ಇಂದು (ಜನೇವರಿ ೩೦) “ಹುತಾತ್ಮ ದಿನ” ಪ್ರಯುಕ್ತ ಈ ವಿಶೇಷ ಲೇಖನ
ಲೇಖನ
– ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)
ವಿಜಯಪುರ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ಮಹಾತ್ಮಾ ಗಾಂಧೀಜಿ ಅವರು, “ಆeಚಿಣh is ಚಿಣ ಚಿಟಿಥಿ ಣime bಟesseಜ buಣ iಣ is ಣತಿiಛಿe bಟesseಜ ಜಿoಡಿ ಚಿ ತಿಚಿಡಿಡಿioಡಿ ತಿho ಜies his ಛಿಚಿuse, ಣhಚಿಣ is ಣಡಿuಣh” ಎಂದು ಹೇಳಿದ್ದಾರೆ. ಸತ್ಯ, ಶಾಂತಿ, ಉಪವಾಸ, ಅಹಿಂಸೆ, ತ್ಯಾಗ ಮತ್ತು ಬಲಿದಾನಗಳೆಂಬ ಮೂಲ ಮಂತ್ರವನ್ನೇ ತನ್ನ ಉಸಿರಾಗಿಸಿಕೊಂಡು ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿ ಕೊಡುವಲ್ಲಿ ಅಮೂಲ್ಯ ಪಾತ್ರ ವಹಿಸಿದವರು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು.

ಬ್ರಿಟಿಷರ ಕಪಿಮುಷ್ಠಿಯಿಂದ ದೇಶವನ್ನು ಸರ್ವತಂತ್ರ ಸ್ವತಂತ್ರಗೊಳಿಸಲು ಅನೇಕ ಹೋರಾಟಗಾರದು, ಮಹಾನ್ ನಾಯಕರು ಮತ್ತು ಕ್ರಾಂತಿಕಾರಿ ದೇಶಭಕ್ತರು ಹೋರಾಡಿದ್ದರ ಫಲಪ್ರದವಾಗಿ ಸ್ವಾತಂತ್ರ್ಯ ದೊರಕಿದೆ. ದೇಶಕ್ಕಾಗಿ ಹೋರಾಡಿ ಪ್ರಾಣ ತ್ಯಾಗ ಮಾಡಿದ ಮತ್ತು ವೀರ ಮರಣವನ್ನಪ್ಪಿದ ಯೋಧರು ಮತ್ತು ಹೋರಾಟಗಾರರನ್ನು ಸ್ಮರಿಸುವ ದಿನವೇ ಈ ಹುತಾತ್ಮ ದಿನವಾಗಿದೆ. ಈ ದಿನಕ್ಕೆ ಶಹೀದ್ ದಿವಸ ಅಥವ ಸರ್ವೋದಯ ದಿನವೆಂತಲೂ ಕರೆಯಲಾಗುತ್ತದೆ. ಅದರಲ್ಲೂ ವಿಶೇಷವಾಗಿ ನಮ್ಮ ರಾಷ್ಟ್ರಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಪಾತ್ರವು ಅಮೂಲ್ಯವಾದುದು. ೧೯೪೮ ಇಸ್ವಿ ಜನೇವರಿ ೩೦ ರಂದು ಮಹಾತ್ಮಾ ಗಾಂಧೀಜಿಯವರು ಹತ್ಯೆಗೀಡಾದರು. ಅವರ ಸ್ಮರಣಾರ್ಥವಾಗಿ ಇಡೀ ದೇಶದಾದ್ಯಂತ ದೇಶಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದವರ ಶೌರ್ಯ ಮತ್ತು ಪರಾಕ್ರಮವನ್ನು ನೆನಪಿಸುವ ಉದ್ಧೇಶದಿಂದ ಪ್ರತಿವರ್ಷ ಜನೇವರಿ ೩೦ ರಂದು ‘ಹುತಾತ್ಮ ದಿನ’ ವನ್ನು ಆಚರಿಸಲಾಗುತ್ತಿದೆ.
೧೯೪೯ ರಲ್ಲಿ ಭಾರತ ಸರ್ಕಾರವು ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು, ಅಪಾರ ಕೊಡುಗೆ ನೀಡಿದ ಗಾಂಧೀಜಿಯವರ ಮರಣ ದಿನದಂದು ‘ಹುತಾತ್ಮ ದಿನ’ವೆಂದು ಆಚರಿಸುವುದರ ಮೂಲಕ ಅವರು ಕೊಡುಗೆಗಳನ್ನು ಸ್ಮರಿಸಲಾಗುತ್ತಿದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅಂಖ್ಯಾತ ಸೈನಿಕರು, ಹೋರಾಟಗಾರು ಮತ್ತು ಜನ ಸಾಮಾನ್ಯರು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿ ಹುತಾತ್ಮರಾಗಿದ್ದಾರೆ. ಮಹಾತ್ಮಾ ಗಾಂಧೀಜಿಯವರು ನಮ್ಮನಗಲಿದ ದಿನ ಮತ್ತು ಅನೇಕ ವೀರ ಯೋಧರ ಧೈರ್ಯ, ತ್ಯಾಗ ಮತ್ತು ದೇಶಭಕ್ತಿಯ ಮಹತ್ವವನ್ನು ತಿಳಿಸಲು ಮತ್ತು ಅವರಿಗೆ ಗೌರವ ವಂದನೆ ಸಲ್ಲಿಸಲು ಈ ದಿನವನ್ನು ಆಚರಿಸುವುದು ಮುಖ್ಯ ಉದ್ಧೇಶವಾಗಿದೆ.
ಅಹಿಂಸೆ ಮತ್ತು ಶಾಂತಿ ಎಂಬ ಅಸ್ತçದಿಂದಲೇ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಮಹಾತ್ಮಾ ಗಾಂಧೀಜಿಯವರ ತತ್ವ-ಸಿದ್ದಾಂತ, ಜೀವನ-ಮೌಲ್ಯ, ರಾಷ್ಟ್ರಾಭಿಮಾನ ಮತ್ತು ಕೊಡುಗೆಗಳನ್ನು ಸ್ಮರಿಸುವ ಜತೆಗೆ ಅವರು ಬದುಕು ನಮಗೆಲ್ಲ ಆದರ್ಶಪ್ರಾಯವಾಗಬೇಕು. ಗಾಂಧೀಜಿಯವರ ದೇಶ ಸೇವೆಯ ಸಂದೇಶ ಮತ್ತು ವಿಚಾರಧಾರೆಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಂದಾಗ ಮಾತ್ರ ದಿನದ ಆಚರಣೆಯು ನಿಜಕ್ಕೂ ಅರ್ಥಪೂರ್ಣವಾಗವುದೆಂಬುದೇ ನನ್ನ ಆಶಯ.


