ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಬಣಜಿಗ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ಪಟ್ಟಣದ ಬಣಜಿಗ ಸಮಾಜದ ಮುಖಂಡರು ಸೋಮವಾರ ಮಾನ್ಯ ತಹಸೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಬಣಜಿಗ ಸಮುದಾಯವು ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿದ್ದು, ಸಮುದಾಯದ ಯುವಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಸೂಕ್ತ ಅವಕಾಶಗಳು ಸಿಗುತ್ತಿಲ್ಲ. ಹೀಗಾಗಿ ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡು ಬಣಜಿಗ ಸಮಾಜವನ್ನು 2ಎ ಮೀಸಲಾತಿ ಪಟ್ಟಿಗೆ ಸೇರಿಸಬೇಕು ಎಂದು ಈ ಸಂದರ್ಭದಲ್ಲಿ ಮುಖಂಡರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಆಲಮೇಲ ಬಣಜಿಗ ಸಮಾಜದ ಅಧ್ಯಕ್ಷರಾದ ಸಿದ್ದಲಿಂಗ ಸುಬೇಧಾರ, ಪ್ರಧಾನ ಕಾರ್ಯದರ್ಶಿ ರವೀಂದ್ರ ವಾರದ, ಕೋಶಾಧಿಕಾರಿ ಶಿವಾನಂದ ಮಾರ್ಸನಳ್ಳಿ ಹಾಗೂ ಯುವ ಘಟಕದ ಅಧ್ಯಕ್ಷ ವಿಶ್ವ ಕೋರಳ್ಳಿ ಉಪಸ್ಥಿತರಿದ್ದರು.
ಸಮಾಜದ ಪ್ರಮುಖ ಮುಖಂಡರಾದ ಡಾ. ಪ್ರಮೋದ್ ಮಹಾಜನ, ಗೊಲ್ಲಾಳ ಉಪ್ಪಿನ, ಮಲ್ಲು ಧನಶ್ರೀ, ಮಲ್ಲು ಅಚಲೇರಿ, ಬಾಬು ಜಾನಾ, ಶರಣು ಶ್ರೀಗಿರಿ, ಆನಂದ ಲಾಳಸಂಗಿ, ಸಂದೀಪ್ ಸೊನ್ನದ, ಈಸಪ್ಪ ಮಹಾಜನ, ಅಮರೇಶ್ ಸಾಲಕ್ಕಿ, ಈಸಪ್ಪ ತೆಲ್ಲೂರ, ಈರಣ್ಣ ತೆಲ್ಲೂರ, ಪ್ರಕಾಶ್ ಜಂಗಮಶೆಟ್ಟಿ ಸೇರಿದಂತೆ ಸಮುದಾಯದ ನೂರಾರು ಹಿರಿಯರು ಹಾಗೂ ಯುವಕರು ಭಾಗವಹಿಸಿದ್ದರು.

