ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಹೃದಯ ಭಾಗದ ಬಸವೇಶ್ವರ ವೃತ್ತದ ಹತ್ತಿರ ಜೀಣೋದ್ಧಾರವಾಗುತ್ತಿರುವ ಹನುಮಾನ ದೇವಸ್ಥಾನದ ಮುಂಭಾಗ ಯೂಟ್ಯೂಬ್ ಯಶೋಧರ ತಂಡದ ಮುಖ್ಯಕಲಾವಿದ ಶಿವಪುತ್ರ ಹಾಗೂ ಅವರ ತಂಡದಿಂದ ಹನುಮ ಜಯಂತಿಯಂಗವಾಗಿ ದೇವಸ್ಥಾನಕ್ಕೆ ಆಗಮಿಸಿದ ಜನರಿಗೆ ಪ್ರಸಾದ, ಪಾನಕ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಯೂಟ್ಯೂಬ್ ಕಲಾವಿದ ಶಿವಪುತ್ರ ಮಾತನಾಡಿ, ಭಕ್ತರಿಗೆ ಬೇಡಿದ ವರವನ್ನು ನೀಡುವ ಆಂಜನೇಯ ಸ್ವಾಮಿಯ ಜಯಂತಿ ಪ್ರಯುಕ್ತ ಪ್ರಸಾದ ಸೇವೆ ಸಲ್ಲಿಸಲಾಗುತ್ತಿದೆ. ಆಂಜನೇಯ ಸ್ವಾಮಿ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದರು.
ಈ ಸಂದರ್ಭದಲ್ಲಿ ಯೂಟ್ಯೂಬ್ ಕಲಾವಿದರಾದ ಹನುಮಂತ ಯಶೋದರ, ಆನಂದ ಕಸ್ತೂರಿ, ರಾಜು ಇತರರು ಇದ್ದರು.

