ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಕ್ಷೇತ್ರಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ದಿಂದ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರ ಧರ್ಮಪತ್ನಿ ಹೇಮಾವತಿ ಹೆಗ್ಗಡೆ ಅಮ್ಮನವರ ಹುಟ್ಟುಹಬ್ಬದಂಗವಾಗಿ ಗುರುವಾರ ಸಂಸ್ಥೆಯ ಫಲಾನುಭವಿಗಳಿಗೆ ಹಣ್ಣು-ಹಂಪಲ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಪ್ರಸನ್ನ ಆರ್. ಅವರು, ಆಶಾಕಿರಣವಾಗಿರುವ ಹೇಮಾವತಿ ಹೆಗ್ಗಡೆ ಅಮ್ಮನವರು ಅನೇಕ ಮಹಿಳೆಯರ ಬದುಕಿಗೆ ಜ್ಞಾನ ವಿಕಾಸ ಕಾರ್ಯಕ್ರಮದ ಮೂಲಕ ತಾಲೂಕಿನದ್ಯಂತ ವಾತ್ಸಲ್ಯ ಕಾರ್ಯಕ್ರಮದ ಅಡಿಯಲ್ಲಿ ಪ್ರತಿ ತಿಂಗಳು ಸಂಸ್ಥೆಯು ಅಸಹಾಯಕ ಹಾಗೂ ಆಶಕ್ತರಿಗೆ ತಾಲೂಕಿನಲ್ಲಿ 54 ಜನರಿಗೆ ತಲಾ ರೂ 1000/-ಹಾಗೂ ಸಿರಿ ಧಾನ್ಯದಿಂದ ತಯಾರಿಸಿರುವ ಪುಷ್ಟಿಯನ್ನು ವಿತರಣೆ ಮಾಡಲಾಗುತ್ತಿದೆ. ಈ ಮಾಶಾಸನ ಫಲಾನುಭವಿಗಳಿಗೆ ಹೇಮಾವತಿ ಅಮ್ಮನವರ ಹುಟ್ಟು ಹಬ್ಬದಂಗವಾಗಿ ಸಂಸ್ಥೆಯು ಹಣ್ಣು ಹಂಪಲಗಳನ್ನು ಅವರ ಮನೆ ಬಾಗಿಲಿಗೆ ಹೋಗಿ ತಲುಪಿಸುವ ಮೂಲಕ ಅಮ್ಮನವರ ಹುಟ್ಟುಹಬ್ಬವನ್ನು ಆಚರಿಸುವ ಜೊತೆಗೆ ಫಲಾನುಭವಿಗಳ ಆರೋಗ್ಯದ ಬಗ್ಗೆ ಹಾಗೂ ಅವರ ದೈನಂದಿನ ಚಟುವಟಿಕೆಗಳ ಬಗ್ಗೆ ವಿಚಾರಿಸಲಾಗುತ್ತಿದೆ ಎಂದರು.
ಮಾಶಾಸನ ಸದಸ್ಯರು ಅಮ್ಮನವರ ಹುಟ್ಟು ಹಬ್ಬಕ್ಕೆ ಶುಭಾಶಯಗಳು ಹಾಗೂ ಧನ್ಯವಾದಗಳನ್ನು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕ ಮಂಜುನಾಥ ಎನ್.ಎಚ್., ಜ್ಞಾನ ವಿಕಾಸದ ಸಮನ್ವಯಾಧಿಕಾರಿ ಸಂಗೀತಾ, ಸೇವಾ ಪ್ರತಿನಿಧಿಗಳಾದ ಭಾಗೀರಥಿ, ಅನ್ನಪೂರ್ಣ, ಮಹಾದೇವಮ್ಮ ಪಾಟೀಲ,ಸಂಘದ ಸದಸ್ಯರು ಇದ್ದರು.

