ಉದಯರಶ್ಮಿ ದಿನಪತ್ರಿಕೆ
ಚಡಚಣ: ತಾಲೂಕಿನ ಧೂಳಖೇಡ ಗ್ರಾಮದ ವಿಜಯಪುರ -ಸೋಲಾಪುರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಶಿವಾನಂದ ಪಾಟೀಲ ಅವರಿಗೆ ಸೇರಿದ ರಸಗೊಬ್ಬರ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ, ಅಪಾರ ಮೌಲ್ಯದ ಗೊಬ್ಬರ , ಔಷಧಿ ಮತ್ತು ಕೃಷಿ ಉತ್ಪನ್ನಗಳು ಬೆಂಕಿ ಅವಘಡದಲ್ಲಿ ಕೊಟ್ಯಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಹಾನಿಯಾಗಿದೆ ಎಂದು ತಿಳಿದು ಬಂದಿದೆ. ಹಾನಿಯಾಗಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.
ರಸಗೊಬ್ಬರ ಗೋಡವಾನಕ್ಕೆ ಹತ್ತಿದ ಬೆಂಕಿ ಕಾಣಿಸಿಕೊಂಡಿದ್ದರಿಂದ ಸುತ್ತಲಿನ ಸಾರ್ವಜನಿಕರು ಬೆಂಕಿ ನಂದಿಸಲು ಶ್ರಮಿಸಿದ್ದರೂ, ಆದರೂ ಬೆಂಕಿಯ ತೀವ್ರತೆ ಹೆಚ್ಚಾಗುತ್ತಿದ್ದಂತೆ ಸ್ಥಳಕ್ಕೆ ಇಂಡಿ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಬೆಂಕಿ ಸಂಪೂರ್ಣ ನಂದಿಸುವಲ್ಲಿ ಯಶಸ್ವಿಯಾದರು.
ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಪ್ರಾಥಮಿಕ ತನಿಖೆಯಲ್ಲಿ ವಿದ್ಯುತ್ ಶಾರ್ಟಸರ್ಕೀಟ್ ನಿಂದ ಬೆಂಕಿ ತಗುಲಿರಬಹುದು ಎಂದು ಶಂಕಿಸಲಾಗಿದೆ.
ಪತ್ರಕರ್ತರೊಂದಿಗೆ ಮಾತನಾಡಿದ ರಸಗೊಬ್ಬರ ಅಂಗಡಿಯ ಮಾಲಿಕ ಶಿವಾನಂದ ಪಾಟೀಲ, ಅಂಗಡಿಗೆ ಶಾರ್ಟಸರರ್ಕೀಟ್ ನಿಂದ ಬೆಂಕಿ ತಗುಲಿದ್ದರಿಂದ ಗೊಡ್ವಾನನಲ್ಲಿ ಇಟ್ಟಿದ್ದ ಸುಮಾರು 2 ಕೋಟಿಗೂ ಅಧಿಕ ರೂಪಾಯಿಯ ಮೌಲ್ಯದ ರಸಗೊಬ್ಬರ, ಕೀಟನಾಶಕ ಔಷಧಿ ಹಾನಿಯಾಗಿದೆ ಎಂದು ಹೇಳಿದರು.
ಈ ಕುರಿತು ಝಳಕಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

