ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸೈನಿಕ ಶಾಲೆ ಬಿಜಾಪುರದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಸೈನಿಕ ಶಾಲೆಯ ಮುಖ್ಯ ದ್ವಾರದ ಬಳಿ ವಿಶಾಲವಾದ ಪ್ರದೇಶದಲ್ಲಿ ದಿನಾಂಕ 5ನೇ ಜೂನ್ 2026, ಶುಕ್ರವಾರ ರಂದು ವಿಶ್ವ ಪರಿಸರ ದಿನಾಚರಣೆಯ ನಿಮಿತ್ಯ ಹಸಿರೀಕರಣ ಮಾಡುವ ಮೂಲ ಉದ್ದೇಶದಿಂದ ಶಾಲೆಯ ಮುಖ್ಯ ದ್ವಾರದ ವಿಶಾಲವಾದ ಪ್ರದೇಶದಲ್ಲಿ
ವಿವಿಧ ಸಸಿಗಳನ್ನು ನೆಡಲಾಯಿತು.
ಈ ಕಾರ್ಯಕ್ರಮವನ್ನು ಶಾಲೆಯ ಪ್ರಾಚಾರ್ಯೆ ಗ್ರೂಪ್ ಕ್ಯಾಪ್ಟನ್ ರಾಜಲಕ್ಷ್ಮಿ ಪೃಥ್ವಿರಾಜ್ ರವರು ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇಂದು ವಿಶ್ವ ಪರಿಸರ ದಿನಾಚರಣೆ ಯಾಗಿದ್ದು ಪರಿಸರವನ್ನು ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ, ಹಾಗೂ ಹವಾಮಾನದ ವೈಪರೀತ್ಯಗಳ ನಿಯಂತ್ರಣಕ್ಕೆ ಒತ್ತು ನೀಡಬೇಕಾಗಿದೆ. ನಾವೆಲ್ಲರೂ ಹಸರೀಕರಣದತ್ತ ಸಂಕಲ್ಪ ಕೈಗೊಂಡು ನಾವೆಲ್ಲರೂ ಸಸಿಗಳನ್ನು ನೆಡುವುದರ ಮೂಲಕ ಅವುಗಳ ಪಾಲನೆ ಪೋಷಣೆ ಮಾಡಿ ಉತ್ತಮ ಪರಿಸರವನ್ನು ನಿರ್ಮಾಣ ಮಾಡೋಣ ಹಾಗೂ ಇವುಗಳನ್ನು ಸರಿಯಾಗಿ ಸಂರಕ್ಷಿಸಿ ಮುಂದೆ ಇವುಗಳು ಹೆಮ್ಮರಗಳಾಗಿ ಅವುಗಳು ನಮ್ಮನ್ನು ರಕ್ಷಿಸುತ್ತವೆ, ಹಸಿರೇ ನಮ್ಮ ಉಸಿರು ಎಂದು ಈ ಕಾರ್ಯಕ್ರಮದಲ್ಲಿ ಶಾಲೆಯ ಉಪ-ಪ್ರಾಚಾರ್ಯೆಯಾದ ಕಮಾಂಡರ್ ಮೀನಾ ಕುಮಾರಿ ಮತ್ತು ಶಾಲೆಯ ಆಡಳಿತಾಧಿಕಾರಿಯಾದ ಮೇಜರ್ ರಿತೇಶ್ ಕುಮಾರ್, ಶಾಲೆಯ ಶೈಕ್ಷಣಿಕ ಮತ್ತು ಆಡಳಿತ ಸಿಬ್ಬಂದಿವರ್ಗದವರು, ಎನ್.ಸಿ.ಸಿ. ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

