Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ರೂ.೨ಕೋಟಿ ವೆಚ್ಚದ ಕಾಮಗಾರಿಗೆ ಶಾಸಕ ಮನಗೂಳಿ ಭೂಮಿಪೂಜೆ

ಬಡ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ: ಸ್ವಂತ ಸೂರಿನ ಕನಸು ನನಸು

ದೇವರಹಿಪ್ಪರಗಿ ವಿವಿಧೆಡೆ ಸ್ವಾತಂತ್ರೋತ್ಸವ ದಿನ ಆಚರಣೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»Uncategorized»ಕಾಖಂಡಕಿ & ಸುತ್ತಲಿನ ತಾಣಗಳ ಕುರಿತು ಸಂಶೋಧನೆ ಅಗತ್ಯ
Uncategorized

ಕಾಖಂಡಕಿ & ಸುತ್ತಲಿನ ತಾಣಗಳ ಕುರಿತು ಸಂಶೋಧನೆ ಅಗತ್ಯ

By No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಕಾಖಂಡಕಿಯಲ್ಲಿ ಶ್ರೀ ಹಣಮಂತ ದೇವರ ನೂತನ ದೇವಸ್ಥಾನದ ಕಟ್ಟಡ ನಿರ್ಮಾಣದ ಭೂಮಿ ಪೂಜೆ ನೆರವೇರಿಸಿದ ಸಚಿವ ಎಂ.ಬಿ.ಪಾಟೀಲ ಅಭಿಮತ

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಕಾಖಂಡಕಿ ಮತ್ತು ಸುತ್ತಮುತ್ತಲಿನ ತಾಣಗಳು ಐತಿಹಾಸಿಕ ಹಿನ್ನೆಲೆಯ ಪುಣ್ಯಭೂಮಿಗಳಾಗಿದ್ದು, ಈ ಕುರಿತು ಹೆಚ್ಚಿನ ಸಂಶೋಧನೆ ನಡೆಸುವುದು ಅಗತ್ಯವಾಗಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ರವಿವಾರ ಬಬಲೇಶ್ವರ ತಾಲೂಕಿನ ಕಾಖಂಡಕಿಯಲ್ಲಿ ಶ್ರೀ ಹಣಮಂತ ದೇವರ ನೂತನ ದೇವಸ್ಥಾನದ ಕಟ್ಟಡ ನಿರ್ಮಾಣದ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಹಣಮಂತ ದೇವರ ನೂತನ ದೇಗುಲ ನಿರ್ಮಾಣಕ್ಕೆ ಈಗಾಗಲೇ ರೂ. 50 ಲಕ್ಷ ವೈಯಕ್ತಿಕ ದೇಣಿಗೆ ನೀಡಲಾಗಿದ್ದು, ಮುಂಬರುವ ದಿನಗಳಲ್ಲಿ ಉಳಿದ ರೂ 50 ಲಕ್ಷ ನೆರವು ನೀಡಲಾಗುವುದು. ಒಟ್ಟಾರೆಯಾಗಿ ರೂ. 1 ಕೋಟಿ ದೇಣಿಗೆಯನ್ನು ಈ ಪವಿತ್ರ ಕಾರ್ಯಕ್ಕೆ ಸಮರ್ಪಿಸುತ್ತಿರುವುದು ತೃಪ್ತಿ ತಂದಿದೆ. ಭಕ್ತಿ, ಶ್ರದ್ಧೆ, ಸಂಸ್ಕೃತಿ ಹಾಗೂ ಪರಂಪರೆಯ ಪ್ರತೀಕವಾಗಿರುವ ಈ ಪವಿತ್ರ ದೇವಾಲಯದ ನಿರ್ಮಾಣ ಕಾಮಗಾರಿಯು ಗುಣಮಟ್ಟದಿಂದ, ಶೀಘ್ರವಾಗಿ ಪೂರ್ಣಗೊಂಡು ಭಕ್ತಾದಿಗಳ ಸೇವೆಗೆ ಸಮರ್ಪಣೆಯಾಗಲಿ ಎಂದು ಹೇಳಿದರು.
ಗ್ರಾಮದ ಶಿವಯೋಗಿ ಸ್ವಾಮೀಜಿ ಹಾಗೂ ಯೋಗೇಶ್ವರಿ ಅಮ್ಮನವರು ಮಾತನಾಡಿ, ಸಚಿವರ ಸಮಗ್ರ ಅಭಿವೃದ್ಧಿಯ ಕಾರ್ಯ ಹಾಗೂ ಜನಪರ ನಿಲುವನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಶ್ರೀ ನಿಜಲಿಂಗಯ್ಯ ಶಾಸ್ತ್ರಿ, ಮುಖಂಡರಾದ ನಿಂಗನಗೌಡ ಪಾಟೀಲ, ಉಮೇಶ ವಂದಾಲ, ರಾಜೇಂದ್ರಗೌಡ ಪಾಟೀಲ, ವಿ. ಎಸ್. ಪಾಟೀಲ, ರಾಮನಗೌಡ ಪಾಟೀಲ, ಅಪ್ಪುಗೌಡ ಪಾಟೀಲ, ವಿಠ್ಠಲ ಬಾಬಾನಗರ, ವಿಜಯಕುಮಾರ ಮೈಲಾರ, ಬಾಬುಗೌಡ ಪಾಟೀಲ, ಅಪ್ಪುಗೌಡ ಪಾಟೀಲ, ಮಹಾದೇವ ತಳವಾರ, ವಿದ್ಯಾರಾಣಿ ತುಂಗಳ, ಭುವನೇಶ್ವರಿ ಮುಂತಾದವರು ಉಪಸ್ಥಿತರಿದ್ದರು.
ಪರಮಹಂಸ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಧಾರವಾಡಮಠ ಸ್ವಾಗತಿಸಿದರು. ಅಶೋಕ ಹಂಚಲಿ ನಿರೂಪಿಸಿದರು.

