾಜ ಅಂಕದ ನೇತೃತ್ವ ವಹಿಸಿದ್ದರು.
ಶಿಕ್ಷಕ ಎಸ್ ಎಸ್ ಹಚಡದ ಸ್ವಾಗತಿಸಿದರು. ಕನ್ನಡ ಜಾನಪದ ಪರಿಷತ್ ಕಾರ್ಯದರ್ಶಿ ಸಿದ್ಧಾರೂಢ ಕೊಳ್ಳುರ, ಸರ್ದಾರ್ ಮುಲ್ಲಾ ಹಾಗೂ ಶಾಲಾ ಶಿಕ್ಷಕರಾದ ಅಣ್ಣಾರಾಯ ಗೂಗದಡ್ಡಿ, ಅನಿತಾ ಅಳಗುಂಡಗಿ, ಶಶಿಕಲಾ ಬಡಿಗೇರ, ರೇಣುಕಾ ನಾಗಠಾಣ, ಶ್ರೀಶೈಲ್ ಪಾಟೀಲ್, ಶೋಭಾ ಬಿರಾದಾರ,ಸಮರಿನ ದೇಸಾಯಿ ಸೇರಿದಂತೆ ಗ್ರಾಮಸ್ತರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಸೃಷ್ಟಿ ಹಳೆಮನಿ, ಸೃಷ್ಟಿ ಪಾಳೆದ ನಿರೂಪಿಸಿದರು. ಸಾವಿತ್ರಿ ಕೊಳ್ಳುರ ವಂದಿಸಿದರು.

