ಉದಯರಶ್ಮಿ ದಿನಪತ್ರಿಕೆ
ಇಂಡಿ: ಶನಿವಾರ ನಗರದ ನ್ಯಾಯಾಲಯದಲ್ಲಿ ಉಚ್ಚ ನ್ಯಾಯಾಲಯದ ನಿರ್ದೇಶನದಂತೆ ಚೆಕ್ ಬೌನ್ಸ ಪ್ರಕರಣಗಳ ವಿಶೇಷ ಅದಾಲತ್ ನಡೆಸಲಾಯಿತು.
ಸದರಿ ಅದಾಲತದಲ್ಲಿ ೬೫ ಪ್ರಕರಣಗಳಲ್ಲಿ ರಾಜಿ ಸಂಧಾನ ನಡೆಸಿ ಸುಮಾರು ೫೦ ಲಕ್ಷಕ್ಕೂ ಅಧಿಕ ಮೊತ್ತ ಅರ್ಜಿದಾರ ಪಕ್ಷಗಾರರಿಗೆ ಜಮಾ ಮಾಡಲಾಯಿತು.
ದಿವಾಣಿ ನ್ಯಾಯಾಧೀಶ ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಹಾಗೂ ಸದಸ್ಯ ಕಾರ್ಯದರ್ಶಿ ಕಾನೂನು ಸೇವೆಗಳ ಸಮಿತಿ ಸುನಿಲಕುಮಾರ ಎಂ.ಎಸ್, ನ್ಯಾಯವಾದಿಗಳಾದ ಪಿ.ಬಿ.ಶಿರಕನಹಳ್ಳಿ, ಶಾಂತು ನಿಂಬರಗಿಮಠ, ಎಸ್.ಬಿ. ನಿಂಬರಗಿಮಠ, ಎಂ.ಎಸ್.ಪಾಟೀಲ, ಆರ್.ಆರ್.ಕೋಳಿ, ಡಿ.ಎಸ್. ಹಾಲಕವಾಡಿ ಆರ್.ಎಸ್.ತೆಗ್ಗೆಳ್ಳಿ ಎಸ್.ಟಿ.ಗೂಗಿಹಾಳ ಎಸ್.ಕೆ ಬಂಗಾರತಳ ಮತ್ತು ಮಂಜುನಾಥ ನಾವಿ ಹಾಗೂ ನ್ಯಾಯಾಲಯದ ಸಿಬ್ಬಂದಿ ಬಿ.ಎಂ.ಲಿಂಗಸುರ, ಮಹೇಶ ಕೋತ, ಚಂದ್ರಕಾಂತ ಲಾಳಸಂಗಿ, ಸಿದ್ದು ಹಾವಳಗಿ ಮತ್ತಿತರಿದ್ದರು.

