ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಇಟ್ಟಂಗಿಹಾಳ ರಸ್ತೆಯ ವೈಭವ ನಗರ (ಫೇಜ್ ೨) ಕೆ.ಎಚ್.ಬಿ. ಕಾಲನಿಗೆ ಮೂಲ ಸೌಕರ್ಯಗಳನ್ನು ಒದಗಿಸಲು ಆಗ್ರಹಿಸಿ ಅಲ್ಲಿನ ನಿವಾಸಿಗಳು ಸೋಮವಾರ ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ್ ಮೆಕ್ಕಳಕಿ ಅವರನ್ನು ಕಂಡು ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಬಡಾವಣೆ ನಿವಾಸಿಗಳು, ವೈಭವ ನಗರ (ಫೇಜ್ ೨)ದಲ್ಲಿ ಬೀದಿ ದೀಪಗಳಲ್ಲದೆ ಅಲ್ಲಲ್ಲಿ ಹೈಮಾಸ್ಕ್ ದೀಪಗಳನ್ನು ಅಳವಡಿಸಬೇಕು. ನಗರ ಸಾರಿಗೆ ಬಸ್ ನಿಲ್ದಾಣ ಮತ್ತು ಮಕ್ಕಳಿಗೆ ಆಟದ ಮೈದಾನ ನಿರ್ಮಿಸಬೇಕು. ವಿದ್ಯುತ್ ಪರಿವರ್ತಕಗಳನ್ನು ಚಾರ್ಜ್ ಮಾಡಿಸುವುದು ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸಿಕೊಡುವಂತೆ ಒತ್ತಾಯಿಸಿದರು.
ಈ ವೇಳೆ ಉದ್ಯಮಿ ಚಂದ್ರಕಾಂತ ಮ ಬಿರಾದಾರ, ಲವ ಎಂ ಚವಾಣ್, ಅರವಿಂದ ಲಂಬು, ಬಸವರಾಜ ಶಾರದಳ್ಳಿ, ಶ್ರೀಮಂತ ಪತ್ತಾರ, ಎಂ ಬಿ ಹತ್ತಿ, ಅಶೋಕ ಮಂಗಸೂಳಿ ಸೇರಿದಂತೆ ಇನ್ನಿತರರಿದ್ದರು.

