ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ಆ.23 ರಂದು ವಿಜಯಪುರ ಜಿಲ್ಲೆಯಲ್ಲಿ ನಡೆಯಲಿರುವ ಸಂಗೊಳ್ಳಿ ರಾಯಣ್ಣ ಉತ್ಸವ ಕಾರ್ಯಕ್ರಮದ ಯಶಸ್ವಿ ಆಯೋಜನೆಗಾಗಿ ತಿಕೋಟಾ ತಾಲೂಕು ಮಟ್ಟದ ಪೂರ್ವಭಾವಿ ಸಭೆ ಜರುಗಿತು.
ಸಭೆಯಲ್ಲಿ ಭಾಗವಹಿಸಿದ ಮುಖಂಡರು ಉತ್ಸವದ ರೂಪುರೇಷೆಗಳು, ಕಾರ್ಯಕ್ರಮದ ಸಿದ್ಧತೆಗಳು, ಸಾರ್ವಜನಿಕರ ಭಾಗವಹಿಸುವಿಕೆ, ಶಿಸ್ತು ಹಾಗೂ ವ್ಯವಸ್ಥೆಗಳ ಕುರಿತು ಚರ್ಚಿಸಿ ಅಗತ್ಯ ಸಲಹೆಗಳನ್ನು ನೀಡಲಾಯಿತು. ಉತ್ಸವವನ್ನು ಅದ್ದೂರಿಯಾಗಿ ಹಾಗೂ ಯಶಸ್ವಿಯಾಗಿ ನಡೆಸಲು ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವಂತೆ ಕರೆ ನೀಡಲಾಯಿತು.
ರಾಯಣ್ಣರ ಶೌರ್ಯ, ಸಾಹಸ ಮತ್ತು ದೇಶಭಕ್ತಿಯನ್ನು ಸ್ಮರಿಸುವ ಈ ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಹುಲಿಜಂತಿಯ ಮಾಳಿಂಗರಾಯ ಮಹಾರಾಜರು, ಅಮೋಘಸಿದ್ದೇಶ್ವರ ದೇವಸ್ಥಾನದ ಧರ್ಮದರ್ಶಿ ಅಪ್ಪು ಒಡೆಯರ್, ಮಲ್ಲಪ್ಪ ಪೂಜಾರಿ ಗದಗಿ ಪೂಜಾರಿ, ವಿಜಯಪುರ ಜಿಲ್ಲೆಯ ರಾಯಣ್ಣ ಉತ್ಸವ ಸಮಿತಿ ಅಧ್ಯಕ್ಷರಾದ ಪ್ರಕಾಶ್ ಜಾಲಗೇರಿ, ತಿಕೋಟ ತಾಲೂಕಿನ ಹಾಲುಮತ ಸಮಾಜದ ಹಿರಿಯರಾದ ರಾಮಣ್ಣ ಮೆಂಡೆಗಾರ ವಕೀಲರು, ಮಾಜಿ ಜಿಪಂ ಸದಸ್ಯರಾದ ಸಾಬು ಮಾಶ್ಯಾಳ, ಮಾಯಪ್ಪ ಪೂಜಾರಿ, ಲೇಪು ಕೊಣ್ಣೂರ, ಭೀಮಸೇನ್ ನಾಟಕಕಾರ, ಅಪ್ಪಾಸಿ ಮಗದರಿ, ರವಿ ಡೊಂಬಳಿ, ಹನುಮಂತ ಸೋನಂದ, ಶ್ರೀಮಂತ ಬನ್ನನವರ, ಸಿದ್ದರಾಯ ಜಿಡ್ಡಿ, ಮಡ್ಡಿಸಿದ ಕುಮಟಗಿ, ರವಿ ಬಿದರಿ, ಮುತ್ತು ಲಂಗೋಟಿ, ಮುತ್ತಪ್ಪ ಪಕೀರಪ್ಪಗೋಳ, ಬಾಬು ಮೆಟ್ ಗುಡ್, ಗುರುನಾಥ ಹಂಜಗಿ, ಸುರೇಶ ಪೂಜಾರಿ, ತಿಪ್ಪಣ್ಣ ಕೊಣೊರ್, ಶಿವಾನಂದ ವಿಜಾಪುರ್, ಭೀಮು ಕುಮಟಗಿ, ತಾಲೂಕಿನ ಹಾಲುಮತ ಸಮಾಜದ ಮುಖಂಡರು ,
ಇತರರು ಇದ್ದರು. ಶಿವಾನಂದ ಹಂಜಗಿ ನಿರೂಪಿಸಿದರು
ಸುರೇಶ ಕೊಣ್ಣೂರ ಸ್ವಾಗತಿಸಿದರು, ವಾಸು ಹಂಜಗಿ ವಂದಿಸಿದರು.

