Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಆಗಸ್ಟ್ 06, 2026

ಬಸವನಾಡಿನ ಸಾಧಕ ಮಿಥುನ ಸುಸಲಾದಿ

ಬೇಡಿಕೆ ಈಡೇರಿಕೆಗೆ ಜಮಖಂಡಿಯಲ್ಲಿ ರೈತರ ಪ್ರತಿಭಟನೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಭಾವರಶ್ಮಿ»ಸ್ವಾರ್ಥ ಮಿತಿಯಲ್ಲಿರಲಿ ಗಡಿ ಮೀರದಿರಲಿ
ಭಾವರಶ್ಮಿ

ಸ್ವಾರ್ಥ ಮಿತಿಯಲ್ಲಿರಲಿ ಗಡಿ ಮೀರದಿರಲಿ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ
– ಅವಿನಾಶ ಸೆರೆಮನಿ
ಉಪನ್ಯಾಸಕರು
ಬೈಲಹೊಂಗಲ
ಜಿಲ್ಲೆ: ಬೆಳಗಾವಿ

ಉದಯರಶ್ಮಿ ದಿನಪತ್ರಿಕೆ

ಸ್ವಾರ್ಥ ಎಂದರೆ ತನ್ನ ಸ್ವಂತಿಕೆಗೆ ಪ್ರಾಮುಖ್ಯತೆ ನೀಡುವುದು, ಇತರರನ್ನು ತಿರಸ್ಕರಿಸುವುದು. ಸರಳ ಪದದಲ್ಲಿ ಸ್ವಾರ್ಥ ಎಂದರೆ ಸ್ವ ಹಿತಾಸಕ್ತಿ.
ಇದು ಮನುಜನೊಳಗೆ ಅಹಂ ಭಾವನೆ ಹುಟ್ಟು ಹಾಕುವುದಲ್ಲದೆ ತಾನೇ ಶ್ರೇಷ್ಠ ಎಂಬ ಅಸಡ್ಡೆಗೆ ಕಾರಣವಾಗುತ್ತದೆ. ಸಂಬಂಧಗಳನ್ನು ಕಳಚಿ ಒಂಟಿತನಕ್ಕೆ ದೂಡುತ್ತದೆ. ತನ್ನ ಸ್ವ ಅವಶ್ಯಕತೆಗಳನ್ನು ಪೂರೈಸಿಕೊಳ್ಳುತ್ತ ತನ್ನದೆಯಾದ ಲೋಕದಲ್ಲಿ ಮುಳುಗಿ ಸ್ವ ಪ್ರತಿಷ್ಠೆಗಾಗಿ ಹಂಬಲಿಸುತ್ತ ಇತರರನ್ನು ಕೀಳಾಗಿ ನೋಡಲು ಆರಂಭಿಸುತ್ತಾನೆ. ತನ್ನನ್ನೇ ತಾನು ಪ್ರೀತಿಸುತ್ತ, ಕಾಳಜಿ ವಹಿಸುತ್ತ, ಸ್ವ ಲಾಭದತ್ತ ಒಲವು ತೋರುವುದು. ಸ್ವಯಂ ಪ್ರೀತಿ ಮತ್ತು ಪರಾನುಭೂತಿಯನ್ನು ಬೆಳೆಸಿಕೊಳ್ಳಬೇಕು


ಸ್ವಾರ್ಥ ಇರಲೇಬಾರದಂತಲ್ಲ ಕೆಲವು ಸಂದಿಗ್ನ ಮತ್ತು ಕಠಿಣ ಪರಿಸ್ಥಿತಿಯ ಸಂದರ್ಭದಲ್ಲಿ ಸ್ವಾರ್ಥವು ಅತಿಮುಖ್ಯ ಪಾತ್ರವನ್ನು ವಹಿಸುತ್ತದೆ. ಆಯಾ ಸನ್ನಿವೇಶದಲ್ಲಿ ಸ್ವಾರ್ಥವನ್ನು ಅವಲಂಬಿಸಲೇಬೇಕಾಗುತ್ತದೆ. ಇಲ್ಲದಿರೆ ಜೀವಕ್ಕೆ ಕುತ್ತು ಎದುರಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಉದಾಹರಣೆ ಅನಾರೋಗ್ಯದ ಸಂದರ್ಭದಲ್ಲಿ ನಮ್ಮ ಆರೋಗ್ಯದ ಬಗ್ಗೆ ನಾವೇ ಕಾಳಜಿ ವಹಿಸಲೇಬೇಕು. ಇದು ಅನಿವಾರ್ಯ, ನಾವೇ ನಮ್ಮ ಆರೋಗ್ಯದ ರಕ್ಷಕರು ಹೊರತು ಇತರರಲ್ಲ.
ಸ್ವಾರ್ಥದ ಪ್ರಯೋಜನಗಳು

