ಉದಯರಶ್ಮಿ ದಿನಪತ್ರಿಕೆ
ಅಥಣಿ: ಶಿನಾಳ ಅಥಣಿ ಕೇಂದ್ರೀಯ ವಿದ್ಯಾಲಯದಲ್ಲಿ 80ನೇ ಸ್ವಾತಂತ್ರ್ಯೋತ್ಸವ ಶನಿವಾರ ಶಿಸ್ತು ಮತ್ತು ಸಂಯಮ ಹಾಗೂ ದೇಶ ಭಕ್ತಿಯಿಂದ ನೆರವೇರಿಸಲಾಯಿತು.
ಈ ವೇಳೆ ವಿದ್ಯಾಲಯದ ಪ್ರಭಾರಿ ಪ್ರಾಚಾರ್ಯ ಬಸವರಾಜ ಕುಂಚನೂರ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ ಸ್ವಾತಂತ್ರ್ಯೋತ್ಸವವು ಕೇವಲ ಆಚರಣೆಯ ದಿನವಲ್ಲ ದೇಶಭಕ್ತಿ, ಶಿಸ್ತು, ಜವಾಬ್ದಾರಿ, ಏಕತೆ ಹಾಗೂ ರಾಷ್ಟ್ರೀಯ ಕರ್ತವ್ಯದ ಮೌಲ್ಯಗಳನ್ನು ನೆನಪಿಸುವ ದಿನವಾಗಿದೆ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗದಿಂದ ನಮಗೆ ದೊರೆತ ಸ್ವಾತಂತ್ರ್ಯವನ್ನು ಯುವ ಜನರು ಜವಾಬ್ದಾರಿಯುತ ನಾಗರಿಕರಾಗಿ ಉಳಿಸಿ, ಬಲಿಷ್ಠ ಭಾರತದ ನಿರ್ಮಾಣದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಇನ್ನು ವಿವಿಧ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿದ್ದು ವಿದ್ಯಾರ್ಥಿಗಳು ದೇಶಭಕ್ತಿ ಗೀತೆ ಹಾಡು ಕನ್ನಡ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಸ್ವಾತಂತ್ರ್ಯೋತ್ಸವದ ಮಹತ್ವ ಕುರಿತು ಭಾಷಣಗಳು ನಡೆದವು. ವಿದ್ಯಾರ್ಥಿಗಳ ಸಮೂಹ ಗೀತೆ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತ್ತು ಹಾಗೂ
ಬಾಲವಾಟಿಕಾ ವಿದ್ಯಾರ್ಥಿಗಳ ಉತ್ಸಾಹಭರಿತ ಸಮೂಹ ನೃತ್ಯ ಮತ್ತು ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ಪ್ರದರ್ಶಿಸಿದ ಎರಡು ಸಮೂಹ ನೃತ್ಯಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ಸ್ವಾತಂತ್ರ್ಯ ಹೋರಾಟಗಾರರ ಪಾತ್ರಾಭಿನಯದಲ್ಲಿ 8 ವಿದ್ಯಾರ್ಥಿಗಳು ಮಹಾತ್ಮಾ ಗಾಂಧಿ, ಡಾ. ಬಿ,ಆರ್, ಅಂಬೇಡ್ಕರ್ ಭಗತ್ ಸಿಂಗ್ ಸೇರಿದಂತೆ ವಿವಿಧ ಮಹನೀಯರ ವೇಷ ಧರಿಸಿ ಅವರ ತ್ಯಾಗದ ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ಕುಂಬಾರ ಸರ್, ಪ್ರವೀಣ ಸಿಂದೆ,ವಿಕಾಸ ಸಿಂಗ್, ಬಿ ಆರ್ ಕಾಂಬಳೆ, ಜಗದೀಶ ಪಾಟೀಲ, ಕವಿತಾ ಕಾಂಬಳೆ ಲಕ್ಷ್ಮಿ ನಾವಿ, ತಿರುಮಲಾ ಯರಡೋಣಿ, ವಾಣಿಶ್ರೀ ಸುವರ್ಣ, ರಾಜಶ್ರೀ ವಸ್ತ್ರದ, ಜಯಶ್ರೀ ಅವಟಿ, ಸೇರಿದಂತೆ ವಿದ್ಯಾಲಯದ ಸಿಬ್ಬಂದಿ ವರ್ಗ ವಿದ್ಯಾರ್ಥಿಗಳು ಹಾಗೂ ಪಾಲಕರು ಭಾಗಿಯಾಗಿದ್ದರು

