ಸಮೃದ್ಧಿ ಸಹಕಾರ ಸಂಘದಲ್ಲಿ ಅಧ್ಯಕ್ಷೆ ಸಂಗೀತಾ ನಾಯಿಕ್ ರಿಂದ ಧ್ವಜಾರೋಹಣ
ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಪಟ್ಟಣದ ಶಾಲಾ, ಕಾಲೇಜು, ಸರ್ಕಾರಿ ಕಚೇರಿ, ಬ್ಯಾಂಕ್, ಸಹಕಾರಿ ಸಂಘಗಳು ಸೇರಿದಂತೆ ತಾಲ್ಲೂಕಿನ ವಿವಿಧೆಡೆಯಲ್ಲಿ ಧ್ವಜಾರೋಹಣ ನೆರವೇರಿಸಿ ೮೦ನೇ ಸ್ವಾತಂತ್ರೋತ್ಸವ ದಿನ ಆಚರಿಸಲಾಯಿತು.
ಸಮೃದ್ಧಿ ಸಹಕಾರ ಸಂಘ
ಧ್ವಜಾರೋಹಣವನ್ನು ಅಧ್ಯಕ್ಷೆ ಸಂಗೀತಾ ನಾಯಿಕ್ ಹಾಗೂ ಉಪಾಧ್ಯಕ್ಷ ರಿಯಾಜ್ ತಾಂಬೋಳಿ ನೆರವೇರಿಸಿದರು.
ಗಣ್ಯರಾದ ಡಾ.ಆರ್.ಆರ್.ನಾಯಿಕ್, ನಿರ್ದೇಶಕರಾದ ಪಿ.ಜಿ.ಹಿರೇಮಠ, ಬಿ.ಎನ್.ಬಬಲೇಶ್ವರ, ವೆಂಕಟೇಶ ಕುಲಕರ್ಣಿ, ಎ.ಕೆ.ಹಿರೇಮಠ, ಕೆ.ಎಸ್.ಕೋರಿ, ಗುರು ಕರಭಂಟನಾಳ, ಮಂಜುನಾಥ ಒಂಟೆತ್ತಿನ, ಉಮೇಶ ಹಳಪಾಣಿ, ಸುಭಾಸ್ ಜಾಧವ, ಅಯ್ಯನಗೌಡ ಬಿರಾದಾರ(ಹರನಾಳ) ಹಾಗೂ ಸಿಬ್ಬಂದಿ ಇದ್ದರು.
ತಾಲ್ಲೂಕು ನಿವೃತ್ತ ನೌಕರರ ಸಂಘ
೮೦ನೇ ಸ್ವಾತಂತ್ರ‍್ಯ ಧ್ವಜಾರೋಹಣವನ್ನು ಸಂಘದ ಅಧ್ಯಕ್ಷ ಸಿ.ಕೆ.ಕುದರಿ ನೆರವೇರಿಸಿದರು.
ಎಂ.ಆರ್.ಶಿರಸಂಗಿಮಠ, ರತ್ನಾಕರ, ಕೆ.ಸಿ.ಮಠ, ಎಸ್.ವಿ.ಆಲಾಳಮಠ, ಪಿ.ಎಸ್.ಮಿಂಚನಾಳ, ಶಾಂತಪ್ಪ ಪಡನೂರ, ಎಂ.ಎಂ.ಕಠಾರಿ, ಪಿ.ಜಿ.ಹಿರೇಮಠ, ಬಿ.ಎನ್.ಬಬಲೇಶ್ವರ, ಜಿ.ಎ.ಪಾಟೀಲ, ಎಸ್.ಜಿ.ತಾವರಖೇಡ, ಪಿ.ಎಚ್.ಪಟೇಲ, ಮಡ್ಡೇಪ್ಪಗೋಳ. ಕೆ.ಎನ್.ಮಣ್ಣೂರ, ಬಿ.ಜಿ.ಪಾಟೀಲ ಸಹಿತ ಇತರರು ಇದ್ದರು.
ಯಾಳವಾರ ಶ್ರೀ ಸೋಮೇಶ್ವರ ಸಂಯುಕ್ತ ಪದವಿಪೂರ್ವ ಕಾಲೇಜ
ಸಂಸ್ಥೆಯ ಅಧ್ಯಕ್ಷ ರಾಜುಗೌಡ ನಾಡಗೌಡ್ರ ಧ್ವಜಾರೋಹಣ ನೆರವೇರಿಸಿದರು.
ಸಂಸ್ಥೆಯ ಬಿ.ಆರ್.ಪಾಟೀಲ, ಎಸ್.ಎಸ್.ಥಬ್ಬಣ್ಣವರ, ಆರ್.ಎಸ್.ಪಾಟೀಲ, ಎ.ಡಿ.ನಾಗರಾಳ, ನಿವೃತ್ತಸೈನಿಕ ಬಸವರಾಜ ಶಾಬಾದಿ, ಎಚ್.ಪಿ.ಕರಡಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.
ಮುಳಸಾವಳಗಿ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನ
ಇಲ್ಲಿ ಮಧ್ಯರಾತ್ರಿ ೧೨ಗ೦ಟೆಗೆ ೭೯ನೇ ಸ್ವಾತಂತ್ರ‍್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ನೆರವೇರಿಸಲಾಯಿತು.
ಶಿಕ್ಷಕ ಜಿ.ಪಿ.ಬಿರಾದಾರ, ಸಂಗನಗೌಡ ಬಿರಾದಾರ, ಹಣಮಂತ ಹಿರೂರ, ವಿರುಪಾಕ್ಷಿ ರೋಡಗಿ, ಶ್ರೀಶೈಲ ಹದರಿ, ಸಾಹೇಬಗೌಡ ಬಿರಾದಾರ, ಉಮೇಶ ರೋಡಗಿ, ನಾಗರಾಜ ಸರಬಡಗಿ, ಪ್ರದೀಪ ಬಿರಾದಾರ, ಸಂತೋಷ ಬಿರಾದಾರ, ನವೀನ ಉಕುಮನಾಳ, ಪ್ರವೀಣ ಅಂಕಲಗಿ ಇದ್ದರು.
ರಾಣಿ ಚೆನ್ನಮ್ಮ ಸಹಕಾರಿ ಸಂಘ
ಪಟ್ಟಣದ ರಾಣಿ ಚೆನ್ನಮ್ಮ ಸಹಕಾರಿ ಸಂಘದಲ್ಲಿ ಚನ್ನವೀರ ಕುದರಿ ಧ್ವಜಾರೋಹಣ ನೆರವೇರಿಸಿದರು.
ಕಾಸುಗೌಡ ಬಿರಾದಾರ(ಜಲಕಾಂತಿ), ಕಲ್ಲನಗೌಡ ಬಿರಾದಾರ, ವಿನೋದ ಪಾಟೀಲ, ಮಲ್ಲಿಕಾರ್ಜುನ ಒಂಟೆತ್ತಿನ, ಶಾಂತಗೌಡ ಬಿರಾದಾರ, ಗುಂಡು ದೇವಣಗಾಂವ, ಮಡು ಬಿರಾದಾರ, ಕಾಶೀನಾಥ ರಾಮಗೊಂಡ ರವಿ ಸಿಂಧೂರ, ನಿಂಗನಗೌಡ ಜಲಕಾಂತಿ, ಯಾಳಗಿ, ನವೀನ ಕೋಟಿನ್ ಇದ್ದರು.