  1. ನಾವು ಅಂದುಕೊಂಡ ಗುರಿಯನ್ನು ಸಾಧಿಸಲು ಬಹುಮುಖ್ಯ.
  2. ಮನುಜನ ಒತ್ತಡ ಕಡಿಮೆ ಮಾಡುವಲ್ಲಿ ಸಹಕಾರಿ.
  3. ಕೆಲವೊಮ್ಮೆ ಆರೋಗ್ಯಕರ ಸಂಬಂಧಗಳು ಬೆಸೆಯಲು ಕಾರಣವಾಗಬಹುದು.
  4. ಸಂದರ್ಭ ಸನ್ನಿವೇಶಗಳನ್ನು ನಿಭಾಯಿಸಲು ನೇರವಾಗಬಹುದು.
  5. ಬದುಕಿನಲ್ಲಿ ಸಾಧನೆಯ ಶಿಖರವನ್ನು ತಲುಪಲು ಪ್ರೇರಕವಾಗಬಹುದು.
  6. ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸೂಕ್ತವಾಗುತ್ತದೆ.
  7. ಸ್ವಯಂ ಬೆಳವಣಿಗೆಗೆ ಸಹಾಯವಾಗುತ್ತದೆ.
    ಸ್ವಾರ್ಥದ ಅನಾನುಕೂಲಗಳು
  8. ಸಂಬಂಧಗಳಲ್ಲಿ ಬಿರುಕು ಮೂಡಿಸಿ ಬಾಂಧವ್ಯ ಕಳಚುತ್ತದೆ.
  9. ಮನುಜನ ಏಕಾಂಗಿತನಕ್ಕೆ ಕಾರಣವಾಗುತ್ತದೆ.
  10. ಸಂತೋಷವನ್ನು ಕಬಳಿಸಿ ದುಃಖದ ಸಾಗರದಲ್ಲಿ ತೇಲಿಸಬಹುದು
  11. ಜೀವನದ ಏಳಿಗೆಗೆ ಮಾರಕವಾಗಬಹುದು
  12. ಮಾನಸಿಕವಾಗಿ ದೈಹಿಕವಾಗಿ ಕುಗ್ಗಿ ಶೂನ್ಯ ಭಾವವು ಆವರಿಸುತ್ತದೆ.
  13. ನಾನೇ ಎಲ್ಲರಿಗಿಂತ ಶ್ರೇಷ್ಠ ಇತರರೂ ಕನಿಷ್ಠ ಎಂಬ ಅಹಂಕಾರ ದ್ವಿಗುಣಗೊಳ್ಳಬಹುದು.
  14. ಸಮಾಜದಲ್ಲಿ ಯಾರು ಗೌರವ ಕೊಡದೆ ನಿರ್ಲಕ್ಷಿಸಬಹುದು.
    ಹೀಗೆ ಸ್ವಾರ್ಥವು ಮಿತಿಯಲ್ಲಿರಬೇಕು ಆದರೆ ಅತಿಯಾದರೆ ಮುಳುವಾಗುವುದು ನಿಶ್ಚಿತ. ಇದು ಮಾನವನ ಸಹಜ ಪ್ರಕ್ರಿಯೆ. ಹಾಗಂತ ಗಡಿಯನ್ನು ಮೀರಬಾರದು. ಸಕಾರಾತ್ಮಕ ನಕಾರಾತ್ಮಕ ಪ್ರಭಾವ ಬೀರುವುದರಿಂದ ಸಮತೋಲಿತವಾಗಿ ನಿಯಂತ್ರಿಸುವುದು ಮನುಜನ ಮೇಲೆ ನಿರ್ಧರಿತವಾಗುತ್ತದೆ. ಒಟ್ಟಾರೆಯಾಗಿ ಸ್ವಾರ್ಥವು ಜೀವಕ್ಕೆ ಕುತ್ತಾಗದಿರಲಿ, ಜೀವನಕ್ಕೆ ಮಾರಕವಾಗದಿರಲಿ, ಆದರೆ ಸ್ಥಿಮಿತತೆಯಲ್ಲಿರಲಿ. ಸುಂದರ ಬದುಕಿಗೆ ಬೆಳಕಾಗಲಿ ಹೊರತು ಕತ್ತಲೆಗೆ ದಾರಿ ತೋರದಿರಲಿ..
BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಆಗಸ್ಟ್ 06, 2026

