ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪನಿರ್ದೇಶಕ ಮಂಜುನಾಥ ಗುಳೇದಗುಡ್ಡ ಕರೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪ್ರತಿಯೊಂದು ಮಗು ಗುಣಾತ್ಮಕ ಶಿಕ್ಷಣದೊಂದಿಗೆ ಸಮಾಜಮುಖಿಯಾಗಲು ಶಿಕ್ಷಕರು ಸಿದ್ಧಗೊಳಿಸಬೇಕು. ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸಿ ಉತ್ತಮ ಫಲಿತಾಂಶ ಬರುವಂತೆ ಶ್ರಮಿಸಬೇಕೆಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪನಿರ್ದೇಶಕ ಮಂಜುನಾಥ ಗುಳೇದಗುಡ್ಡ ಹೇಳಿದರು.
ನಗರದ ದರಬಾರ್ ಪ್ರೌಡಶಾಲೆಯಲ್ಲಿ ನಗರ ವಲಯದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮುಖ್ಯೋಪಾಧ್ಯಯರ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಳೆದ ವರ್ಷ 94ರಷ್ಟು ಎಸ್‌ಎಸ್‌ಎಲ್‌ಸಿ ಫಲಿತಾಂಶ ಬಂದಿದ್ದು, ಈ ಸಲವೂ ಈಗಿನಿಂದಲೇ ಮಕ್ಕಳಲ್ಲಿ ಇಷ್ಟಪಟ್ಟು ಒದುವುದನ್ನು ರೂಡಿಸಿ ಪರೀಕ್ಷೆಗೆ ಸಿದ್ಧಪಡಿಸಬೇಕು. ಅದರಲ್ಲೂ ವಿಶೇಷವಾಗಿ ಎಫ್‌ಎಲ್‌ಎನ್ ಹಾಗೂ ಎಲ್‌ಬಿಎ ಕುರಿತು ವಿಶೇಷ ಕಾಳಜಿ ವಹಿಸಬೇಕು. ಪ್ರತಿ ಮಗು ಕನಿಷ್ಠ ಕಲಿಕಾಮಟ್ಟ ತಲುಪಬೇಕು. ಎಲ್ಲ ಮಕ್ಕಳು ಶಾಲೆಗೆ ದಾಖಲಾಗಬೇಕು ದಾಖಲಾದ ಎಲ್ಲ ಮಕ್ಕಳು ಗುಣಾತ್ಮಕ ಶಿಕ್ಷಣ ಪಡೆಯಬೇಕೆಂಬ ಗುರಿ ಹೊಂದಬೇಕು. ಈ ನಿಟ್ಟಿನಲ್ಲಿ ಧಾರವಾಡದ ಅಪರ ಆಯುಕ್ತರು ನೀಡಿದ ಮಾರ್ಗದರ್ಶನದಲ್ಲಿ ಶಾಲೆಗಳಲ್ಲಿ ಅನುಷ್ಠನಗೊಳಿಸಬೇಕೆಂದು ತಿಳಿಸಿದರು.
ನಗರವಲಯದ ಕ್ಷೇತ್ರಶಿಕ್ಷಣಾಧಿಕಾರಿ ರಾಘವೇಂದ್ರ ಹೊಸೂರ ಮಾತನಾಡಿ, ಮಕ್ಕಳ ಗುಣಾತ್ಮಕ ಕಲಿಕೆಗೆ ಅಪರ ಆಯುಕ್ತರು ವಿಶೇಷ ಕಾಳಜಿ ವಹಿಸಿದ್ದು, ಪ್ರತಿಯೊಂದು ಶಾಲೆಯಲ್ಲಿ ಎಫ್‌ಎಲ್‌ಎನ್ ಹಾಗೂ ಎಲ್‌ಬಿಎ ಕುರಿತು ವಿಶೇಷ ಕಾಳಜಿ ವಹಿಸಬೇಕು. ನೋಡಲ್ ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿ ಪಡೆದು ಯಶಸ್ವಿ ಕಲಿಕೆ ಕಡೆ ಗಮನ ಕೊಡಬೇಕು. ಮುಂದಿನ ದಿನಗಳಲ್ಲಿ ನಗರ ವಲಯದಲ್ಲಿ ಎಲ್ಲ ಶಾಲೆಗಳು ಉತ್ತಮ ಫಲಿತಾಂಶ ತರುವಲ್ಲಿ ಪ್ರಯತ್ನಿಸಬೇಕೆಂದರು.
ನಂತರ ಮುಖ್ಯೊಪಾದ್ಯಾಯರು ಹಾಗೂ ಶಿಕ್ಷಕರಿಗೆ ಎಫ್‌ಎಲ್‌ಎನ್ ಹಾಗೂ ಎಲ್‌ಬಿಎ ಹಾಗೂ ಎಸ್‌ಎಸ್‌ಎಲ್‌ಸಿ ಫಲಿತಾಂಶ ಕುರಿತು ನೋಡಲ್ ಅಧಿಕಾರಿಗಳಿಂದ ತರಬೇತಿ ಹಮ್ಮಿಕೊಳ್ಳಲಾಯಿತು. ನೋಡಲ್ ಅಧಿಕಾರಿಗಳಾದ ಪ್ರಕಾಶ ನಾಲತವಾಡ, ಸುಜಾತಾ ಹಿರೇಮಠ ಹಾಗೂ ಸವಿತಾ ಗೋಡೇಕರ ತರಬೇತಿ ನೀಡಿದರು. ಕಾರ್ಯಾಗಾರದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಎಚ್ ಡಿ ಮಸೂತಿ, ಶಿಕ್ಷಕರ ಸಂಘದ ಅಧ್ಯಕ್ಷ ಸಯ್ಯದಜುಬೇರ ಕೆರೂರ, ದರಬಾರ ಪ್ರೌಡಶಾಲೆಯ ಮುಖ್ಯೋಪಾದ್ಯಯ ಗುಜರೆ, ಶಿಕ್ಷಣ ಸಂಯೋಜಕ ಎ ಕೆ ದಳವಾಯಿ, ಪಿ ಜಿ ಹಿರೇಮಠ, ಎಂ ಎಂ ಗುರಾಡಿ, ಎಸ್ ಕೆ ಬೊಮನಳ್ಳಿ ಸೇರಿದಂತೆ ಸಂಪನ್ಮೂಲ ವ್ಯಕ್ತಿಗಳು, ಮುಖ್ಯೋಪಾದ್ಯರು, ಶಿಕ್ಷಕರು ಪಾಲ್ಗೊಂಡಿದ್ದರು.

