ಉದಯರಶ್ಮಿ ದಿನಪತ್ರಿಕೆ
ಇಂಡಿ: ನಗರದ ಆದರ್ಶ ವಿದ್ಯಾಲಯಕ್ಕೆ ೬ ನೇ ತರಗತಿಗೆ ೨೦೨೬-೨೭ ನೇ ಸಾಲಿನ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ಅರ್ಜಿಗಳನ್ನು ಅಹ್ವಾನಿಸಲಾಗಿದೆ ಎಂದು ಪ್ರಾಚಾರ್ಯ ಎಸ್.ಜಿ.ಬನಸೋಡೆ ತಿಳಿಸಿದ್ದಾರೆ.
ಆನ್ ಲೈನ್ ಅರ್ಜಿ ಪ್ರಾರಂಭ ಜ. ೨೩ ರಂದು, ಆನ್ ಲೈನ್ ಅರ್ಜಿ ಮುಕ್ತಾಯದ ದಿನ ೨೫ ಫೆ , ಪ್ರವೇಶ ಪರೀಕ್ಷೆ ದಿನಾಂಕ ಮಾರ್ಚ ೧೫, ಹಾಲ್ ಟಿಕೇಟ್ ಡೌನಲೋಡ ಮಾರ್ಚ ೧, ಫಲಿತಾಂಶ ಏಪ್ರೀಲ ೧೦ ರಂದು ಜರುಗಲಿವೆ.
ಅರ್ಜಿ ಸಲ್ಲಿಸಲು ಮಗುವಿನ ಫೋಟೋ, ಪಾಲಕರ ಫೋನ್ ನಂ, ೫ ನೇ ತರಗತಿ ಶಾಲಾ ಮುಖ್ಯೋಪಾಧ್ಯಾಯರ ಫೋನ್ ನಂ, ಮಗುವಿನ ಎಸ್.ಎ.ಟಿ.ಎಸ್ ನಂಬರ, ಮಗುವಿನ ಜಾತಿ ಆದಾಯ ಪ್ರಮಾಣ ಪತ್ರ, ಮಗುವಿನ ಆಧಾರ ಕಾರ್ಡ, ವಿದ್ಯಾರ್ಥಿಯು ೫ ನೇ ತರಗತಿಯನ್ನು ಓದುತ್ತಿರುವ ಶಾಲೆಯ ತಾಲೂಕು ಮತ್ತು ಆದರ್ಶ ಶಾಲೆ ತಾಲೂಕು ವಿಭಿನ್ನವಾಗಿದ್ದರೆ ವಾಸಸ್ಥಳ, ಡೋಮಿಸೈಲ ಪ್ರಮಾಣ ಪತ್ರ ತರಬೇಕು ಎಂದು ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