ಬಸವನಾಡಿನ ಸಾಧಕ ಮಿಥುನ ಸುಸಲಾದಿ

ಬೇಡಿಕೆ ಈಡೇರಿಕೆಗೆ ಜಮಖಂಡಿಯಲ್ಲಿ ರೈತರ ಪ್ರತಿಭಟನೆ

5E ಮಾದರಿ ಪಾಠ ಯೋಜನೆ ಕಾರ್ಯಗಾರಕ್ಕೆ ಚಾಲನೆ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಆಗಸ್ಟ್ 06, 2026
    In ದಿನಪತ್ರಿಕೆ
  • ಬಸವನಾಡಿನ ಸಾಧಕ ಮಿಥುನ ಸುಸಲಾದಿ
    In (ರಾಜ್ಯ ) ಜಿಲ್ಲೆ
  • ಬೇಡಿಕೆ ಈಡೇರಿಕೆಗೆ ಜಮಖಂಡಿಯಲ್ಲಿ ರೈತರ ಪ್ರತಿಭಟನೆ
    In (ರಾಜ್ಯ ) ಜಿಲ್ಲೆ
  • 5E ಮಾದರಿ ಪಾಠ ಯೋಜನೆ ಕಾರ್ಯಗಾರಕ್ಕೆ ಚಾಲನೆ
    In (ರಾಜ್ಯ ) ಜಿಲ್ಲೆ
  • ಗೋವುಗಳ ಸಾಗಾಟಕ್ಕೆ ತಡೆ: ವಾಹನ ವಶಕ್ಕೆ ಪಡೆದ ಪೊಲೀಸರು
    In (ರಾಜ್ಯ ) ಜಿಲ್ಲೆ
  • ರಾಜೀನಾಮೆ ಹಿಂಪಡೆದ ಶಾಸಕ ಯಶವಂತರಾಯಗೌಡ
    In (ರಾಜ್ಯ ) ಜಿಲ್ಲೆ
  • ದಲಿತರ ಮೇಲಿನ ದೌರ್ಜನ್ಯ ತಡೆಯಲು ಅಪ್ಪುರಾಜ್ ಆಗ್ರಹ
    In (ರಾಜ್ಯ ) ಜಿಲ್ಲೆ
  • ಆ.೮ ರಂದು ವಿಜಯಪುರದಲ್ಲಿ ಕ್ರಿಯೋಸ್ಫಿಯರ್ ಶೃಂಗಸಭೆ
    In (ರಾಜ್ಯ ) ಜಿಲ್ಲೆ
  • ನಿಡಗುಂದಿ ತಾಲ್ಲೂಕಿನ ಶಾಲೆಗಳಿಗೆ ೧೫,೦೦೦ ನೋಟ್‌ಬುಕ್ ವಿತರಣೆ
    In (ರಾಜ್ಯ ) ಜಿಲ್ಲೆ
  • ಅಂಗನವಾಡಿಗಳಲ್ಲಿ ಕ್ಷೀಣಿಸುತ್ತಿರುವ ಮಕ್ಕಳ ಸಂಖ್ಯೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.