ಗುರುವಂದನೆ ಸಲ್ಲಿಸಿದ ಸಚಿವರು

ಇದೇ ವೇಳೆ ಸಚಿವರು ಶ್ರೀ ಶಿವಯೋಗೀಶ್ವರ ಮಹಾಸ್ವಾಮಿಗಳು, ಹಿಮಾಲಯದಿಂದ ಆಗಮಿಸಿದ್ದ ಶ್ರೀ ಸ್ವಾಮಿ ಹರಿಓಂ ಆನಂದ ಭಾರತಿ ಸ್ವಾಮಿಜೀ, ಶ್ರೀ ಶುಭಮುನಿ ರಮೇಶ ಸ್ವಾಮಿಜೀ, ಶ್ರೀ ಸ್ವಾಮಿ ಶಕ್ತಿಜೀ ಹಾಗೂ ಶ್ರೀ ಸ್ವಾಮಿ ಗುಣಾನಂದ ಸರಸ್ವತಿ ಸ್ವಾಮಿಜಿ ಅವರಿಗೆ ಗುರುವಂದನೆ ಸಲ್ಲಿಸಿ, ಅವರ ಆಶೀರ್ವಾದ ಪಡೆದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ರೂ.೨ಕೋಟಿ ವೆಚ್ಚದ ಕಾಮಗಾರಿಗೆ ಶಾಸಕ ಮನಗೂಳಿ ಭೂಮಿಪೂಜೆ

ಬಡ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ: ಸ್ವಂತ ಸೂರಿನ ಕನಸು ನನಸು

ದೇವರಹಿಪ್ಪರಗಿ ವಿವಿಧೆಡೆ ಸ್ವಾತಂತ್ರೋತ್ಸವ ದಿನ ಆಚರಣೆ

ಸಂಕಷ್ಟದಲ್ಲಿರುವ ನಾಡಿನ ರೈತರ ಪರ ನಮ್ಮ ಸರಕಾರವಿದೆ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ರೂ.೨ಕೋಟಿ ವೆಚ್ಚದ ಕಾಮಗಾರಿಗೆ ಶಾಸಕ ಮನಗೂಳಿ ಭೂಮಿಪೂಜೆ
    In (ರಾಜ್ಯ ) ಜಿಲ್ಲೆ
  • ಬಡ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ: ಸ್ವಂತ ಸೂರಿನ ಕನಸು ನನಸು
    In (ರಾಜ್ಯ ) ಜಿಲ್ಲೆ
  • ದೇವರಹಿಪ್ಪರಗಿ ವಿವಿಧೆಡೆ ಸ್ವಾತಂತ್ರೋತ್ಸವ ದಿನ ಆಚರಣೆ
    In (ರಾಜ್ಯ ) ಜಿಲ್ಲೆ
  • ಸಂಕಷ್ಟದಲ್ಲಿರುವ ನಾಡಿನ ರೈತರ ಪರ ನಮ್ಮ ಸರಕಾರವಿದೆ
    In (ರಾಜ್ಯ ) ಜಿಲ್ಲೆ
  • ತಾರಕ, ಕಬಿನಿ ನಾಲೆಗಳಿಗೆ ಕಲುಷಿತ ನೀರು ಸೇರ್ಪಡೆ
    In (ರಾಜ್ಯ ) ಜಿಲ್ಲೆ
  • ಮಾದಕ ವ್ಯಸನಗಳ ಚಟ, ಅವಗುಣಗಳಿಗೆ ವಶವಾಗದಿರಿ
    In (ರಾಜ್ಯ ) ಜಿಲ್ಲೆ
  • ಆಲಮಟ್ಟಿ ಡ್ಯಾಂ ಬಹುತೇಕ ಭರ್ತಿ: ಬಾಗಿನ ಅರ್ಪಣೆಗೆ ಸಿಎಂ ಗೆ ಆಗ್ರಹ
    In (ರಾಜ್ಯ ) ಜಿಲ್ಲೆ
  • ಸ್ವಾತಂತ್ರ‍್ಯದ ಮೌಲ್ಯ ಉಳಿಸುವ ಹೊಣೆ ಪ್ರತಿ ನಾಗರಿಕನದ್ದು
    In (ರಾಜ್ಯ ) ಜಿಲ್ಲೆ
  • ಅರಳದಿನ್ನಿ ಸರಕಾರಿ ಶಾಲೆಯಲ್ಲಿ ಸಂಭ್ರಮದ ಸ್ವಾತಂತ್ರ‍್ಯೋತ್ಸವ
    In (ರಾಜ್ಯ ) ಜಿಲ್ಲೆ
  • ರಕ್ತದಾನ ಮತ್ತೊಂದು ಜೀವಕ್ಕೆ ಜೀವದಾನ :ಚವಲರ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.