ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ವಿವೇಕ ಬ್ರಿಗೇಡ್ ಸಂಘಟನೆಯು ಜ್ಞಾನದಾಸೋಹಿ ಬಂಥನಾಳ ಸಂಗನಬಸವ ಶಿವಯೋಗಿಗಳ ಸ್ಮಾರಕವನ್ನು ವಿಜಯಪುರದಲ್ಲಿ ಸರ್ಕಾರ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ತಹಸೀಲ್ದಾರ ಅವರಿಗೆ ಗುರುವಾರ ಮನವಿ ಸಲ್ಲಿಸಿತು.
ಈ ಸಂದರ್ಭದಲ್ಲಿ ವಿವೇಕ ಬ್ರಿಗೇಡ್ ಸಂಘಟನೆಯ ಮುಖ್ಯಸ್ಥ ವಿನುತ ಕಲ್ಲೂರ ಮಾತನಾಡಿ, ಶೈಕ್ಷಣಿಕ ಕ್ರಾಂತಿಯ ಹರಿಕಾರ, ಅಕ್ಷರ ದಾಸೋಹಿ ಬಂಥನಾಳದ ಲಿಂಗೈಕ್ಯ ಸಂಗನಬಸವ ಶಿವಯೋಗಿಗಳು ವಿಜಯಪುರ ಜಿಲ್ಲೆಯಾದ್ಯಂತ ಶಿಕ್ಷಣ ಕ್ರಾಂತಿ ಮಾಡಿದ್ದಾರೆ. ಅಂತಹ ಮಹಾ ಪುರುಷರ ಜೀವನ ಆದರ್ಶಗಳು ನಮ್ಮ ಯುವ ಪೀಳಿಗೆಗೆ ತಿಳಿಸಲು ಹಾಗೂ ಅವರ ಸಂದೇಶ ಶಾಶ್ವತವಾಗಿ ಉಳಿಯಲು ಜಿಲ್ಲೆಯಲ್ಲಿ ಸಂಗನಬಸವ ಶಿವಯೋಗಿಗಳ ಭವ್ಯ ಸ್ಮಾರಕವಾಗಬೇಕು. ಈ ನಿಟ್ಟಿನಲ್ಲಿ ಸರಕಾರ ಚಿಂತನೆ ನಡೆಸಬೇಕು ಎಂದು ಆಗ್ರಹಿಸಿದರು. ಮನವಿ ಪತ್ರವನ್ನು ಗ್ರೇಡ್-2 ತಹಸೀಲ್ದಾರ ಎಚ್.ಎಸ್.ಅರಕೇರಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಶಿವರುದ್ರಯ್ಯ ಹಿರೇಮಠ, ಮಣಿಕಂಠ ಕಲ್ಲೂರ, ರವಿಗೌಡ ಚಿಕ್ಕೊಂಡ, ಉಮೇಶ ಅವಟಿ, ಮಲ್ಲು ಬನಾಶಿ, ಶಿವಾನಂದ ಮ್ಯಾಗೇರಿ, ಸಂಗನಗೌಡ ಪಾಟೀಲ, ಸಚೀನ ಕಲ್ಲೂರ, ಭೀಮು ಬಸ್ತಾಳ,
ಶಿವಾನಂದ ಭಟ್ಟಲ, ಶ್ರೀಶೈಲ ಕೋಲಕಾರ ಇತರರು ಇದ್ದರು.

