ವಿಜಯಪುರದಲ್ಲಿ ಪರಿಸರ ಪ್ರೇಮಿ ದಿ.ಉದಯ ನಾವಲಗಿ ಸ್ಮರಣೆ ಮತ್ತು ಪರಿಸರ ಜಾಗೃತಿ ಕಾರ್ಯಕ್ರಮ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪರಿಸರ ರಕ್ಷಣೆಯನ್ನೇ ಉಸಿರಾಗಿಸಿಕೊಂಡಿದ್ದ ಪರಿಸರ ಪ್ರೇಮಿ ದಿ.ಉದಯ ನಾವಲಗಿ ಅವರ ಸ್ಮರಣೆ ಹಾಗು ಪರಿಸರ ದಿನಾಚರಣೆಯನ್ನು ನನ್ನ ಗಿಡ-ನನ್ನ ಭೂಮಿ ಸಂಸ್ಥೆಯ ವತಿಯಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಅಪೂರ್ವ ಕಾರ್ಯಕ್ರಮದಲ್ಲಿ ಅರಳಿಕಟ್ಟೆ ಆಂಜನೇಯ ಮಂದಿರ ಆವರಣದಲ್ಲಿ 100ಕ್ಕೂ ಅದಿಕ ಸಸಿಗಳನ್ನು ಏಕಕಾಲಕ್ಕೆ ನೆಡಲಾಯಿತು. ಪರಿಸರ ರಕ್ಷಣೆಯ ಜಾಗೃತಿಯ ಜೊತೆಗೆ ಆರೋಗ್ಯ ಜಾಗೃತಿ ಮೂಡಿಸುವ ಕಾರ್ಯಕ್ರಮವಾಗಿಯೂ ಈ ಸಮಾರಂಭ ಗಮನ ಸೆಳೆಯಿತು.
ಮುಖ್ಯ ಅತಿಥಿಯಾಗಿದ್ದ ಖ್ಯಾತ ಚಲನಚಿತ್ರ ನಿರ್ಮಾಪಕ ಹಾಗೂ ಪರಿಸರ ಪ್ರೇಮಿ ಬಸಂತಕುಮಾರ ಪಾಟೀಲ ಸಸಿಗಳನ್ನು ನೆಡುವ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಪರಿಸರ ಉಳಿವಿನಲ್ಲಿಯೇ ನಮ್ಮ ಉಳಿವು ಅಡಗಿದೆ, ಪರಿಸರ ರಕ್ಷಣೆ ಎಂಬುದು ದೈನಂದಿನ ಜೀವನದ ಭಾಗವಾಗಬೇಕು, ಪರಿಸರ ಪ್ರೇಮಿಗಳ ಜೀವನ ಹಾಗೂ ಪರಿಸರ ಪ್ರೇಮದಿಂದ ಸ್ಪೂರ್ತಿ ಪಡೆದು ನಾವು ಸಹ ಪರಿಸರ ಉಳಿಸುವ ಕಾರ್ಯಕ್ಕೆ ಕೈ ಜೋಡಿಸಬೇಕು ಎಂದು ಕರೆ ನೀಡಿದರು.
ಆರೋಗ್ಯ ಜಾಗೃತಿ ಮೇಲೆ ಬೆಳಕು ಚೆಲ್ಲಿದ ವೈದ್ಯ ಡಾ. ಆನಂದ ಚೌಧರಿ ಮಾತನಾಡಿ, ಮೆದಳಿಗೆ ಅನೇಕ ರೋಗಗಳು ಬಾಧಿಸುತ್ತಿವೆ, ಅದರ ಬಗ್ಗೆ ಸಮಾಜದಲ್ಲಿ ಇನ್ನು ಜಾಗೃತಿ ಬಂದಿಲ್ಲ. ಹೃದಯಾಘಾತ ಬಗ್ಗೆ ಸಾಕಷ್ಟು ಜಾಗೃತಿ ಇದೆ ಆದರೆ ಮೆದುಳಿನ ರೋಗಗಳಲ್ಲಿ ಕೆಲವು ಎಮರ್ಜೆನ್ಸಿ ರೋಗಗಳಾದ ಸ್ಟ್ರೋಕ್, ಮೆದುಳು ಜ್ವರ, ಲಕ್ವಾ ಬಗ್ಗೆ ಇನ್ನು ಜಾಗೃತಿ ಇಲ್ಲ, ಇವುಗಳನ್ನು ಅಲಕ್ಷಿಸಿದರೆ ಅಪಾಯ ತಪ್ಪಿದ್ದಲ್ಲ, ಮೆದುಳು ಎನ್ನುವುದು ಮನುಷ್ಯನ ದೇಹದ ಮಾಸ್ಟರ್ ಕೀ ಇದ್ದಂತೆ, ಹೃದಯ, ಉಸಿರಾಟ, ಕಿಡ್ನಿ ಎಲ್ಲವನ್ನು ಕಂಟ್ರೋಲ್ ಮಾಡುವುದೇ ಮೆದುಳು, ಹೀಗಾಗಿ ಹೃದಯದ ಬಗ್ಗೆ ಕಾಳಜಿ ಮಾಡಿದಂತೆ ಮೆದುಳಿನ ಕಾಳಜಿಯೂ ಮಾಡಬೇಕು, ಮೆದುಳಿಗೆ ಸಂಬಂಧಿಸಿದ ರೋಗಗಳ ಬಗ್ಗೆ ಜಾಗೃತಿ ವಹಿಸುವುದು ಅವಶ್ಯಕ ಎಂದು ಕಿವಿಮಾತು ಹೇಳಿದರು.
ಯುವ ಭಾರತ ಸಂಸ್ಥಾಪಕ ಅಧ್ಯಕ್ಷ ಉಮೇಶ ಕಾರಜೋಳ ಮಾತನಾಡಿ, ಪರಿಸರ ದಿನಾಚರಣೆ ಒಂದು ದಿನಕ್ಕೆ ಸೀಮಿತವಾಗಬಾರದು, ಪ್ರತಿದಿನವೂ ಪರಿಸರ ದಿನವಾಗಿರಬೇಕು ಎಂದು ಕರೆ ನೀಡಿದರು.
ಸಂಘದ ಅಧ್ಯಕ್ಷರಾದ ಬಸವರಾಜ ಬೈಚಬಾಳ
ಮೇಯರ್ ಎಂ.ಎಸ್. ಕರಡಿ,ಎನ್ ಡಿ ಪಾಟೀಲ ಯುವಜನ ಸೇವಾ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ದೈವಾಡಿ, ಡಾ.ಬಸವರಾಜ ಬಡದಾಳ, ಬಸವರಾಜ ಯಾದವಾಡ, ಚಿದಾನಂದ ಔರಂಗಬಾದ, ಗಿರೀಶ ಪಾಟೀಲ, ರವಿ ಬಿರಾದಾರ, ಸಂತೋಷ ಅಜೂರ್, ಮಂಜುನಾಥ ಆಸಂಗಿ, ಕಿರಣ ಉಳ್ಳಾಗಡ್ಡಿ, ವಿರೇಶ ಮುದಕಾಮಠ, ಸಿದ್ದು ಕರಲಗಿ, ಆನಂದ ಅಥಣಿ ಪಾಲ್ಗೊಂಡಿದ್ದರು.

