ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಪ್ರತಿಯೊಬ್ಬರು ಪರಿಸರ ರಕ್ಷಣೆಗೆ ಮುಂದಾಗಬೇಕು, ಸಸಿಗಳನ್ನು ನೆಟ್ಟು ಪೊಷಿಸಬೇಕು ಎಂದು ಹುಲ್ಯಾಳ ಗುರುದೇವಾಶ್ರಮದ ಹರ್ಷಾನಂದ ಶ್ರೀಗಳು ಹೇಳಿದರು.
ತಾಲೂಕಿನ ಹುಲ್ಯಾಳ ಗ್ರಾಮದ ಶಂಭುಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ತಾಲುಕು ಛಾಯಾ ಚಿತ್ರಗ್ರಾಹಕರ ಸಂಘ, ಕೊಣ್ಣೂರು ವಲಯದ ವತಿಯಿಂದ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ಪರಿಸರಕ್ಕೆ ಹಾನಿ ಮಾಡದಂತೆ ಪ್ರತಿಯೊಬ್ಬರು ನಡೆದುಕೊಳ್ಳಬೇಕು ಎಂದು ತಿಳಿಸಿದರು. ಛಾಯಾಚಿತ್ರಕಾರರ ಕಷ್ಟಕ್ಕೆ ಸಮಾಜ ಸಹಕಾರಿಯಾಗಿ ನಿಲ್ಲಬೇಕು ಎಂದು ತಿಳಿಸಿದರು.
ನಿವೃತ್ತ ತಹಸೀಲ್ದಾರ ಬಿ.ಎಸ್. ಗೋಠೆ, ನಿವೃತ್ತ ಶಿಕ್ಷಕ ಗುರುನಾಥ ಸುತಾರ, ನಿವೃತ್ತ ಶಿಕ್ಷಕ ವೈ.ಎಚ್.ಕಳ್ಳಿಮನಿ, ನ್ಯಾಯವಾದಿ ಶ್ರೀಮಂತಪ್ಪ ಝುಲಪಿ, ಪಿಡಿಓ ಸುರೇಶ ಕಡಪಟ್ಟಿ ಮಾತನಾಡಿದರು.
ಸಂಘದ ಅಧ್ಯಕ್ಷ ಹಾಸೀಮ ಜಮಖಂಡಿ ಸ್ವಾಗತಿಸಿ ಮಾತನಾಡಿದರು.
ಅಶೋಕ ಜೋಷಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಾಲೆಯ ಮುಖ್ಯೋಪಾಧ್ಯಾಯೆ ಎಸ್.ಎಂ. ಆನಿ, ರೈತಸಂಘದ ಅಧ್ಯಕ್ಷ ಶ್ರೀಶೈಲ ಭೂಮಾರ, ಅರಣ್ಯ ಅಧಿಕಾರಿ ಎ.ಐ,ಕುಂಬಾರ, ತೊದಬಲಬಾಗಿ ಗ್ರಾಮದ ಪರಿಸರ ಪ್ರೇಮಿ ಶ್ರೀಕಾಂತ ಬಡಿಗೇರ, ಸಂಘದ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.
ಶಿಕ್ಷಕ ಪ್ರಕಾಶ ನಂದೆಪ್ಪನವರ ಕಾರ್ಯಕ್ರಮ ನಿರೂಪಿಸಿದರು. ಎಸ್‌ಎಸ್‌ಎಲ್‌ಸಿ ಪರಿಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದ ಸನಾ ಮಾಲದಾರ, ಭಾಗ್ಯಶ್ರೀ ಅಮ್ಮಲಝರಿ, ಗಣೇಶ ಕದಮ ಅವರನ್ನು ಸನ್ಮಾನಿಸಲಾಯಿತು.
ಸಂಜಯ ಮೈತ್ರಿ ವಂದಿಸಿದರು.

