ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಫೆ.೧ ರಂದು ಬೆಳಿಗ್ಗೆ ೯ಗಂಟೆಗೆ ವಿದ್ಯಾನಗರದ ಸಿಬಿಎಸ್ ಶಾಲೆಯ ಬಳಿ ಗುರು ಕೊಟ್ಟೂರೇಶ್ವರ ದೇವಸ್ಥಾನದ ನೂತನ ಶಿಲಾಮಠ ಭೂಮಿ ಪೂಜಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದ್ದು ತಾಲೂಕಿನ ಎಲ್ಲ ಸದ್ಭಕ್ತರು ಆಗಮಿಸಿ ಸಲಹೆ ಸಹಕಾರವನ್ನು ನೀಡಬೇಕು ಎಂದು ನಿವೃತ್ತ ಶಿಕ್ಷಕ ಕೆ.ಪಿ.ಹಿರೇಮಠ ಅವರು ಹೇಳಿದರು.
ಪಟ್ಟಣದ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದ ಬಳಿ ಇರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಿ ಅವರು ಮಾತನಾಡಿದರು.
ಗುರು ಕೊಟ್ಟೂರೇಶ್ವರ ಗ್ರಾಮೀಣ ವಿವಿದೋದ್ದೇಶಗಳ ವಿದ್ಯಾಪ್ರಸಾರ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಈ ಸಮಾರಂಭದ ದಿವ್ಯ ಸಾನಿಧ್ಯವನ್ನು ಕುಂಟೋಜಿ ಭಾವೈಕ್ಯತಾ ಮಠದ ಡಾ.ಚನ್ನವೀರ ಶಿವಾಚಾರ್ಯರು, ಗುಂಡಕನಾಳದ ಗುರುಲಿಂಗ ಶಿವಾಚಾರ್ಯರು, ಇಟಗಿಯ ಗುರುಶಾಂತವೀರ ಶಿವಾಚಾರ್ಯರು, ಸಿದ್ದನಕೊಳ್ಳದ ಶಿವಕುಮಾರ ಮಹಾಸ್ವಾಮಿಗಳು, ಜೀರಲಭಾವಿಯ ಆನಂದಯ್ಯ ಮಹಾಸ್ವಾಮಿಗಳು, ಗುಡುದುರದ ನೀಲಕಂಠ ಶಿವಾಚಾರ್ಯರು ಸಜ್ಜಲಗುಡ್ಡದ ದೊಡ್ಡಬಸವಾಚಾರ್ಯರು ವಹಿಸಲಿದ್ದು, ವಿಜಯಲಕ್ಷ್ಮಿ ಹಿರೇಮಠ ಅಧ್ಯಕ್ಷತೆ ವಹಿಸುವರು. ಶಾಸಕ ಸಿ.ಎಸ್.ನಾಡಗೌಡ ಉದ್ಘಾಟಿಸಲಿದ್ದು ಮುಖ್ಯ ಅತಿಥಿಗಳಿಗಾಗಿ ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷರಾದ ಪ್ರಭುಗೌಡ ದೇಸಾಯಿ, ಹಿರಿಯ ಸಾಹಿತಿ ಬಿ.ಎಂ.ಹಿರೇಮಠ ಸೇರಿದಂತೆ ಹಲವು ಗಣ್ಯರು ಭಾಗಿಯಾಗುವರು. ತಾಲೂಕಿನ ಎಲ್ಲ ಸದ್ಭಕ್ತರು ಭಾಗಿಯಾಗಿ ಕೊಟ್ಟೂರೇಶ್ವರರ ಕೃಪೆಗೆ ಪಾತ್ರರಾಗುವಂತೆ ಮನವಿ ಮಾಡಿಕೊಂಡರು.
ಹೋರಾಟಗಾರ ಬಸಯ್ಯ ನಂದಿಕೇಶ್ವರಮಠ ಮಾತನಾಡಿ, ಊರಿಗೆ ಕೀರ್ತಿ ಬರಲು ದೇವಸ್ಥಾನಗಳು ಕಾರಣ. ಕೆ.ಪಿ.ಹಿರೇಮಠ ಗುರುಗಳು ಇಲ್ಲಿನ ವಿಬಿಸಿ ಹೈಸ್ಕೂಲ್ ನಲ್ಲಿರುವ ಬನ್ನಿಮಹಾಂಕಾಳಿ ದೇವಸ್ಥಾನವನ್ನು ಪ್ರತೀ ವರ್ಷ ನವರಾತ್ರಿಯಲ್ಲಿ ವಿಜ್ರಂಭಣೆಯಿಂದ ಕಾರ್ಯಕ್ರಮಗಳನ್ನು ನಡೆಯುವಂತೆ ದೊಡ್ಡ ಪ್ರಮಾಣದಲ್ಲಿ ತಮ್ಮ ಪರಿವಾರವನ್ನು ಜೊತೆಗೂಡಿಸಿಕೊಂಡು ಬೆಳೆಸಿದ್ದಾರೆ. ಸಧ್ಯ ಕೊಟ್ಟೂರೇಶ್ವರ ದೇವಸ್ಥಾನವನ್ನು ಕಟ್ಟುವ ಸಂಕಲ್ಪ ಮಾಡಿದ್ದು ಈ ಭಾಗದ ಭಕ್ತರಿಗೆ ಅನುಕೂಲವಾಗಲಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಂ.ಬಿ.ನಾವದಗಿ, ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ ಮಾತನಾಡಿದರು. ಪು.ಸದಸ್ಯೆ ಸಹನಾ ಬಡಿಗೇರ, ದೇವಸ್ಥಾನದ ಸಲಹಾ ಸಮಿತಿಯವರಾದ ಪ್ರಭುರಾಜ ಕಲಬುರ್ಗಿ, ದಾನಯ್ಯ ಹಿರೇಮಠ, ಬಾಬು ಬಿರಾದಾರ, ಸುರೇಶಗೌಡ ಪಾಟೀಲ, ಪ್ರಮುಖರಾದ ಡಾ.ಸಿ.ಕೆ.ಶಿವಯೋಗಿಮಠ, ಮಹಾಂತೇಶ ಬೂದಿಹಾಳಮಠ, ಅಭಿಷೇಕ ಹಿರೇಮಠ ಸೇರಿದಂತೆ ಹಲವರು ಇದ್ದರು.

