ಯಡ್ರಾಮಿ ವಿರಕ್ತಮಠದ ಲಿಂ. ಸಿದ್ಧರಾಮ ಮಹಾಸ್ವಾಮಿಗಳ 5ನೇ ಪುಣ್ಯಾರಾಧನೆ ನಿಮಿತ್ತ ಶ್ರೀ ಸಿದ್ಧಲಿಂಗ ಸ್ವಾಮಿಗಳ ನೇತೃತ್ವದಲ್ಲಿ 11ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು
ಉದಯರಶ್ಮಿ ದಿನಪತ್ರಿಕೆ
ಯಡ್ರಾಮಿ: ಪಟ್ಟಣದ ಶ್ರೀ ಮುರಘೇಂದ್ರ ಶಿವಯೋಗಿ ವಿರಕ್ತ ಮಠದ ಲಿಂ. ಪೂಜ್ಯ ಶ್ರೀ ಸಿದ್ದರಾಮ ಮಹಾಸ್ವಾಮಿಗಳ ಐದನೇ ವರ್ಷದ ಪುಣ್ಯಾರಾಧನೆ ನಿಮಿತ್ಯವಾಗಿ ಶ್ರೀ ಮಠದ ಪ್ರಸ್ತುತ ಪೀಠಾಧಿಪತಿಗಳಾದ ಪರಮ ಪೂಜ್ಯ ಸಿದ್ಧಲಿಂಗ ಸ್ವಾಮೀಜಿಗಳ ನೇತೃತ್ವದಲ್ಲಿ ಇಂದು ಮಂಗಳವಾರ ಪುರಾಣ ಕಾರ್ಯಕ್ರಮ ಪ್ರಾರಂಭವಾಗುವುದು.
ಜು.21ರಿಂದ ಆ.1ರವರೆಗೆ 11ದಿನಗಳ ಪರ್ಯಂತರ ಶರಣ ಶ್ರೀ ಗೋಲಗೇರಿ ಗೊಲ್ಲಾಳೇಶ್ವರರ ಪುರಾಣವನ್ನು ಸಿದ್ಧಾಪುರ ಹಿರೇಮಠದ ವೇ.ಮೂ. ಶಿವಲಿಂಗಯ್ಯ ಶಾಸ್ತ್ರಿಗಳು ನಡೆಸಿಕೊಡುವರು. ವೇ.ಮೂ. ಶಿವಲಿಂಗಯ್ಯಸ್ವಾಮೀಜಿ ಹಾಗೂ ವೇ.ಮೂ.ಸಿದ್ದಲಿಂಗೇಶ್ವರ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಮಂಗಳವಾರ ಸಾಯಂಕಾಲ ಪುರಾಣ ಕಾರ್ಯಕ್ರಮದಲ್ಲಿ ಮಾಗಣಗೇರಿ ಬ್ರಹನ್ಮಠದ ಪೂಜ್ಯ ಡಾ. ವಿಶ್ವಾರಾಧ್ಯ ಶಿವಾಚಾರ್ಯರು ಸಾನಿಧ್ಯ ವಹಿಸುವರು. ಸೊನ್ನ ವಿರಕ್ತ ಮಠದ ಪೂಜ್ಯ ಡಾ. ಶಿವಾನಂದ ಮಹಾಸ್ವಾಮಿಗಳು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. 11ದಿನಗಳಲ್ಲಿ
ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗುವವು. ನಾಡಿನ ವಿವಿಧ ಹರ, ಗುರು, ಚರ ಮೂರ್ತಿಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರು ಭಾಗವಹಿಸಲಿದ್ದಾರೆ. ಪುಣ್ಯಾರಾಧನೆ ನಿಮಿತ್ತ ಆರೋಗ್ಯ ತಪಾಸಣೆ ಶಿಬಿರವೂ ಹಮ್ಮಿಕೊಳ್ಳಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಶ್ರೀ ಮಠದ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಶ್ರೀಮಠದ ಪುರಾಣ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಸಂದರ್ಭದಲ್ಲಿ ಮುಖಂಡರಾದ ಎನ್.ಆರ್.ಪಾಟೀಲ, ಸಿದ್ಧನಗೌಡ ಮಾಲೀಪಾಟೀಲ,ಮಹಾಲಿಂಗಪ್ಪಗೌಡ ಬಂಡೆಪ್ಪಗೋಳ, ಗುರುಬಸಪ್ಪ ಸಾಹು ಸಣ್ಣಳ್ಳಿ, ಪ್ರಕಾಶ ಸಾಹು ಬೆಲ್ಲದ, ಚನ್ನವೀರಪ್ಪಗೌಡ ಬಂಡೆಪ್ಫಗೋಳ, ರಾಜಶೇಖರ ಸಾಹು ಡಗ್ಗಾ, ನಿಂಗನಗೌಡ ಜವಳಗಿ, ಲಕ್ಷ್ಮೀಕಾಂತ ಸೋನಾರ, ಶ್ರೀಶೈಲ ಸಾಹು ತಾಳಿಕೋಟಿ, ಬಸಯ್ಯಸ್ವಾಮಿ ಹೊಸಮಠ, ಅಪ್ಪುಗೌಡ ಮಾಲಿಪಾಟೀಲ, ಬಿ .ಬಿ. ವಾರದ, ಮಲ್ಹಾರರಾವ ಕುಲಕರ್ಣಿ, ಬಸವರಾಜ ಹೂಗಾರ, ಆನಂದ ಯತ್ನಾಳ, ರಾಜುಗೌಡ ಪಾಟೀಲ, ಚನ್ನವೀರ ಸಾಹು ತಾಳಿಕೋಟಿ, ಸಂಜೀವರಾವ ಕುಲಕರ್ಣಿ, ಅಣ್ಣಯ್ಯಸ್ವಾಮಿ ಹಿರೇಮಠ, ಬಸವರಾಜ ಉಪ್ಪಾರ, ನಾಗೇಂದ್ರ ಪಾಟೀಲ, ಸತೀಶ ಬಂಡೆಪ್ಪಗೋಳ, ಸಿದ್ದು ಹೂಗಾರ ಹಾಗೂ ಪಟ್ಟಣದ ಇತರರಿದ್ದರು.


