ಉದಯರಶ್ಮಿ ದಿನಪತ್ರಿಕೆ
ಇಂಡಿ: ಮರಗೂರದ ಭೀಮಾಶಂಕರ ಕಾರ್ಖಾನೆಗೆ ಕೃಷಿ ಉಪ ನಿರ್ದೇಶಕ ಚಂದ್ರಕಾಂತ ಪವಾರ ನೇತೃತ್ವದ ಕಬ್ಬು ಪರಿಶೀಲನಾ ಸಮಿತಿ ಗುರುವಾರ ಭೇಟಿ ನೀಡಿತು.
ಕಬ್ಬಿನ ತೂಕ, ಮಷಿನ ಮತ್ತು ಇಳುವರಿ ಪರಿಶೀಲಿಸಿತು. ಕಬ್ಬಿನ ತೂಕದ ಮಷೀನು ಡಿಜಿಟಲ್ ಮತ್ತು ಎರಡು ತೂಕದ ಮಷಿನ್ ಇರುವದನ್ನು ಪರಿಶೀಲಿಸಿತು.
ಅದರಂತೆ ಕಬ್ಬಿನ ರಿಕವರಿ ರೈತರ ಸಮ್ಮುಖದಲ್ಲಿ ಪ್ರಯೋಗಾಲಯದಲ್ಲಿ ಖಚಿತ ಪಡಿಸಿಕೊಂಡಿತು.
ಅದಲ್ಲದೆ ರೈತರಿಗೆ ಕಬ್ಬಿನ ತೂಕದ ಪಾವತಿ ವಿತರಣೆ ಯಾಗುತ್ತಿರುವ ಬಗ್ಗೆ ಪರಿಶೀಲಿಸಿದರು. ರೈತರಿಗೆ ತೂಕದಲ್ಲಿ ಯಾವದೇ ರೀತಿಯ ವ್ಯತ್ಯಾಸ ಆಗದಂತೆ ನೋಡಿಕೊಳ್ಳಲು ಕಾರ್ಖಾನೆ ಸಿಬ್ಬಂದಿಗೆ ಸೂಚಿಸಿತು. ಕಬ್ಬಿನ ಹಣ ನೀಡುವದನ್ನು ಸಮಿತಿ ಖಚಿತ ಪಡಿಸಿಕೊಂಡಿತು.
ಕೃಷಿ ಉಪ ನಿರ್ದೇಶಕ ಚಂದ್ರಕಾಂತ ಪವಾರ, ಆಹಾರ ನೀರಿಕ್ಷಕ ಎಸ್.ಎಸ್.ಕೋಳಿ, ಅಬಕಾರಿ ಅಧಿಕಾರಿ ಎನ್.ಎಚ್.ಹೂಗಾರ, ಪಿ.ಎಸ್.ಐ ಎಸ್.ಬಿ.ನವೀನಕೊರೆ, ತೂಕ ಮತ್ತು ಅಳತೆ ಅಧಿಕಾರಿ ರೇಣುಕಾ ಪಟ್ಟಣಶೆಟ್ಟಿ ರೈತ ಮುಖಂಡರಾದ ವಂಸತ ಭೈರಾಮಡಗಿ, ಜೆ.ಸಿ.ಬಿರಾದಾರ ಸೇರಿದಂತೆ ಮತ್ತಿತರರಿದ್ದರು.

